ಬೆಂಗಳೂರು: ಸಾಮನ್ಯವಾಗಿ ಜನರು ಹೆಚ್ಚಾಗಿ ರೈಲಿನಲ್ಲಿ ಓಡಾಡುತ್ತಾರೆ. ಅದರಲ್ಲೂ ಊರಿಂದ ಯಾರಾದ್ರೂ ಬಂದ್ರೆ ರೈಲು ಹತ್ತಿಸೋಕೆ ಹೋಗುತ್ತಾರೆ. ಆಗಾ ಪ್ಲಾರ್ಟ್‌ ಫಾರ್ಮ್‌ ಟಿಕೆಟ್ ತೆಗೆದುಕೊಂಡು ಹೋಗಬೇಕಾಗುತ್ತದೆ. ಒಂದು ವೇಳೆ ಮಿಸ್‌ ಆದ್ರೆ ದಂಡ ಕಟ್ಟಬೇಕಾಗುತ್ತದೆ. ಇದೀಗ ಪ್ಲಾರ್ಟ್‌ ಫಾರ್ಮ್‌‌ ಟಿಕೆಟ್‌ ದರ ಏರಿಕೆಯಾಗಿದೆ.

BIGG NEWS: ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬಕ್ಕೆ ಚಾಟಿ ಬೀಸಿದ ಹೈಕೋರ್ಟ್‌ ; ಅ.25 ರೊಳಗೆ ತೆರವುಗೊಳಿಸಲು ತಾಕೀತು

 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಕಂಟೋನ್ಮೆಂಟ್, ಯಶವಂತಪುರ, ಕೃಷ್ಣರಾಜಪುರ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣಗಳಲ್ಲಿ 10 ರೂ. ಇದ್ದ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು 20 ರೂ.ಕ್ಕೆ ಹೆಚ್ಚಿಸಲಾಗಿದೆ.ದಸರಾ ಹಬ್ಬಮತ್ತು ರಜಾ ದಿನಗಳಲ್ಲಿ ಜನದಟ್ಟಣೆ ತಪ್ಪಿಸಲು ಮತ್ತು ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್‌ಫಾರ್ಮ್ ಗಳಲ್ಲಿ ಓಡಾಟಕ್ಕೆ ಅನುಕೂಲಕ್ಕೆ ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share.
Exit mobile version