ಬಳ್ಳಾರಿ: ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲು ಬಿಜೆಪಿ ಹಳ್ಳಿ ಹಳ್ಳಿಗೆ ತೆರಳಿ ಹೋರಾಟ ನಡೆಸುತ್ತದೆ. ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜೊತೆಗೆ ಬಿಜೆಪಿ ಯಾವಾಗಲೂ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬಳ್ಳಾರಿಯಲ್ಲಿ ಪೋಸ್ಟರ್ ಹಾಕುವ ವಿಚಾರದಲ್ಲಿ ನಡೆದ ಗಲಾಟೆ ವಿರೋಧಿಸಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಶೆಡ್ಡು ಹೊಡೆದು ಸಂಗ್ರಾಮಕ್ಕೆ ತಯಾರಾಗಬೇಕು. ಕಾಂಗ್ರೆಸ್ ನ ಎರಡೂವರೆ ವರ್ಷದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದಿನ ನಿತ್ಯ ಕೊಲೆ ರೇಪು ಸುದ್ದಿ ಕೇಳಿ ಸಾಕಾಗಿದೆ. ಹಲವಾರು ರೀತಿಯಲ್ಲಿ ಪೊಲಿಸರ ದಬ್ಬಾಳಿಕೆ ಇಡೀ ರಾಜ್ಯದಲ್ಲಿ ಇದೆ.
ಬಳ್ಳಾರಿಯಲ್ಲಿ ಈ ಘಟನೆ ಆಗಲು ಎರಡು ಕಾರಣ ಜನಾರ್ದನ ರೆಡ್ಡಿ ಕೋರ್ಟಿನ ಆದೇಶದ ಪ್ರಕಾರ ಬಳ್ಳಾರಿಗೆ ಬಂದಿದ್ದರಿಂದ ತಮಗೆ ಉಳಿಗಾಲವಿಲ್ಲ ಎಂದು, ಜನಾರ್ದರೆಡ್ಡಿ ಮತ್ತು ಅವರ ಆತ್ಮೀಯ ಸ್ನೇಹಿತ ರಾಮುಲು ಒಂದಾಗಿದ್ದಾರೆ ಎಂದರೆ ಬಳ್ಳಾರಿಯ ಕಾಂಗ್ರೆಸ್ ನಾಯಕರ ಕುರ್ಚಿ ಅಲುಗಾಡುತ್ತಿದೆ. ರಾಮುಲು ವೇಗ, ಜನಾರ್ದನ ರೆಡ್ಡಿ ಶಕ್ತಿ, ಬೆಂಕಿ ಬಿರುಗಾಳಿ ಇದ್ದ ಹಾಗೆ. ಕಾಂಗ್ರೆಸನವರ ಗುಂಡಿಗಿಂತ ನಮ್ಮ ಎದೆ ಗಟ್ಟಿಯಿದೆ ಜನಾರ್ದನ ರೆಡ್ಡಿ, ರಾಮುಲು ಶಕ್ತಿ ಅಡಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ರೀತಿಯ ಘಟನೆ ಎಲ್ಲ ಕಡೆ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ಹೆಣ್ಣು ಮಗಳ ಬಟ್ಟೆಯನ್ನು ಪೊಲೀಸರೆ ಬಿಚ್ಚುತ್ತಾರೆ. ಕೊಲಾರದಲ್ಲಿ ಮಹಿಳಾ ಅಧಿಕಾರಿಯನ್ನು ಸುಟ್ಟು ಹಾಕುತ್ತೇನೆ ಎನ್ನುತ್ತಾರೆ. ಭದ್ರಾವತಿಯಲ್ಲಿ ಅಧಿಕಾರಿಗೆ ಶಾಸಕರ ಪುತ್ರ ಧಮ್ಕಿ ಹಾಕುತ್ತಾನೆ. ಅದೇ ರೀತಿ ಮಾಗಡಿಯಲ್ಲಿ ತಹಸಿಲ್ದಾರಗೆ ಚಪ್ಪಲೀಲಿ ಹೊಡಿತಿನಿ ಅಂತಾರೆ. ಸುಟ್ಟು ಹಾಕುವದು ಚಪ್ಪಲಿಯಲ್ಲಿ ಹೊಡೆಸುವುದು ಕಾಂಗ್ರೆಸ್ ಸಂಸ್ಕೃತಿ. ಇಲ್ಲಿ ಯಾರಿಗೂ ನೆಮ್ಮದಿ ಇಲ್ಲ ಎಂದು ಹೇಳಿದರು.
