ನವದೆಹಲಿ : ದೇಶದಲ್ಲಿ ನಡೆಯಲಿರುವ ಎಲ್ಲಾ ಚುನಾವಣೆಗಳಿಗೂ ಮುಖ್ಯ ಚುನಾವಣಾ ಆಯೋಗವು ದೊಡ್ಡ ಬದಲಾವಣೆಯನ್ನ ತಂದಿದೆ. ಬುಧವಾರ, ಚುನಾವಣಾ ಆಯೋಗವು 15 ದಿನಗಳಲ್ಲಿ ಮತದಾರರ ಕಾರ್ಡ್ (EPIC)ನ್ನ ಮನೆಗೆ ತಲುಪಿಸುವ ಹೊಸ ಪ್ರಕ್ರಿಯೆಯನ್ನ ಪ್ರಾರಂಭಿಸಿದೆ ಎಂದು ಹೇಳಿದೆ. ಹೊಸ ಮತದಾರರನ್ನ ನೋಂದಾಯಿಸಿಕೊಂಡಾಗ ಅಥವಾ ಹಳೆಯ ಮತದಾರರ ಮಾಹಿತಿಯಲ್ಲಿ ಯಾವುದೇ ಬದಲಾವಣೆಯ ಸಂದರ್ಭದಲ್ಲಿ ಈ ಸೌಲಭ್ಯ ಅನ್ವಯವಾಗುತ್ತದೆ.
ಇಲ್ಲಿಯವರೆಗೆ ಜನರು ತಮ್ಮ ಮತದಾರರ ಚೀಟಿಗಳನ್ನ ಪಡೆಯಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಹೊಸ ಪ್ರಕ್ರಿಯೆಯಡಿಯಲ್ಲಿ, ಮತದಾರರ ಚೀಟಿ ತಯಾರಿಕೆಯಿಂದ ಹಿಡಿದು ಅಂಚೆ ಇಲಾಖೆಯ ಮೂಲಕ ಮನೆಗೆ ತಲುಪುವವರೆಗೆ ಪ್ರತಿಯೊಂದು ಹಂತವನ್ನ ಟ್ರ್ಯಾಕ್ ಮಾಡಲಾಗುತ್ತದೆ. ಇದರರ್ಥ ಈಗ ಇಡೀ ವ್ಯವಸ್ಥೆಯನ್ನ ನೈಜ ಸಮಯದಲ್ಲಿ ಪತ್ತೆ ಹಚ್ಚಲಾಗುತ್ತದೆ. ಇದರೊಂದಿಗೆ, ಪ್ರತಿ ಹಂತದ ಬಗ್ಗೆ ಮಾಹಿತಿಯನ್ನ ಮತದಾರರಿಗೆ SMS ಮೂಲಕ ನೀಡಲಾಗುವುದು, ಇದರಿಂದ ಅವರ ಮತದಾರರ ಕಾರ್ಡ್ ಎಲ್ಲಿಗೆ ತಲುಪಿದೆ ಎಂದು ಅವರು ತಿಳಿದುಕೊಳ್ಳಬಹುದು.
ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.!
ಆನ್ಲೈನ್ನಲ್ಲಿ ಮತದಾರರ ಗುರುತಿನ ಚೀಟಿ ಪಡೆಯಲು, ನೀವು ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್’ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಪ್ಲೇ ಸ್ಟೋರ್ನಿಂದ ಭಾರತ ಚುನಾವಣಾ ಆಯೋಗದ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್’ನ ಸಹಾಯದಿಂದ, ನೀವು ಆನ್ಲೈನ್’ನಲ್ಲಿ ಮತದಾರರ ಗುರುತಿನ ಚೀಟಿಯನ್ನ ಪಡೆಯಬಹುದು ಮತ್ತು ಮತದಾರರ ಗುರುತಿನ ಚೀಟಿಯಲ್ಲಿ ತಿದ್ದುಪಡಿಗಳನ್ನ ಮಾಡಬಹುದು.
ಹೊಸ ಮತದಾರರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ.?
* ಮೊದಲು ನಿಮ್ಮ ಮೊಬೈಲ್’ನಲ್ಲಿ ವೋಟರ್ ಹೆಲ್ಪ್ಲೈನ್ ಅಪ್ಲಿಕೇಶನ್ ಸ್ಥಾಪಿಸಿ.
* ನಂತ್ರ ಮತದಾರರ ನೋಂದಣಿಯ ಮೇಲೆ ಕ್ಲಿಕ್ ಮಾಡಿ.
* ಇದರ ನಂತರ, ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ವಿವರಗಳಂತಹ ಅಪ್ಲಿಕೇಶನ್’ನಲ್ಲಿ ಕೇಳಲಾದ ಮಾಹಿತಿ ಭರ್ತಿ ಮಾಡಿ.
* ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
* ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ಬಿಎಲ್ಒ ಪರಿಶೀಲನೆಯನ್ನ ಮಾಡುತ್ತಾರೆ ಮತ್ತು ನಿಮ್ಮ ಹೊಸ ವೋಟರ್ ಕಾರ್ಡ್’ನ್ನ ಮಾಡಿ ನಿಮ್ಮ ಮನೆಗೆ ಕಳುಹಿಸಲಾಗುತ್ತದೆ.
ಹಳೆಯ ಮತದಾರರ ಚೀಟಿಯಲ್ಲಿ ತಿದ್ದುಪಡಿ ಮಾಡುವುದು ಹೇಗೆ?
ಅದೇ ರೀತಿ, ನೀವು ವೋಟರ್ ಹೆಲ್ಪ್ಲೈನ್ ಅಪ್ಲಿಕೇಶನ್’ನಿಂದ ನಿಮ್ಮ ಹಳೆಯ ಮತದಾರರ ಗುರುತಿನ ಚೀಟಿಯಲ್ಲಿ ತಿದ್ದುಪಡಿಗಳನ್ನ ಮಾಡಬಹುದು. ಇದಕ್ಕಾಗಿ, ನೀವು ಅಪ್ಲಿಕೇಶನ್’ನ ಕೊನೆಯಲ್ಲಿರುವ ದೂರು ಮತ್ತು ನೋಂದಣಿ ಆಯ್ಕೆಯನ್ನ ಕ್ಲಿಕ್ ಮಾಡಬೇಕಾಗುತ್ತದೆ. ಅದರ ನಂತರ ನೀವು ಕೆಲವು ಪ್ರಮುಖ ವಿವರಗಳನ್ನ ಭರ್ತಿ ಮಾಡಬೇಕಾಗುತ್ತದೆ ಮತ್ತು 15 ದಿನಗಳ ನಂತರ ನಿಮ್ಮ ಹೊಸ ಮತದಾರರ ಗುರುತಿನ ಚೀಟಿ ಸಿದ್ಧವಾಗುತ್ತದೆ ಮತ್ತು ನಿಮ್ಮ ಮನೆಗೆ ತಲುಪಿಸಲಾಗುತ್ತದೆ.
ಬಳ್ಳಾರಿ: ಜೂ.20ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
‘ಇಂಡಿಗೋ ವಿಮಾನ’ದಲ್ಲಿ ತಾಂತ್ರಿಕ ದೋಷ ; ಬಾಗಿಲು ಓಪನ್ ಆಗದೇ ವಿಮಾನದಲ್ಲೇ ಅರ್ಧ ಗಂಟೆ ಸಿಲುಕಿಕೊಂಡ ಪ್ರಯಾಣಿಕರು