ಬೆಂಗಳೂರು: ರಾಜ್ಯದ ಬಡವರನ್ನು ಭಿಕ್ಷುಕರನ್ನಾಗಿ ಮಾಡುವ ಹೇಳಿಕೆಗಳನ್ನು ಕೊಟ್ಟು, ಮತಬ್ಯಾಂಕ್ ಮಾಡಿ ನೀವು ಲೂಟಿ ಮಾಡಲು ಈ ಸರಕಾರ ಉಳಕೊಂಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ನಾನು ಏಳೆಂಟು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಇಂಥ ಭ್ರಷ್ಟ ಸಿಎಂ ನೋಡಿಯೇ ಇಲ್ಲ ಎಂದು ತಿಳಿಸಿದರು. ಲೂಟಿಯಲ್ಲಿ ಸದಾ ತೊಡಗಿದ್ದಾರೆ ಎಂದು ಆರೋಪಿಸಿದರು.
ಶಿವಕುಮಾರ್ ಸಿಎಂ ಆದರೆ ಕೆಪಿಸಿಸಿಗೆ ದೊಡ್ಡ ಬೀಗ ಹಾಕಬೇಕೆಂಬ ರಾಜಣ್ಣ ಹೇಳಿಕೆ ಕುರಿತು ಕೇಳಿದಾಗ, ಅದು ಅವರ ಪಕ್ಷದ ಒಳಗಿನ ವಿಚಾರ. ಈಗಲೂ ಇನ್ನೆರಡು ವರ್ಷದ ಬಳಿಕ ಅವರು ದೊಡ್ಡ ಬೀಗವನ್ನೇ ತರಬೇಕು. ಶಿವಕುಮಾರ್ ಮುಖ್ಯಮಂತ್ರಿ ಆದರೆ ಮಾತ್ರವಲ್ಲ; ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಆಗಿದ್ದಾರೆ. ಅವರು ಇಳಿದು ಹೋಗುವಾಗ ಅವರು ಬೀಗ ತೆಗೆದುಕೊಟ್ಟೇ ಹೋಗಬೇಕು. ಈ ಸರಕಾರ, ಕಾಂಗ್ರೆಸ್ ಪಕ್ಷವನ್ನು ಇನ್ನು ಯಾರೂ ನಂಬುವುದಿಲ್ಲ ಎಂದು ನುಡಿದರು.
ಹೈಕೋರ್ಟ್ ಸ್ಟೇ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ತಡೆಯಾಜ್ಞೆ ತೆರವಿಗೆ ಮುಂದಾಗಲಿ. ಯಾರು ಬೇಡ ಎಂದಿದ್ದಾರೆ. ನೀವೇನು ಮಾಡಿದರೂ ದೇಶದ ಕಾನೂನು ಎಲ್ಲರಿಗೂ ಒಂದೇ, ಅದು ಎಲ್ಲರನ್ನೂ ರಕ್ಷಿಸುತ್ತದೆ ಎಂದು ತಿಳಿಸಿದರು.
ಉದ್ಯೋಗಿಗಳೇ ಗಮನಿಸಿ ; ಡಿಎ, ಪಿಂಚಣಿ, ಗ್ರಾಚ್ಯುಟಿ ಸೇರಿ ನಿವೃತ್ತಿ ನಿಯಮಗಳಲ್ಲಿ 5 ಬದಲಾವಣೆ!
ಕರ್ನಾಟಕ ಪೊಲೀಸರ ಆತ್ಮಸ್ಥೈರ್ಯವನ್ನು ‘ಪಿ-ಕ್ಯಾಪ್’ ಹೆಚ್ಚಿಸಲಿದೆ: ಗೃಹ ಸಚಿವ ಡಾ.ಜಿ ಪರಮೇಶ್ವರ್
 
		



 



