ಮಂಡ್ಯ: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಬಿಕ್ಕಟ್ಟಿನಿಂದಾಗಿ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತವು ಅನಿಲ ಸರಬರಾಜು ಕಂಪನಿಗಳ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಜಿಲ್ಲೆಯ ಗೃಹ ಬಳಕೆದಾರರು ಮತ್ತು ಅಗತ್ಯ ಸೇವೆಗಳಿಗೆ ಅನಿಲ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಗೃಹ ಬಳಕೆ ಸಿಲಿಂಡರ್‌ಗಳ ಜೊತೆಗೆ, ಸರ್ಕಾರಿ ಅನುದಾನಿತ ಹಾಸ್ಟೆಲ್‌ಗಳು, ಅಕ್ಷರ ದಾಸೋಹ ಸಂಸ್ಥೆಗಳು, ಆಸ್ಪತ್ರೆಗಳು, ಮಧ್ಯಾಹ್ನ ಉಪಹಾರ ಯೋಜನೆಯಡಿ ಆಹಾರ ವಿತರಿಸುವ ಸಂಸ್ಥೆಗಳು, ಮತ್ತು ಅಂಗನವಾಡಿಗಳಿಗೆ ಆದ್ಯತೆಯ ಮೇರೆಗೆ ವಾಣಿಜ್ಯ ಬಳಕೆ ಸಿಲಿಂಡರ್‌ಗಳನ್ನು ಸರಬರಾಜು ಮಾಡಲು ನಿರ್ದೇಶಿಸಲಾಗಿದೆ.
ಸಮರ್ಪಕ ವಿತರಣೆಯ ದೃಷ್ಟಿಯಿಂದ ಗೃಹ ಬಳಕೆ ಸಿಲಿಂಡರ್‌ಗಳ ಬುಕಿಂಗ್ ಅವಧಿಯನ್ನು ಗ್ರಾಮಾಂತರ ಪ್ರದೇಶಕ್ಕೆ 45 ದಿನಗಳು ಮತ್ತು ನಗರ ಪ್ರದೇಶಕ್ಕೆ 25 ದಿನಗಳವರೆಗೆ ನಿಗದಿಪಡಿಸಲಾಗಿದೆ. ಆದ್ದರಿಂದ, ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಅನಗತ್ಯವಾಗಿ ತುರ್ತು ಬುಕ್ಕಿಂಗ್ ಮಾಡಬಾರದು ಅಥವಾ ವಿತರಣಾ ಏಜೆನ್ಸಿಗಳಲ್ಲಿ ಸಾಲುಗಟ್ಟಿ ನಿಲ್ಲಬಾರದು ಎಂದು ಕೋರಲಾಗಿದೆ.
ಬುಕಿಂಗ್ ಮಾಡಿದ ನಂತರವೂ ಸಿಲಿಂಡರ್ ವಿತರಣೆಯಾಗದಿದ್ದರೆ, ಸಾರ್ವಜನಿಕರು ಜಿಲ್ಲಾಡಳಿತದ ಕಂಟ್ರೋಲ್ ರೂಂ ಸಂಖ್ಯೆ: 08232-224655 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳ ಪರವಾಗಿ ಪ್ರಕಟಣೆ ತಿಳಿಸಿದೆ.
ಮಂಡ್ಯದ ಮದ್ದೂರಿನ ಗೊರವನಹಳ್ಳಿ ಗ್ರಾಮದಲ್ಲಿ ಲಘು ಲಾಠಿಚಾರ್ಜ್, ಉದ್ವಿಗ್ನ ವಾತಾವರಣ
ಮೊಸರು ಬೇಗನೆ ಹಾಳಾಗುತ್ತದೆಯೇ? ಹೀಗೆ ಸಂಗ್ರಹಿಸಿದರೆ, ಒಂದು ವಾರ ತಾಜಾವಾಗಿರುತ್ತದೆ!








