ಬೆಂಗಳೂರು: ಹೊಸ ಬೈಕ್ ಖರೀದಿಸಿದ ಬಳಿಕ, ಬೈಕ್ ಕಂಪನಿ, ಡೀಲರ್ ಕಡೆಯಿಂದ ಗ್ರಾಹಕನಿಗೆ ನೀಡಲಾಗುವಂತ ಉಚಿತ ಬೈಕ್ ಸರ್ವಿಸಿಂಗ್ ಸೌಲಭ್ಯವನ್ನು ನಿಗದಿತ ಅವಧಿಯಲ್ಲಿ ಪಡೆದುಕೊಳ್ಳದಿದ್ದರೇ, ವಾರಂಟಿ ಕ್ಲೇಮ್ ಮಾಡಿಕೊಳ್ಳಲಾಗದು ಎಂಬುದಾಗಿ ಬೆಂಗಳೂರಿನ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮಹತ್ವದ ತೀರ್ಪು ನೀಡಿದೆ.
ವಾರಂಟಿ ಅವಧಿಯಲ್ಲಿರುವ ಕಾರಣ ಬೈಕ್ ನ ದೋಷಪೂರಿತ ಸ್ಪೀಡೋಮೀಟರ್ ಬದಲಿಸಿಕೊಂಡುವಂತೆ ಬೈಕ್ ಡೀಲರ್ ಗೆ ನಿರ್ದೇಶನ ನೀಡಬೇಕು ಎಂಬುದಾಗಿ ಕೋರಿ ಪ್ರವೀಣ್ ಎಂಬಾತ ಗ್ರಾಹಕರ ವ್ಯಾಜಗಳ ಪರಿಹಾರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಲಾಗಿದೆ.
2022ರಲ್ಲಿ ಬೆಂಗಳೂರಿನ ಖಾಸಗಿ ಉದ್ಯೋಗಿ ಪ್ರವೀಣ್ ಆಗಸ್ಟ್ ನಲ್ಲಿ ಯಮಹಾ ಬೈಕ್ ಖರೀದಿಸಿದ್ದರು. ಆದರೇ ಬೈಕ್ ಸ್ವೀಡೋಮೀಟರ್ ನಲ್ಲಿ ದೋಷ ಕಾಣಿಸಿಕೊಂಡ ಕಾರಣ, ಬದಲಿಸಿಕೊಡುವಂತೆ ಡೀಲರ್ ಬಳಿ ಕೋರಿದ್ದರು. ಆಗ ಡೀಲರ್ ಅವರ ಮನವಿಯನ್ನು ತಿರಸ್ಕರಿಸಿದ್ದರು.
ಈ ಹಿನ್ನಲೆಯಲ್ಲಿ ಬೈಕ್ ಮಾಲೀಕ ಪ್ರವೀಣ್ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದಂತ ಗ್ರಾಹಕರ ನ್ಯಾಯಾಲಯವು, ಪ್ರವೀಣ್ ದೂರಿನ ಜೊತೆಗೆ ವೇದಿಕೆಗೆ ಸಲ್ಲಿಸಿದ್ದ ವಾರಂಟಿ ಕಾರ್ಡ್ ನಲ್ಲೂ ಮೂರು ಮತ್ತು ನಾಲ್ಕನೇ ಉಚಿತ ಸರ್ವಿಸ್ ಕೂಪನ್ ಗಳು ಬಳಕೆಯಾಗದೇ ಹಾಗೆಯೇ ಇದ್ದವು. ಕೇಬಲ್, ಎಲೆಕ್ಟ್ರಿಕಲ್ ವೈರಿಂಗ್, ಎಲೆಕ್ಟ್ರಿಕಲ್ ಸಾಮಗ್ರಿಗಳು ವಾರಂಟಿ ವ್ಯಾಪ್ತಿಗೆ ಬರೋದಿಲ್ಲವಾದ ಕಾರಣ, ಅರ್ಜಿದಾರ ಪರಿಹಾರ ಕೋರಲು ಆಗದು ಎಂದು ಅಭಿಪ್ರಾಯ ಪಟ್ಟು, ಅರ್ಜಿಯನ್ನು ವಜಾಗೊಳಿಸಿದೆ.
ಬೆಂಗಳೂರಿನ ‘ಮೆಜೆಸ್ಟಿಕ್ ರೈಲ್ವೆ ನಿಲ್ದಾಣ’ದಲ್ಲೂ ‘UPI’ ಬಳಸಿ ಟಿಕೆಟ್ ಖರೀದಿಗೆ ಅವಕಾಶ
ತಿಂಗಳ ಮೊದಲ ದಿನವೇ `ಗ್ರಾಹಕರಿಗೆ ಗುಡ್ ನ್ಯೂಸ್’ : ‘LPG’ ವಾಣಿಜ್ಯ ಸಿಲಿಂಡರ್ ಬೆಲೆ 32 ರೂ. ಇಳಿಕೆ