Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾರ್ಮುಜ್ ಜಲಸಂಧಿಯಲ್ಲಿ ಮಾರ್ಚ್‌ನಲ್ಲಿ ದಾಟಿದವು 220 ಬೃಹತ್ ಹಡಗುಗಳು: ಯುದ್ಧದ ಭೀತಿ ಮರೆತು ಸಾಗುತ್ತಿವೆ ತೈಲ ಟ್ಯಾಂಕರ್‌ಗಳು!

04/04/2026 9:40 AM

ಆಂಜನೇಯನನ್ನು ಈ ರೀತಿ ಪೂಜಿಸುವುದರಿಂದ ವಾಹನಗಳಿಂದ ಆಗುವ ಎಲ್ಲಾ ಅಪಘಾತಗಳು ನಿವಾರಣೆಯಾಗುತ್ತವೆ.!

04/04/2026 9:38 AM

ಮನೆ ಕಟ್ಟುವವರಿಗೆ `GBA’ ಭರ್ಜರಿ ಗುಡ್ ನ್ಯೂಸ್ : ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

04/04/2026 9:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಪಾಲರು ಸರ್ಕಾರದ ಪ್ರತಿದಿನದ ತೀರ್ಮಾನಗಳ ಬಗ್ಗೆ ಮಾಹಿತಿ ಕೇಳಿದ ಉದಾಹರಣೆಗಳೇ ಇಲ್ಲ: ಗೃಹ ಸಚಿವ ಪರಮೇಶ್ವರ್
KARNATAKA

ರಾಜ್ಯಪಾಲರು ಸರ್ಕಾರದ ಪ್ರತಿದಿನದ ತೀರ್ಮಾನಗಳ ಬಗ್ಗೆ ಮಾಹಿತಿ ಕೇಳಿದ ಉದಾಹರಣೆಗಳೇ ಇಲ್ಲ: ಗೃಹ ಸಚಿವ ಪರಮೇಶ್ವರ್

By kannadanewsnow0923/09/2024 2:31 PM

ಬೆಂಗಳೂರು : ರಾಜ್ಯಪಾಲರದ್ದು ಅತ್ಯಂತ ಜವಾಬ್ದಾರಿಯುತ ಮತ್ತು ಗೌರವಯುತ ಸ್ಥಾನ. ಪ್ರಥಮಬಾರಿಗೆ ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಆಶಯಗಳನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎಂಬುದು ರಾಜ್ಯಪಾಲರ ಜವಾಬ್ದಾರಿಯಾಗಿದೆ. ದಿನನಿತ್ಯ ಆಡಳಿತ ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ಮತ್ತು ಸರ್ಕಾರಕ್ಕೆ ಇದೆ. ಆದರೆ, ಪ್ರಥಮಬಾರಿಗೆ ರಾಜ್ಯಪಾಲರು, ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುವುದಾಗಲಿ ಅಥವಾ ಮಧ್ಯಪ್ರವೇಶಿಸುವುದನ್ನಾಗಲಿ ಎಲ್ಲಿಯೂ ಕೇಳಿಲ್ಲ‌ ಎಂದರು.

35 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಇಲ್ಲಿಯವರೆಗೆ ಅನೇಕ ರಾಜ್ಯಪಾಲರನ್ನು ಮತ್ತು ಮುಖ್ಯಮಂತ್ರಿಗಳನ್ನು ನಾವೆಲ್ಲ ನೋಡಿದ್ದೇವೆ. ಇಂತಹ ಸಂದರ್ಭ ಯಾವತ್ತು ಬಂದಿಲ್ಲ. ರಾಜ್ಯಪಾಲರು ಸರ್ಕಾರದ ಪ್ರತಿನಿತ್ಯದ ಕೆಲಸಗಳು ಮತ್ತು ತೀರ್ಮಾನಗಳ ಬಗ್ಗೆ ಮಾಹಿತಿ ಕೊಡಿ ಅಂತ ಕೇಳಿದ್ದ ಉದಾಹರಣೆಗಳೇ ಇಲ್ಲ ಎಂದು ಹೇಳಿದರು.

ಯಾವಾಗಲಾದರೂ ಒಮ್ಮೆ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಕಾನೂನು ಸುವ್ಯವಸ್ಥೆಯ ವಿಚಾರ ಇದ್ದರೆ ಗೃಹ ಸಚಿವರು ಹೋಗಿ ರಾಜ್ಯಪಾಲರಿಗೆ ವಿವರಿಸುತ್ತಾರೆ. ಸಂಬಂಧಪಟ್ಟ ಸಚಿವರನ್ನು ಕರೆಸಿ ಕೇಳುವುದಕ್ಕೆ ರಾಜ್ಯಪಾಲರಿಗೆ ಹಕ್ಕು ಇದೆ. ಆದರೆ, ದಿನನಿತ್ಯ ಪತ್ರ ಬರೆದು, ಪತ್ರದ ಮುಖಾಂತರ ಮಾಹಿತಿ ಕೊಡಿ ಅಂತ ಕೇಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು.

ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಒಳ್ಳೆಯ ಸಂಬಂಧವಿರಬೇಕು. ಆಂದಾಗ ರಾಜ್ಯದ ಮತ್ತು ಜನಗಳ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಏನು ತೀರ್ಮಾನ ತಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದರು.

ಎಲ್ಲದಕ್ಕು ಉತ್ತರಿಸುವ ಅನಿವಾರ್ಯತೆ ಇಲ್ಲ

ರಾಜ್ಯಪಾಲರಿಗೆ ಎಲ್ಲದಕ್ಕೂ ಉತ್ತರ ಕೊಡುವ ಅನಿವಾರ್ಯತೆ ಇಲ್ಲ. ಯಾವುದಕ್ಕೆ ಉತ್ತರ‌ಕೊಡಬೇಕು ಖಂಡಿತವಾಗಿಯೂ ಕೊಡುತ್ತೇವೆ. ಯಾವುದಕ್ಕೆ ಉತ್ತರಿಸುವ ಅನಿವಾರ್ಯತೆ ಇರುವುದಿಲ್ಲ, ಉತ್ತರ ಕೊಡುವುದಿಲ್ಲ. ಎಲ್ಲದಕ್ಕು ಉತ್ತರಿಸಬೇಕು ಅಂತೇನು ಇಲ್ಲ ಎಂದು ಹೇಳಿದರು.

ರಾಜ್ಯಪಾಲರು ಯಾವ ಉದ್ದೇಶಕ್ಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಅವರು ಏಕಾಏಕಿಯಾಗಿ ಚುನಾಯಿತ ಜನಪ್ರತಿನಿಧಿ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ನೀಡಿರುವುದನ್ನು ತಪ್ಪು ಅಂತ ಹೇಳಿ ಪ್ರತಿಭಟನೆ ನಡೆಸಿದ್ದೇವೆ. ಸುಮ್ಮನೇ ಪ್ರತಿಭಟನೆ‌ ನಡೆಸಿಲ್ಲ. ತನಿಖೆ‌ಯಾಗಿಲ್ಲ, ಯಾವುದೇ ವರದಿಯು ಇಲ್ಲ. ಯಾರೋ ದೂರು ನೀಡಿದರು ಎಂದ ಮಾತ್ರಕ್ಕೆ ಪರಿಶೀಲನೆ ನಡೆಸದೆಯೇ ಶೋಕಾಸ್ ನೋಟಿಸ್ ನೀಡಿರುವುದು ಸರಿಯಲ್ಲ ಎಂದರು.

ಮುಖ್ಯಂಮತ್ರಿಯವರಿಗೆ ಒಂದು ಮಾನದಂಡ, ಕುಮಾರಸ್ವಾಮಿಯವರಿಗೆ ಇನ್ನೊಂದು ಮಾನದಂಡ ಮಾಡಲಾಗುವುದಿಲ್ಲ. ಒಂದೇ ಮಾನದಂಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇವರಿಗೆ ನೋಟಿಸ್ ನೀಡಿದ್ದೀರಿ ಎಂದಾದರೆ ಅವರಿಗೂ ನೋಟಿಸ್ ನೀಡಬೇಕು. ಈ ಬಗ್ಗೆಯೂ ರಾಜ್ಯಪಾಲರನ್ನು ಪ್ರಶ್ನಿಸಿದ್ದೇವೆ ಎಂದರು.

ಮುಖ್ಯಂಮತ್ರಿಯವರಿಗೆ ಶೋಕಾಸ್ ನೋಟಿಸ್ ನೀಡಿರುವ ರೀತಿಯನ್ನು ಪ್ರಶ್ನಿಸಿ ಸಚಿವ ಸಂಪುಟದಲ್ಲಿ ಚರ್ಚಿಸಿದ್ದೇವೆ. ಅದರಲ್ಲೇನು ಗೌಪ್ಯತೆ ಇಲ್ಲ. ಸಂವಿಧಾನತ್ಮಕವಾಗಿ ರಾಜ್ಯಪಾಲರಿಗೆ ಸಲಹೆ ನೀಡುವ ಅವಕಾಶ ಇದೆ. ಹೀಗಾಗಿ, ಶೋಕಾಸ್ ನೋಟಿಸ್ ನೀಡಿರುವುದನ್ನು ಪುನರ್ ಪರಿಶೀಲಿಸುವಂತೆ ತಿಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು‌.

ಶಾಸಕ ಮುನಿರತ್ನ ಪ್ರಕರಣಸ ಕುರಿತು ಪ್ರತಿಕ್ರಿಯಿಸಿ, ಮುನಿರತ್ನ ವಿರುದ್ಧ ದಿನಕ್ಕೊಂದು ಪ್ರಕರಣಗಳು ಹೊರಬರುತ್ತಿವೆ. ಮೇಲ್ನೋಟಕ್ಕೆ ಒಂದು ಪ್ರಕರಣ ಎಂದು ಭಾವಿಸಲಾಗಿತ್ತು. ಈಗ ಬೇರೆಬೇರೆ ಪ್ರಕರಣಗಳು ಸೇರ್ಪಟೆಯಾಗುತ್ತಿವೆ. ಕೂಲಂಕುಷವಾಗಿ ತನಿಖೆ ನಡೆಯಬೇಕು ಎಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಅಗತ್ಯತೆ ಮೇರೆಗೆ ಎಸ್ಐಟಿ ರಚನೆ ಮಾಡಲಾಗಿದೆ. ಎಸ್ಐಟಿಯವರು ಮುನಿರತ್ನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ: ಸೆ24ರ ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

BREAKING : ಬೆಂಗಳೂರಲ್ಲಿ ‘CCB’ ಭರ್ಜರಿ ಬೇಟೆ : 1 ಕೋಟಿಗು ಅಧಿಕ ಮೌಲ್ಯದ ‘ಡ್ರಗ್ಸ್’ ಜೊತೆ ದಂಪತಿಗಳು ಅರೆಸ್ಟ್!

Share. Facebook Twitter LinkedIn WhatsApp Email

Related Posts

ಆಂಜನೇಯನನ್ನು ಈ ರೀತಿ ಪೂಜಿಸುವುದರಿಂದ ವಾಹನಗಳಿಂದ ಆಗುವ ಎಲ್ಲಾ ಅಪಘಾತಗಳು ನಿವಾರಣೆಯಾಗುತ್ತವೆ.!

04/04/2026 9:38 AM3 Mins Read

ಮನೆ ಕಟ್ಟುವವರಿಗೆ `GBA’ ಭರ್ಜರಿ ಗುಡ್ ನ್ಯೂಸ್ : ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

04/04/2026 9:32 AM2 Mins Read

ALERT : ಅಡುಗೆಮನೆಯಲ್ಲಿ ಅಡಗಿದೆ ‘ಸೈಲೆಂಟ್ ಕಿಲ್ಲರ್’: ಇಂದೇ ಇವುಗಳನ್ನು ಹೊರಹಾಕಿ, ಇಲ್ಲದಿದ್ದರೆ ಕ್ಯಾನ್ಸರ್ ಗ್ಯಾರಂಟಿ!

