ಮಹಾರಾಷ್ಟ್ರ : ರಾಜ್ಯದಲ್ಲಿ  ಹಿಜಾಬ್‌ ದಂಗಲ್‌  ಭಾರೀ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಇದೀಗ ಇಲ್ಲೊಂದೆಡೆ ಹಿಜಾಬ್​ ಧರಿಸಿ ವ್ಯಾಯಾಮ ಮಾಡಲು ಇಚ್ಛಿಸುವವರಿಗೆ ಮಹಿಳೆಯರ ತಂಡ ಜಿಮ್​ ಓಪನ್​ ಮಾಡಿದೆ.  ಇಲ್ಲಿ ಮಹಿಳೆಯರಿಗೆ ವ್ಯಾಯಾಮದ ಜೊತೆನೇ ಹಿಜಾಬ್​ ಸಂಪ್ರದಾಯಕ್ಕೆ ಬದ್ಧವಾಗಿರಲು ಸಹಾಯವನ್ನೂ ಮಾಡುತ್ತಿದ್ದಾರೆ.

BIGG NEWS: ಪ್ರಯಾಣಿಕರಿಗೆ ಬಿಗ್‌ ಶಾಕ್‌; ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ| Platform Ticket

ಹೌದು, ಇಲ್ಲಿನ ಮುಸ್ಲಿಂ ಪ್ರದೇಶವಾದ ಖಡಕ್‌ನಲ್ಲಿ ಮೂವರು ಮಹಿಳೆಯರು ಒಟ್ಟಾಗಿ ಸೇರಿ ಬಜೆಟ್ ಸ್ನೇಹಿ ಜಿಮ್ ಕೇಂದ್ರವನ್ನು ನಡೆಸುತ್ತಿದ್ದಾರೆ. ಈ ಪ್ರದೇಶದ ಮಹಿಳೆಯರಿಗೆ ತಮ್ಮ ಫಿಟ್‌ನೆಸ್ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಹಿಜಾಬ್​ ಸಂಪ್ರದಾಯಕ್ಕೆ ಬದ್ಧವಾಗಿರಲು ಸಹಾಯ ಮಾಡುವುದು ಈ ಯುವತಿಯರ ಉದ್ದೇಶವಾಗಿದೆ

BIGG NEWS: ಪ್ರಯಾಣಿಕರಿಗೆ ಬಿಗ್‌ ಶಾಕ್‌; ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ| Platform Ticket

ಸಮೀರಾ, ತಸ್ನೀಮ್ ಮತ್ತು ಕಲ್ಯಾಣಿ ಸೇರಿದಂತೆ ಮೂವರು ಮಹಿಳೆಯರು ಜಿಮ್​ ಕೇಂದ್ರವನ್ನು ನಡೆಸುತ್ತಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಗೃಹಿಣಿಯರ ಫಿಟ್‌ನೆಸ್ ಮತ್ತು ಸುಧಾರಣೆಗಾಗಿ ಈ ಜಿಮ್ ತೆರೆಯುವ ಹಿಂದಿನ ಉದ್ದೇಶವಾಗಿದೆ.

BIGG NEWS: ಪ್ರಯಾಣಿಕರಿಗೆ ಬಿಗ್‌ ಶಾಕ್‌; ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ| Platform Ticket

ಮುಸ್ಲಿಂ ಹೆಚ್ಚಾಗಿರುವ ಪ್ರದೇಶವಾಗಿರುವುದರಿಂದ ಮಹಿಳೆಯರು ಖಾಸಗಿಯಾಗಿರಲು ಬಯಸುತ್ತಾರೆ. ಈ ಜಿಮ್​ ಮಹಿಳೆಯರಿಗೆ ಬಜೆಟ್​ ಸ್ನೇಹಿವಾಗಿದ್ದು, ಈಗ ಈ ಜಿಮ್​ನ ಸದಸ್ಯರ ಸಂಖ್ಯೆ 100 ಕ್ಕಿಂತ ಹೆಚ್ಚಾಗಿದೆ ಎಂಬುದು ಜಿಮ್​ ಮಾಲೀಕರ ಮಾತಾಗಿದೆ.

ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವ ಅನೇಕ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಮೀರಾ ಸಂಪರ್ಕ ಹೊಂದಿದ್ದಾರೆ. ಕೆಲವರು ಹಿಜಾಬ್​ ತೆಗೆಯಲು ಇಚ್ಛಿಸುವುದಿಲ್ಲ. ಇನ್ನೂ ಕೆಲ ಮುಸ್ಲಿಂ ಮಹಿಳೆಯರು ಹಿಜಾಬ್​ ಧರಿಸಿಕೊಂಡು ಜಿಮ್​ ಮಾಡಲು ಇಚ್ಛಿಸುತ್ತಾರೆ.

BIGG NEWS: ಪ್ರಯಾಣಿಕರಿಗೆ ಬಿಗ್‌ ಶಾಕ್‌; ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ| Platform Ticket

ಅವರು ಇಲ್ಲಿ ಯಾವುದೇ ಭಯವಿಲ್ಲದೇ ಹಿಜಾಬ್​ ಧರಿಸಿಯೇ ವ್ಯಾಯಾಮ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಇಲ್ಲಿ ಜಿಮ್​ ಮಾಡುವ ಮಹಿಳೆಯರಿಗೆ ಕಡಿಮೆ ಶುಲ್ಕ ವಿಧಿಸಲಾಗಿದೆ. ಹೀಗಾಗಿ ನಗರದ ಮಹಿಳೆಯರು ಸಹ ವ್ಯಾಯಾಮ ಮಾಡಲು ಇಚ್ಛಿಸುತ್ತಾರೆ ಎಂದು ಸಮೀರಾ ಹೇಳುತ್ತಾರೆ.

ಮುಂಬೈನ ಈ ನಗರದ ಮುಸ್ಲಿಂ ಪ್ರದೇಶಗಳು ಬಡತನದ ತೆಕ್ಕೆಯಲ್ಲಿ ಸಿಲುಕಿಕೊಂಡಿವೆ. ಇವರು ವೈದ್ಯಕೀಯ ಸೌಲಭ್ಯಗಳು ಮತ್ತು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎನ್ನಲಾಗ್ತಿದೆ.

Share.
Exit mobile version