ಬೆಂಗಳೂರು: ವಿದ್ಯುತ್ ಗ್ರಾಹಕರ ಕನಿಷ್ಠ ವಿದ್ಯುತ್ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇಂದು ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದಂತ ನ್ಯಾಯಪೀಠವು ಈ ಆದೇಶ ಮಾಡಿದೆ.
ಬಳಸಿದಂತ ವಿದ್ಯುತ್ ಶುಲ್ಕಕ್ಕೆ ಮಾತ್ರವೇ ತೆರಿಗೆ ವಿಧಿಸಬಹುದು. ಆದರೇ ಕನಿಷ್ಠ ವಿದ್ಯುತ್ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ. ಗ್ರಾಹಕರು ಬಳಸದ ವಿದ್ಯುತ್ ಗೆ ತೆರಿಗೆ ಕಟ್ಟಬೇಕಿಲ್ಲವೆಂದು ತೀರ್ಪು ನೀಡಿದೆ.
ಇನ್ನೂ ಕರ್ನಾಟಕ ವಿದ್ಯುತ್ ಕಾಯ್ದೆ ಸೆಕ್ಷನ್.3(1)ರ ತಿದ್ದುಪಡಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಮೂಲಕ ಗ್ರಾಹಕರ ಕನಿಷ್ಠ ವಿದ್ಯುತ್ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ ಎಂಬುದಾಗಿ ಮಹತ್ವದ ತೀರ್ಪು ನೀಡಿದೆ.
ಮೈಸೂರಿನ ‘ನೈರುತ್ಯ ರೈಲ್ವೆ ವಿಭಾಗ’ದ ಈ ರೈಲುಗಳ ಸಂಚಾರ ರದ್ದು | South Western Railway
ಮೈಸೂರಿನ ನೈರುತ್ಯ ರೈಲ್ವೆಯಿಂದ ಅಕ್ರಮವಾಗಿ ರೈಲಿನಲ್ಲಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