ಎಸ್ಟಿ ಮೀಸಲಾತಿ ಹೆಚ್ಚಳ
ವಾಲ್ಮಿಕಿ ಜನಾಂಗ ಮೂವತ್ತು ವರ್ಷದಿಂದ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡುತ್ತ ಬಂದಿತ್ತು. ಶೇ 3% ಮೀಸಲಾತಿಯನ್ನು 7% ಕ್ಕೆ ಹೆಚ್ಚಿಸುವಂತೆ ಕೇಳಿದರು. ನಾವು ಎಸ್ಟಿ ಸಮುದಾಯಕ್ಕೆ ಪ್ರತ್ಯೇಕ ಇಲಾಖೆ ಮಾಡಿದೆವು, ವಾಲ್ಮೀಕಿ ಸಮುದಾಯದ ಸ್ವಾಮಿಜಿ, ರಾಮುಲು ಪ್ರತಿಭಟನೆ ಮಾಡಿದರೆ ಕಾಂಗ್ರೆಸ್ ನವರು ಒಬ್ಬರೂ ಬರಲಿಲ್ಲ. ನಾನು ಸಿಎಂ ಆಗಿದ್ದಾಗ ಮಿಸಲಾತಿಯನ್ನಿ 3% ರಿಂದ 7% ಕ್ಕೆ ಹೆಚ್ಚಿಸಿದೆವು ಇದರಿಂದ ಸಾವಿರಾರು ಮಕ್ಕಳಿಗೆ ಮೆಡಿಕಲ್, ಇಂಜಿನೀಯರಿಂಗ್ ಸಿಟು ಉದ್ಯೋಗ ಸಿಗುತ್ತಿದೆ. ಯಡಿಯೂರಪ್ಪ ಅವರ ನಾಯಕತ್ವದಿಂದ ಅದು ಸಾಧ್ಯವಾಗಿದೆ ಎಂದು ಹೇಳಿದರು.
ಚರ್ಚೆಗೆ ಬನ್ನಿ
ವಾಲ್ಮಕಿ ನಿಗಮದ ಸುಮಾರು ನೂರು ಕೊಟಿ ಹಣ ಕಾಂಗ್ರೆಸ್ ಎಂಪಿ ಚುನಾವಣೆಗೆ ಬಳಸಿದೆ. ಎಸ್ಟಿ ಜನಾಂಗ ಇದನ್ನು ಕ್ಷಮಿಸುವುದಿಲ್ಲ. ವಾಲ್ಮೀಕಿ ಜನಾಂಗದ ಬಗ್ಗೆ ಮಾತನಾಡುತ್ತೀರ ವಾಲ್ಮೀಕಿ ಸಮುದಾಯಕ್ಕೆ ಯಾರು ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಬನ್ನಿ ಚರ್ಚೆಗೆ ಎನ್ನುವ ಸವಾಲು ಹಾಕುತ್ತೇನೆ. ಆ ಜನಾಂಗಕ್ಕೆ ಕಾಂಗ್ರೆಸ್ ದೊಡ್ಡ ಅನ್ಯಾಯ ಮಾಡಿದೆ. ಶ್ರೀರಾಮುಲು ಅವರು ವಾಲ್ಮಿಕಿ ಜನಾಂಗಕ್ಕೆ ನ್ಯಾಯ ಕೊಡಿಸುವವರೆಗೂ ವಿಶ್ರಮಿಸುವುದಿಲ್ಲ ಅಂತ ಸಂಕಲ್ಪ ಮಾಡಬೇಕು. ಎಲ್ಲ ವಾಲ್ಮಿಕಿ ಜನರು ರಾಮುಲು ನೇತೃತ್ವದಲ್ಲಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಜನಾರ್ದನ ರೆಡ್ಡಿ ಅವರು ಮನೆಯಲ್ಲಿ ಇದ್ದಾರೆ ಅಂತ ಅವರ ಮನೆ ಮೇಲೆ ಗುಂಡು ಹಾರಿಸಿದ್ದಾರೆ. ಭರತ ರೆಡ್ಡಿಗೆ ಶಾಪ ಕಂಡಿತವಾಗಲೂ ತಟ್ಟುತ್ತದೆ. ಜನಾರ್ದನ ರೆಡ್ಡಿ ಅವರನ್ನು ರಾಜಕೀಯವಾಗಿ ಯಾವ ರೀತಿಯಲ್ಕೂ ಮುಗಿಸಲು ಸಾಧ್ಯವಿಲ್ಲ. ಅವರು ಬಳ್ಳಾರಿಗೆ ಮಾಡಿದ ಸಹಾಯ ಜನರಿಗೆ ಮಾಡಿದ ಕೆಲಸ ಬಹಳಷ್ಟಿದೆ. 2008 ರ ನಂತರ ಬಳ್ಳಾರಿಯ ರಸ್ತೆ ಅಭಿವೃದ್ದಿ, ಕುಡಿಯುವ ನಿರು ಜನರಿಗೆ ಸಾಕಷ್ಟು ಅನುಕೂಲ ಆಗಿದೆ ಎಂದರು.
ಕಾಂಗ್ರೆಸ್ ನವರಿಂದ ಗಣಿ ಲೂಟಿ
ಈ ಬಳ್ಳಾರಿ ಗಣಿ ಲೂಟಿ ಮಾಡಿದ್ದು ಕಾಂಗ್ರೆಸ್ ನವರು, ಅವರಿಗೆ ಸುಳ್ಳು ಕೇಸು ಹಾಕಿಸುವ ಪ್ರವೃತ್ತಿ ಇದೆ. ಗಣಿ ಅಕ್ರಮಕ್ಕೂ ಅವರಿಗೂ ಸಂಬಂಧ ಇರಲಿಲ್ಲ ಆಗಲು ಅವರ ಮೇಲೆ ಕೇಸ್ ಹಾಕಿಸಿದರು. ಕೋರ್ಟ್ ಅದನ್ನು ಡಿಸ್ ಮಿಸ್ ಮಾಡಿದೆ. ಸತ್ಯಕ್ಕೆ ಯಾವಾಗಲೂ ಜಯ ಇದೆ. ಮೃತ ರಾಜಶೇಖರ ಸಾವಿಗೆ ನ್ಯಾಯ ಕೊಡಿಸಲು ಬಿಜೆಪಿ ಹೋರಾಟ ಮಾಡುತ್ತದೆ. ಅಲ್ಲಿವರೆಗೂ ಬಿಜೆಪಿ ವಿಶ್ರಮಿಸುವುದಿಲ್ಲ. ಕಾಂಗ್ರೆಸ್ ಸರ್ಕಾರ ತೆಗೆಯುವವರೆಗೂ ನಾವು ಹಳ್ಳಿಹಳ್ಳಿಗೆ ಹೋಗಿ ಭ್ರಷ್ಟ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ. ಬಳ್ಳಾರಿ ಅಭಿವೃದ್ಧಿ ಮಾಡಲು ಜನಾರ್ದನ ರೆಡ್ಡಿ ರಾಮುಲು ಅವರ ಹಿಂದೆ ನಾವಿದ್ದೇವೆ ಎಂದು ಸಾರಲು ನಾವು ಬಂದಿದ್ದೇವೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿರುವುದಕ್ಕೆ ಕೋಟಿ ಕೋಟಿ ಧನ್ಯವಾದಗಳು ಎಂದು ಹೇಳಿದರು.
BIG NEWS: ರಾಜ್ಯದಲ್ಲಿ ‘ಶಾಲಾ ದಾಖಲಾತಿ’ಗಳಲ್ಲಿ ‘ಜಾತಿ ತಿದ್ದುಪಡಿ’ ಬಗ್ಗೆ ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ








