ಮಂಡ್ಯ: RSS ಬ್ಯಾನ್ ಮಾಡಲು ಜಗತ್ತಿನ ಯಾವುದೇ ದೃಷ್ಟಶಕ್ತಿಯಿಂದಲೂ ಸಾಧ್ಯವಿಲ್ಲ. RSS ಅಸ್ತಿತ್ವವನ್ನ ಅಳಿಸಲು ಯಾರಿಂದಲೂ ಸಾದ್ಯವಿಲ್ಲ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಆರ್ ಎಸ್ ಎಸ್ ಚಟುವಟಿಕೆ ನಿಷೇಧಿಸುವಂತೆ ಪ್ರಿಯಾಂಕ ಖರ್ಗೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇದು ಮೂರ್ಖತನದ ವಿಚಾರವಾಗಿದೆ. ಜವಾಹರ್ ಲಾಲ್ ಇಂದ ಇಲ್ಲಿಯವರೆಗೆ ಎಲ್ಲರು ಪ್ರಯತ್ನ ಮಾಡಿದ್ದಾರೆ. RSS ಬ್ಯಾನ್ ಮಾಡಲು ಜಗತ್ತಿನ ಯಾವುದೇ ದೃಷ್ಟಶಕ್ತಿಯಿಂದಲೂ ಸಾಧ್ಯವಿಲ್ಲ. ಸೂರ್ಯ, ಚಂದ್ರ ಎಷ್ಟು ಸತ್ಯವೋ ಆರ್ ಎಸ್ ಎಸ್ ಕೂಡ ಅಷ್ಟೇ ಸತ್ಯ. RSS ಅಸ್ತಿತ್ವವನ್ನ ಅಳಿಸಲು ಯಾರಿಂದಲೂ ಸಾದ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷದವರು ಮುಸ್ಲಿಂ ತುಷ್ಟಿಕರಣಕ್ಕೆ ಇಂತಹ ಹೇಳಿಕೆ ಕೊಡ್ತಾರೆ. ದೇಶದಲ್ಲಿ ನ್ಯಾಯಾಲಯದ ವ್ಯವಸ್ಥೆ ಇದೆ. ಮುಸ್ಲಿಂ ರನ್ನ ಖುಷಿ ಪಡಿಸಲು ಪ್ರಿಯಾಂಕ ಖರ್ಗೆ ಇಂತಹ ಹೇಳಿಕೆ ಕೊಡ್ತಾರೆ ಅಷ್ಟೆ ಎಂಬುದಾಗಿ ತಿಳಿಸಿದರು.
ಹಿಂದೂ ಜಾತ್ರೆ, ಹಬ್ಬ ಹರಿದಿನಗಳ ಮೇಲೆ, ಶಿವಾಜಿ, ಗಣೇಶ ಹಬ್ಬ ಮೇಲೆ ದಾಳಿ ನಡೆಯುತ್ತಿದೆ. ಒಂದು ಮಾತ್ರ ಸತ್ಯ ಈ ದೇಶದಲ್ಲಿ ಹಿಂದೂಗಳು ಮುಸ್ಲಿಂ ಹಬ್ಬಗಳ ಮೇಲೆ ಎಂದು ಕಲ್ಲು ಹಾಕಿಲ್ಲ. ತಪ್ಪು ಮಾಡಿದವ ಮೇಲೆ ಕೇಸ್ ಹಾಕಿ. ಸರ್ಕಾರದ ಒತ್ತಡದಿಂದ ಅಮಾಯಕ ಯುವಕರ ಮೇಲೆ ಕೆಸ್ ಹಾಕ್ತಾರೆ. ನಮ್ಮ ಸರ್ಕಾರ ಇದ್ದಾಗಾ ಇಂತಹ ಕೆಲಸ ಮಾಡಿಲ್ಲ ಎಂದು ಗುಡುಗಿದರು.
ವರದಿ: ಗಿರೀಶ್ ರಾಜ್, ಮಂಡ್ಯ
BIG NEWS: ಚಿತ್ತಾಪುರದಲ್ಲಿ ‘ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆ’ ದುಷ್ಕರ್ಮಿಗಳಿಂದ ವಿರೂಪ
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion