ನವದೆಹಲಿ: ವಿಶ್ವದಾದ್ಯಂತ ಕೋವಿಡ್ ಸೋಂಕಿನ ( Covid19 Case ) ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಭಾರತದಲ್ಲಿಯೂ ಗಣನೀಯ ಇಳಿಕೆಯನ್ನು ಕೊರೋನಾ ಕಂಡಿದೆ. ಈಗಾಗಲೇ ಕೋವಿಡ್ ಲಸಿಕೆಯ ( Covid Vaccine ) ಮೊದಲ ಹಾಗೂ ಎರಡನೇ ಡೋಸ್ ನೀಡಿಕೆಯ ಕಾರಣ, ಸೋಂಕು ಗಣನೀಯವಾಗಿ ಇಳಿಕೆಯತ್ತ ಸಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಕೋವಿಡ್ ಗೆ ಸಂಜೀವಿನಿಯಾಗಿದ್ದಂತ ಲಸಿಕೆಯನ್ನು ಈಗ ಕೇಳುವವರೇ ಇಲ್ಲದಂತೆ ಆಗಿದೆ.

BREAKING: ಶಾಸಕ ರೇಣುಕಾಚಾರ್ಯ ತಮ್ಮನ ಪುತ್ರ ಸಾವು ಪ್ರಕರಣ: ವಿನಯ್ ಗುರೂಜಿ ಆಶ್ರಮಕ್ಕೆ ಪೊಲೀಸರ ಭೇಟಿ, ವಿಚಾರಣೆ

ಹೌದು ಕೋವಿಡ್ ಗೆ ಸಂಜೀವಿನಿಯಾಗಿದ್ದಂತ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯನ್ನು ( Covaxine ) ಕೇಳುವವರೇ ಇಲ್ಲದಂತೆ ಆಗಿದೆ. ಹೀಗಾಗಿಯೇ 5 ಕೋಟಿ ಡೋಸ್ ವ್ಯರ್ಥವಾಗುವ ಹಂತಕ್ಕೆ ತಲುಪಿದೆ ಎಂಬುದಾಗಿ ತಿಳಿದು ಬಂದಿದೆ.

ನಾಳೆ ಮುಂದಿನ 3 ವರ್ಷಗಳ ನಂತ್ರ ಸಂಭವಿಸುವ ‘ಸಂಪೂರ್ಣ ಚಂದ್ರಗ್ರಹಣ’ 2022: ಈ ಕುರಿತ ವಿಶೇಷತೆ ಮಾಹಿತಿ ಇಲ್ಲಿದೆ | Total lunar eclipse 2022

ಅಂದಹಾಗೇ ದೇಶದಲ್ಲಿ ಬಹುತೇಕ ಜನರು ಎರಡು ಡೋಸ್ ಕೋವಿಡ್ ಲಸಿಕೆ ( Corona Vaccine ) ಪಡೆದಿರೋ ಕಾಣರದಿಂದಾಗಿಯೇ, ಲಸಿಕೆಗೆ ಬೇಡಿಕೆ ಕುಸಿತ ಕಂಡಿದೆ. ಆದರೂ ವಾರ್ಷಿಕವಾಗಿ ಒಂದು ಬಿಲಯನ್ ಉತ್ಪಾದನೆ ಗುರಿಯೊಂದಿಗೆ ಲಸಿಕೆ ಅಭಿವೃದ್ಧಿಪಡಿಸಿದ್ದ ಭಾರತ್ ಬಯೋಟೆಕ್ ಕಂಪನಿಯ ಬಳಿಯಲ್ಲಿ, ಈಗ 20 ಕೋಟಿ ಕೋವ್ಯಾಕ್ಸಿನ್ ಡೋಸ್ ಲಭ್ಯವಿದೆ. ಈ ಲಸಿಕೆಯಲ್ಲಿ 5 ಕೋಟಿ ಡೋಸ್ ಅವಧಿ 2023ರ ವರ್ಷಾರಂಭದಲ್ಲಿ ಅಂತ್ಯಗೊಳ್ಳಲಿದೆ. ಇದರಿಂದ ಕಂಪನಿಗೆ ಭಾರೀ ನಷ್ಟ ಕೂಡ ಉಂಟಾಗಲಿದೆ.

BIGG NEWS : ಪೋಕ್ಸೋ ಪ್ರಕರಣ : ಮುರುಘಾ ಶ್ರೀ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ : ಮತ್ತು ಬರುವ ಔಷಧ ಬೆರಸಿ ಮಕ್ಕಳ ಮೇಲೆ ರೇಪ್ !

ಭಾರತದಲ್ಲಿ ಈವರೆಗೆ 219.17 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಶೇ.90ರಷ್ಟು ಮಂದಿ ಎರಡು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಹೀಗಾಗಿ ಕೋವಿಡ್ ಸೋಂಕಿನ ಸಂಖ್ಯೆ ಕೂಡ ಕುಸಿತಗೊಂಡಿದೆ ಎಂದು ಆರೋಗ್ಯ ಸಚಿವಾಲಯದ ದತ್ತಾಂಶದಿಂದ ತಿಳಿದು ಬಂದಿದೆ.

Share.
Exit mobile version