04/04/2026 9:08 AM2 Mins Read
Recent News

ಹಾರ್ಮುಜ್ ಜಲಸಂಧಿಯಲ್ಲಿ ಮಾರ್ಚ್‌ನಲ್ಲಿ ದಾಟಿದವು 220 ಬೃಹತ್ ಹಡಗುಗಳು: ಯುದ್ಧದ ಭೀತಿ ಮರೆತು ಸಾಗುತ್ತಿವೆ ತೈಲ ಟ್ಯಾಂಕರ್‌ಗಳು!

04/04/2026 9:40 AM

ಆಂಜನೇಯನನ್ನು ಈ ರೀತಿ ಪೂಜಿಸುವುದರಿಂದ ವಾಹನಗಳಿಂದ ಆಗುವ ಎಲ್ಲಾ ಅಪಘಾತಗಳು ನಿವಾರಣೆಯಾಗುತ್ತವೆ.!

04/04/2026 9:38 AM

ಮನೆ ಕಟ್ಟುವವರಿಗೆ `GBA’ ಭರ್ಜರಿ ಗುಡ್ ನ್ಯೂಸ್ : ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

04/04/2026 9:32 AM

ಇರಾನ್ ದಾಳಿಗೆ ಧೂಳೀಪಟವಾಯ್ತು ಎ-10 ‘ವಾರ್ಟ್‌ಹಾಗ್’! ವಿಡಿಯೋ ಬಿಡುಗಡೆ ಮಾಡಿ ಅಮೆರಿಕಕ್ಕೆ ಸವಾಲು ಹಾಕಿದ ಇರಾನ್ ಸೇನೆ | Watch video

04/04/2026 9:31 AM
State News
KARNATAKA

ಆಂಜನೇಯನನ್ನು ಈ ರೀತಿ ಪೂಜಿಸುವುದರಿಂದ ವಾಹನಗಳಿಂದ ಆಗುವ ಎಲ್ಲಾ ಅಪಘಾತಗಳು ನಿವಾರಣೆಯಾಗುತ್ತವೆ.!

By kannadanewsnow5704/04/2026 9:38 AM KARNATAKA 3 Mins Read

ಅಪಘಾತಗಳನ್ನು ತಪ್ಪಿಸಲು ಪೂಜೆ ಪ್ರತಿಯೊಂದು ಊರಿನ ಗಡಿಯಲ್ಲಿ ಕ್ಷೇತ್ರ ಪಾಲಕ ರಕ್ಷಕ ದೇವತೆ ಇರುತ್ತದೆ. ಈ ರಕ್ಷಕ ದೇವತೆಯನ್ನು ಪೂಜಿಸುವುದರಿಂದ…

ಮನೆ ಕಟ್ಟುವವರಿಗೆ `GBA’ ಭರ್ಜರಿ ಗುಡ್ ನ್ಯೂಸ್ : ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

04/04/2026 9:32 AM

ALERT : ಅಡುಗೆಮನೆಯಲ್ಲಿ ಅಡಗಿದೆ ‘ಸೈಲೆಂಟ್ ಕಿಲ್ಲರ್’: ಇಂದೇ ಇವುಗಳನ್ನು ಹೊರಹಾಕಿ, ಇಲ್ಲದಿದ್ದರೆ ಕ್ಯಾನ್ಸರ್ ಗ್ಯಾರಂಟಿ!

04/04/2026 9:08 AM

ಬೆಳ್ಳಂಬೆಳಗ್ಗೆ ಕೋಳಿಗಳು ಕೂಗುವುದೇಕೆ? ಬಯಲಾಯಿತು ವರ್ಷಗಳ ಹಿಂದಿನ ರಹಸ್ಯ!

04/04/2026 8:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.