ಬೆಂಗಳೂರು: ರಾಜ್ಯದ ರೈತರಿಗೆ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಕರುನಾಡಿನಲ್ಲಿ ನೀರಿಗಿಲ್ಲ ಬರ ಎನ್ನುವಂತೆ ರಾಜ್ಯದ ಜಲಾಶಯಗಳು ಮೈದುಂಬಿ ನಿಂತಿವೆಯಂತೆ.
ಹೌದು. 2024ರಲ್ಲಿ ಉತ್ತಮ ಮಳೆಯಾದುದ್ದರಿಂದ ರಾಜ್ಯದಲ್ಲಿನ ಜಲಾಶಯಗಳು ತುಂಬಿವೆ. ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ 504.39 ಟಿಎಂಸಿ ನೀರು ಸಂಗ್ರಹ ಲಭ್ಯವಿದೆ. ಕಳೆದ ವರ್ಷ ಈ ಹೊತ್ತಿಗೆ 316.74 ಟಿಎಂಸಿ ಅಷ್ಟೇ ಇತ್ತು.
ಲಿಂಗನಮಕ್ಕಿ ಜಲಾಶಯದಲ್ಲಿ 82.49 ಟಿಎಂಸಿ ನೀರಿದೆ. ಸದ್ಯದ ಒಳ ಹರಿವು 13 ಕ್ಯೂಸೆಸ್ ಆಗಿದೆ. ಹಾರಂಗಿ ಜಲಾಶಯದಲ್ಲಿ 3.850 ಟಿಎಂಸಿ ನೀರಿದೆ. ಹೇಮಾವತಿ ಜಲಾಶಯದಲ್ಲಿ 20.855 ಟಿಎಂಸಿ ಇದ್ದರೇ, ಕಬಿನಿ ಜಲಾಶಯದಲ್ಲಿ 14.546 ಟಿಎಂಸಿ ಇದೆ.
ಇನ್ನೂ ಭದ್ರಾ ಜಲಾಶಯದಲ್ಲಿ 52.40 ಟಿಎಂಸಿ, ತುಂಗಭದ್ರಾ ಡ್ಯಾಂನಲ್ಲಿ 35.06 ಟಿಎಂಸಿ, ಘಟಪ್ರಭಾ ಜಲಾಶಯದಲ್ಲಿ 26.16 ಟಿಎಂಸಿ, ಮಲಪ್ರಭಾ ಜಲಾಶಯದಲ್ಲಿ 18.01 ಟಿಎಂಸಿ, ಆಲಮಟ್ಟಿ ಜಲಾಶಯದಲ್ಲಿ 52.60 ಟಿಎಂಸಿ, ವಾಣಿವಿಲಾಸ ಜಲಾಶಯದಲ್ಲಿ 29.40 ಟಿಎಂಸಿ ಸೇರಿದಂತೆ 14 ಜಲಾಶಯಗಳಲ್ಲಿ 504.39 ಟಿಎಂಸಿ ನೀರು ಇರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
2024ರಲ್ಲಿ ಉತ್ತಮ ಮಳೆಯಾದ್ದರಿಂದ ರಾಜ್ಯದಲ್ಲಿನ ಜಲಾಶಯಗಳು ತುಂಬಿವೆ. ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ504.39 ಟಿಎಂಸಿ ನೀರು ಸಂಗ್ರಹ ಲಭ್ಯ ಇದೆ, ಕಳೆದ ವರ್ಷ ಈ ಹೊತ್ತಿಗೆ 316.74 ಟಿಎಂಸಿ ಅಷ್ಟೇ ಇತ್ತು. pic.twitter.com/gv1hTRqnyX
— DIPR Karnataka (@KarnatakaVarthe) February 27, 2025
BIG NEWS: ರಾಜ್ಯಾಧ್ಯಂತ ‘ಇಡ್ಲಿ’ ತಯಾರಿಸಲು ಬಳಸುವ ‘ಪ್ಲಾಸ್ಟಿಕ್ ಹಾಳೆ’ ನಿಷೇಧ
BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ನೋಂದಣಿ ಕುರಿತು ಇಲ್ಲಿದೆ ಮಾಹಿತಿ
BREAKING : ರಾಜ್ಯಕ್ಕೂ ಕಾಲಿಟ್ಟ ‘ಹಕ್ಕಿ ಜ್ವರ’ : ರಾಯಚೂರಲ್ಲಿ ಪಕ್ಷಿಗಳು ನಿಗೂಢ ಸಾವು, ಜನರಲ್ಲಿ ಹೆಚ್ಚಿದ ಆತಂಕ!