ಚಿಕ್ಕಮಗಳೂರು: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ತುಂಗಾನದಿ ಕಾಲುವೆಯಲ್ಲಿ ಕಾರಿನ ಸಹಿತ ಶವವಾಗಿ ಪತ್ತೆಯಾಗಿದ್ದರು. ಈ ಹಿನ್ನಲೆಯಲ್ಲಿ ಅವರು ವಿನಯ್ ಗುರೂಜಿ ಭೇಟಿಯಾಗೋದಕ್ಕೆ ಹೋಗುತ್ತಿರೋದಾಗಿ ಹೇಳಿ ಮನೆಯಿಂದ ತೆರಳಿ, ಶವವಾಗಿ ಪತ್ತೆಯಾಗಿದ್ದ ಕಾರಣ, ಪೊಲೀಸರು ಆಶ್ರಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

BIG NEWS: ‘ಪುನೀತ್ ರಾಜ್ ಕುಮಾರ್ ಅಭಿಮಾನಿ’ಗಳಿಗೆ ಗುಡ್ ನ್ಯೂಸ್: ಇಂದಿನಿಂದ ನ.10ರವರೆಗೆ ‘ಗಂಗಧಗುಡಿ ಚಿತ್ರ’ದ ‘ಟಿಕೆಟಿ ದರ’ ಇಳಿಕೆ

ಅಕ್ಟೋಬರ್ 31ರಂದು ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಗುರೂಜಿ ಭೇಟಿಯಾಗಿ ಬರೋದಾಗಿ ಮನೆಯಲ್ಲಿ ಹೇಳಿ ತೆರಳಿದ್ದರು. ಆದ್ರೇ ಹೀಗೆ ತೆರಳಿದ್ದಂತ ಅವರು ನಾಪತ್ತೆಯಾಗಿದ್ದರು. ಆದ್ರೇ ನಾಲ್ಕು ದಿನದ ಬಳಿಕ ತುಂಗಾ ನದಿ ಕಾಲುವೆಯಲ್ಲಿ ಕಾರಿನ ಸಹಿತ ಬಳಿಕ ಶವವಾಗಿ ಪತ್ತೆಯಾಗಿದ್ದರು.

ಇಂದಿನ ಇಡಿ ವಿಚಾರಣೆಗೆ ‘ಡಿ.ಕೆ ಶಿವಕುಮಾರ್’ ಗೈರು, ‘ಸಂಸದ ಡಿ.ಕೆ ಸುರೇಶ್’ ಹಾಜರ್ | DK Brothers

ಈ ಹಿನ್ನಲೆಯಲ್ಲಿ ಇಂದು ವಿನಯ್ ಗುರೂಜಿ ಆಶ್ರಮಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಅಲ್ಲದೇ ಚಂದ್ರಶೇಖರ್ ಬಂದಿದ್ದರ ಬಗ್ಗೆ ಮಾಹಿತಿಯನ್ನು ವಿನಯ್ ಗುರೂಜಿ ಬಳಿ ಪಡೆದಿದ್ದಾರೆ. ಈ ವೇಳೆ ಪೊಲೀಸರಿಗೆ ಅವರು ಚಂದ್ರಶೇಖರ್ ಬಂದಿದ್ದೇನೋ ನಿಜ. ಆಶ್ರಮಕ್ಕೆ ಭೇಟಿ ನೀಡುವಂತ ಹೊತ್ತು ಇದಲ್ಲ. ಇಷ್ಟು ಲೇಟ್ ನೈಟ್ ಯಾಕೆ ಬಂದೆ ಎಂಬುದಾಗಿ ಪ್ರಶ್ನಿಸಿದ್ದಾಗಿಯೂ ಹೇಳಿರುವುದಾಗಿ ತಿಳಿದು ಬಂದಿದೆ.

ರಾಜ್ಯದ ‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ವೇತನ ಆಯೋಗ ರಚನೆ’

ಆದ್ರೇ ಚಂದ್ರಶೇಖರ್ ಅವರು ನಾಪತ್ತೆ ಬಳಿಕ ಅವರಿಗೆ ಒಂದೇ ಮೊಬೈಲ್ ಸಂಖ್ಯೆಯಿಂದ 10 ಬಾರಿ ಕರೆ ಬಂದಿರೋದಾಗಿ ತಿಳಿದು ಬಂದಿದೆ. ಈ ಮೂಲಕ ಈಗ ಅವರ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೂಡ ಸಿಕ್ಕಿದೆ. ಈ ಬಗ್ಗೆಯೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Share.
Exit mobile version