ಬೆಂಗಳೂರು: ಹೊಸ ಹೆಚ್ ಆರ್ ಪಾಲಿಸಿಯಿಂದಾಗಿ ರಾಜ್ಯದ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ನೌಕರರು ಆತಂಕದಲ್ಲಿ ಇದ್ದರು. ಕೆಲಸ ಕಳೆದುಕೊಳ್ಳುವಂತ ಭೀತಿ ಕೂಡ ಎದುರಾಗಿತ್ತು. ಈ ಸಂದರ್ಭದಲ್ಲೇ ಎನ್ ಹೆಚ್ ಎಂ ಸಿಬ್ಬಂದಿಗಳನ್ನು ಕೆಲಸದಿಂದ ಕೈಬಿಡದಂತೆ ಸೂಚಿಸಲಾಗುವುದು ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರ ಮೂಲಕ KSHCOEA ಸಂಘವು ಭೇಟಿ ಮಾಡಲಾಗಿತ್ತು. ರಾಜ್ಯದ ಎನ್ ಹೆಚ್ ಎಂ ಸಿಬ್ಬಂದಿಗಳಿಗಾಗಿ ಜಾರಿಗೊಳಿಸಲು ಹೊರಟಿಸುವಂತ ಹೆಚ್ ಆರ್ ಪಾಲಿಸಿ, ಅದರಿಂತ ನೌಕರರಿಗೆ ಆಗುವಂತ ತೊಂದರೆಗಳ ಬಗ್ಗೆ ಸಂಘದಿಂದ ಸಿಎಂ ಸಿದ್ಧರಾಮಯ್ಯ ಅವರ ಗಮನಕ್ಕೆ ತರಲಾಯಿತು.
ರಾಷ್ಟೀಯ ಆರೋಗ್ಯ ಅಭಿಯಾನದ 30 ಸಾವಿರ ಸಿಬ್ಬಂದಿಗಳನ್ನು ಕಡ್ಡಾಯ ವರ್ಗಾವಣೆ ಮತ್ತು ಮರು ನೇಮಕಾತಿ ಮಾಡುವ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ದಿನಾಂಕ 28.10.2025 ರಂದು ಪ್ರಸ್ತಾವನೆ ಸಲ್ಲಿಸಲು ಆದೇಶ ಹೊರಡಿಸಿದ್ದನ್ನು KSHCOEA ಸಂಘದ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ಸ್ವಾಮಿ ಅವರು ಮುಖ್ಯಮಂತ್ರಿಗಳ ಮುಂದೆ ಕೂಲಂಕುಶವಾಗಿ ವಿವರಿಸಿದರು.
ಆ ಮಾಹಿತಿ ಪಡೆದಂತ ಸಿಎಂ ಸಿದ್ಧರಾಮಯ್ಯ ಅವರು, ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಎನ್ ಹೆಚ್ ಎಂ ಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವಂತ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಡದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರಿಗೆ ಸೂಚಿಸುವುದಾಗಿ ಭರವಸೆ ನೀಡಿದರು. ಹೀಗಾಗಿ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಂತ ಎನ್ ಹೆಚ್ ಎಂ ನೌಕರರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಸಿಎಂ ಸಿದ್ಧರಾಮಯ್ಯ ಮಾಡಿದ್ದಾರೆ.
ಇನ್ನೂ KSHCOEA ಸಂಘದ ಮನವಿ ಆಲಿಸಿ, ನೌಕರರ ಸಮಸ್ಯೆ ಕೇಳಿ, ಸಕಾರಾತ್ಮಕವಾಗಿಯೇ ಪ್ರತಿಸ್ಪಂದಿಸಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಂಘದ ಅಧ್ಯಕ್ಷ ಶ್ರೀಕಾಂತ ಸ್ವಾಮಿ ಅವರು ನೌಕರರ ಪರವಾಗಿ ಧನ್ಯವಾದವನ್ನು ಸಲ್ಲಿಸಿದರು.
ಸಿಎಂ ಸಿದ್ಧರಾಮಯ್ಯ ಭೇಟಿಯ ನಿಯೋಗದಲ್ಲಿ ಬೆಳಗಾವಿ ಜಿಲ್ಲೆಯ ಡಿಪಿಎಂ ಪ್ರಕಾಶ, ಶಂಕರ್, ಜಯದೇವ್, ಸುನಿಲ್, BPM ನಿತಿನ್ ಶಿಂಧೆ, ಮಂಜುನಾಥ ಮತ್ತು ಧಾರವಾಡ ಜಿಲ್ಲೆಯ ಡಿಪಿಎಂ ಪ್ರಕಾಶ್, ಮಾರುತಿ ಕಾಮಕರ್ STLS, ಆರ್ ಬಿ ಎಸ್ ಕೆ ವೈದ್ಯರು, ಶುಶ್ರೂಷಕಾಧಿಕಾರಿಗಳು ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
ತೊಗರಿ, ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಿ: ಸಿಎಂ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ
ಹೀಗಿದೆ ಇಂದು ಬೆಳಗಾವಿಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ








