ಬೆಂಗಳೂರು: ಕೆಲವು ಸುದ್ದಿ ಮಾಧ್ಯಮಗಳಲ್ಲಿ ಪ್ರಯಾಗ್ ರಾಜ್ ಸುತ್ತಲಿನ ಪ್ರದೇಶದ ರೈಲ್ವೆ ಸ್ಟೇಷನ್ ಗಳಲ್ಲಿ ಜನದಟ್ಟಣೆ ಜಾಸ್ತಿಯಾಗಿರುವ ಕಾರಣ ಈ ನಿಲ್ದಾಣಗಳನ್ನು ಬಂದ್ ಮಾಡಿದ್ದಾರೆ ಎಂಬಂತಹ ಸುದ್ದಿಗಳು ಬಂದಿರುತ್ತದೆ. ಆದರೆ ಈ ಸುದ್ದಿ ನಿಜವಲ್ಲ. ಪ್ರಯಾಗ್ ರಾಜ್ ನಲ್ಲಿನ ಯಾವುದೇ ರೈಲ್ವೆ ನಿಲ್ದಾಣಗಳನ್ನು ಬಂದ್ ಮಾಡಿಲ್ಲ ಅಂತ ರೈಲ್ವೆ ಇಲಾಖೆ ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಬೆಂಗಳೂರಿನ ನೈರುತ್ಯ ರೈಲ್ವೆ ವಿಭಾಗದಿಂದ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಯಾಗ್ ರಾಜ್ ಪ್ರದೇಶದ ಪ್ರಯಾಗರಾಜ್ ಜಂಕ್ಷನ್, ಪ್ರಯಾಗ್ ರಾಜ್ ಛಿವಕಿ, ನೈನಿ, ಸುಬೇದಾರ್ ಗಂಜ್, ಪ್ರಯಾಗ್, ಫಪಮಾವು, ಪ್ರಯಾಗ್ ರಾಜ್ ರಾಮ್‌ಬಾಗ್ ಮತ್ತು ಝೂಂಸಿ ರೈಲು ನಿಲ್ದಾಣಗಳು ಎಲ್ಲ ರೀತಿಯಂದಲೂ ಕಾರ್ಯ ನಿರ್ವಹಿಸುತ್ತಿವೆ ಎಂಬುದಾಗಿ ತಿಳಿಸಿದೆ.
ನಿನ್ನೆ ಅಂದರೆ ದಿನಾಂಕ 9 ಫೆಬ್ರವರಿ 2025ರಂದು ಪ್ರಯಾಗ್ ರಾಜ್ ಪ್ರದೇಶದಿಂದ 330 ರೈಲುಗಳು ಸಂಚರಿಸಿದ್ದು 12.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪ್ರಯಾಣಿಸಿದ್ದಾರೆ. ಅದೇ ರೀತಿ ಇಂದು ದಿನಾಂಕ 10.02.2025ರಂದು ಮಧ್ಯಾಹ್ನ 3 ಗಂಟೆಯವರೆಗೆ ಈ ನಿಲ್ದಾಣಗಳಿಂದ 201 ರೈಲುಗಳು ಸಂಚರಿಸಿದ್ದು 9 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪ್ರಯಾಣಿಸಿದ್ದಾರೆ ಎಂದಿದೆ.
ಹೆಚ್ಚಿನ ಜನದಟ್ಟಣೆಯನ್ನು ನಿಭಾಯಿಸಲು ರೈಲ್ವೆಯು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು ಎಲ್ಲ ರೈಲುಗಳು ನಿಗದಿಯಂತೆ ಕಾರ್ಯನಿರ್ವಹಿಸುತ್ತಿದೆ. ಉತ್ತರ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಮತ್ತು ಪ್ರಯಾಗ್ ರಾಜ್, ವಾರಣಾಸಿ ಹಾಗೂ ಲಕ್ನೋ ರೈಲ್ವೆ ವಿಭಾಗದ ಡಿ.ಆರ್.ಎಂ. ಗಳು ಪ್ರಯಾಗ್ ರಾಜ್ ನಲ್ಲಿ ಇದ್ದು ಪ್ರಯಾಣಿಕರಿಗೆ ಅಗತ್ಯವಾದ ಎಲ್ಲ ಸೇವೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದೆ.
ನಮ್ಮ ಮೆಟ್ರೋ ದರ ಹೆಚ್ಚಳದ ವಿರುದ್ಧ ಸಿಡಿದೆದ್ದ ಬಿಜೆಪಿ: ಬೆಂಗಳೂರಿನ ಹಲವು ನಿಲ್ದಾಣಗಳ ಎದುರು ಪ್ರತಿಭಟನೆ
Shocking News: ಆಸ್ಪತ್ರೆಯಲ್ಲಿ ಸತ್ತಿದ್ದಾನೆಂದು ಊರಿಗೆ ತರುವಾಗ ಬದುಕಿದ ವ್ಯಕ್ತಿ: ಶಾಕ್ ಆದ ಹಾವೇರಿ ಜನರು