ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿರ್ದೇಶಕ ದಿನೇಶ್ ಸಕ್ಲಾನಿ ಅವರು ಪಠ್ಯಕ್ರಮದಲ್ಲಿನ ಬದಲಾವಣೆಗಳು ಮತ್ತು ಹಲವು ಪ್ರಮುಖ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ್ದಾರೆ. ಶಿಕ್ಷಣದ ಉದ್ದೇಶವು ಹಿಂಸಾತ್ಮಕ ಮತ್ತು ಅಸಡ್ಡೆ ನಾಗರಿಕರನ್ನು ಸೃಷ್ಟಿಸುವುದಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾವು ವಿದ್ಯಾರ್ಥಿಗಳಿಗೆ ಗಲಭೆಗಳ ಬಗ್ಗೆ ಏಕೆ ಕಲಿಸಬೇಕು? ಗುಜರಾತ್ ಗಲಭೆ, ಬಾಬರಿ ಮಸೀದಿ ಇತ್ಯಾದಿಗಳಿಗೆ ಸಂಬಂಧಿಸಿದ ಪುಸ್ತಕಗಳಲ್ಲಿ ಮಾಡಲಾದ ಬದಲಾವಣೆಗಳ ಕುರಿತು ಎನ್‌ಸಿಇಆರ್‌ಟಿ ಮುಖ್ಯಸ್ಥರು ಮಾತನಾಡಿದ್ದು, ಇದೇ ವೇಳೆ ಅವರು ಪಠ್ಯಪುಸ್ತಕಗಳಲ್ಲಿನ ತಿದ್ದುಪಡಿ ಜಾಗತಿಕ ಅಭ್ಯಾಸವಾಗಿದೆ, ಇದು ಶಿಕ್ಷಣದ ಹಿತಾಸಕ್ತಿಯಾಗಿದೆ. ಇತಿಹಾಸದಲ್ಲಿ ಹಿಂಸಾತ್ಮಕ ಮತ್ತು ಅನಾಗರಿಕ ಘಟನೆಗಳ ಬಗ್ಗೆ ಶಾಲಾ ಮಕ್ಕಳಿಗೆ ಕಲಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು, ಆದ್ದರಿಂದ ಸಾಕ್ಷ್ಯ ಮತ್ತು ಸತ್ಯಗಳ ಆಧಾರದ ಮೇಲೆ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಅಂತ ತಿಳಿಸಿದರು.