Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ರಾಜ್ಯದ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: 26ನೇ ಕಂತಿನ ಹಣ ಬಿಡುಗಡೆ, ಖಾತಿಗೆ ಜಮಾ

27/02/2026 7:58 PM

BREAKING : ಮಾ. 28ರಿಂದ ಕ್ರಿಕೆಟ್ ಹಬ್ಬ ‘IPL’ ಆರಂಭ, ಮೇ 31ಕ್ಕೆ ಫೈನಲ್ ಪಂದ್ಯ |IPL 2026

27/02/2026 7:53 PM

ಹೋಳಿ ಹುಣ್ಣಿಮೆ ಚಂದ್ರಗ್ರಹಣದ ಸೂತಕದ ಸಮಯದಲ್ಲಿ ಈ ಮಂತ್ರ ತಪ್ಪದೇ ಪಠಿಸಿ

27/02/2026 7:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಎಂ ಸ್ಥಾನಕ್ಕೆ ಅರ್ಹತೆ ಇದ್ದರೂ ಆಸೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
KARNATAKA

ಸಿಎಂ ಸ್ಥಾನಕ್ಕೆ ಅರ್ಹತೆ ಇದ್ದರೂ ಆಸೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

By kannadanewsnow0917/01/2025 3:43 PM

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನನ್ನ ಅನುಭವ, ಸೇವೆ ಹಾಗೂ ಹಿರಿತನದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲಾ ರೀತಿಯ ಅರ್ಹತೆ ನನಗಿದೆ. ಆದರೆ ಆ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ನಮ್ಮ ಪಕ್ಷದಲ್ಲಿ ಹೈಕಮಾಂಡ್ ಪ್ರಬಲವಾಗಿದೆ. ಯಾವುದೇ ಸಮಸ್ಯೆಗಳನ್ನೂ ಸಮರ್ಥವಾಗಿ ನಿಭಾಯಿಸಲಿದೆ. ಪ್ರತಿಯೊಬ್ಬ ರಾಜಕಾರಣಿಗೂ ರಾಜಕೀಯದಲ್ಲಿ ಮೇಲ್ಮಟ್ಟದ ಹುದ್ದೆಗಳನ್ನು ಅಲಂಕರಿಸಬೇಕೆಂಬ ಆಕಾಂಕ್ಷೆ ಇರುತ್ತದೆ ಅದು ಸಹಜ. ಆದರೆ ಅದಕ್ಕೆ ಸಮಯ ಕೂಡಿಬರಬೇಕಿದೆ ಎಂದಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಸ್ಥಾನವೂ ಖಾಲಿ ಇಲ್ಲ, ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಖಾಲಿ ಇಲ್ಲ. ಹಾಗಾಗಿ ಆ ಸ್ಥಾನಗಳ ಬಗ್ಗೆ ಅಪೇಕ್ಷೆ ವ್ಯಕ್ತಪಡಿಸುವುದು ಸರಿಯಲ್ಲ. ನಮ್ಮ ಹೈಕಮಾಂಡ್ ಈ ವಿಷಯಗಳಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದರು.

ನಾನಂತೂ ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ

ಪಕ್ಷದ ವಿಚಾರದಲ್ಲಿ ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಹೇಳಬೇಕು. ಏನಾದರೂ ಇದ್ದರೆ ಸುರ್ಜೆವಾಲಾ ಅವರಿಗೆ ಹೇಳಲಿ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಬಿಜೆಪಿ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ವಿವಾದ ಭುಗಿಲೆದ್ದಿದೆ. ಅವರಲ್ಲಿ ನಾಯಕತ್ವಕ್ಕೆ ಐದಾರು ಬಣಗಳು ಸೃಷ್ಟಿಯಾಗಿವೆ. ಈ ಗೊಂದಲವನ್ನು ನಿವಾರಿಸಲಾಗದೆ ಕಾಂಗ್ರೆಸ್ ಮತ್ತು ನಾಯಕರು ಮೇಲೆ ಇಲ್ಲಸಲ್ಲದ ಆರೋಪಗಳಲ್ಲಿ ತೊಡಗಿದ್ದಾರೆ ಎಂದರು.

ಪ್ರತಿಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ವಿರೋಧ ಪಕ್ಷದ ನಾಯಕರು ಏನಾದರೂ ಹೇಳಲೇಬೇಕಲ್ಲವೇ ಅದಕ್ಕೆ ಹೇಳುತ್ತಾರೆ. ರಮೇಶ್ ಜಾರಕಿಹೊಳಿ ಅವರು ವಿಜಯೇಂದ್ರನ ಕೆಳಗಿಳಿಸಿ ಅಂದಿದ್ದಾರೆ. ನಿಮ್ಮದು ನೀವು ತೊಳೆದುಕೊಳ್ಳಿ, ಬೇರೆಯವರದು ಯಾಕೆ ತೊಳಿತಿರಾ? ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಬೇರೆಯವರ ತಟ್ಟೆಯಲ್ಲಿರುವ ನೊಣ ಯಾಕೆ ಹುಡುಕಬೇಕು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

BREAKING: ಉಲ್ಲಾಳ ಬ್ಯಾಂಕ್ ದರೋಡೆ ಕೇಸ್: ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ಧರಾಮಯ್ಯ ಮಹತ್ವ ಸಭೆ

BREAKING:ದೆಹಲಿಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ | Ayushman Bharat

Share. Facebook Twitter LinkedIn WhatsApp Email

Related Posts

GOOD NEWS: ರಾಜ್ಯದ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: 26ನೇ ಕಂತಿನ ಹಣ ಬಿಡುಗಡೆ, ಖಾತಿಗೆ ಜಮಾ

27/02/2026 7:58 PM2 Mins Read

ಹೋಳಿ ಹುಣ್ಣಿಮೆ ಚಂದ್ರಗ್ರಹಣದ ಸೂತಕದ ಸಮಯದಲ್ಲಿ ಈ ಮಂತ್ರ ತಪ್ಪದೇ ಪಠಿಸಿ

27/02/2026 7:49 PM3 Mins Read

ಪಿಜಿ ವೈದ್ಯಕೀಯ: ನಾಲ್ಕನೇ ಸುತ್ತು ಆರಂಭ, ಮಾ.3ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ

27/02/2026 7:45 PM1 Min Read
Recent News

GOOD NEWS: ರಾಜ್ಯದ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: 26ನೇ ಕಂತಿನ ಹಣ ಬಿಡುಗಡೆ, ಖಾತಿಗೆ ಜಮಾ

27/02/2026 7:58 PM

BREAKING : ಮಾ. 28ರಿಂದ ಕ್ರಿಕೆಟ್ ಹಬ್ಬ ‘IPL’ ಆರಂಭ, ಮೇ 31ಕ್ಕೆ ಫೈನಲ್ ಪಂದ್ಯ |IPL 2026

27/02/2026 7:53 PM

ಹೋಳಿ ಹುಣ್ಣಿಮೆ ಚಂದ್ರಗ್ರಹಣದ ಸೂತಕದ ಸಮಯದಲ್ಲಿ ಈ ಮಂತ್ರ ತಪ್ಪದೇ ಪಠಿಸಿ

27/02/2026 7:49 PM

ಪಿಜಿ ವೈದ್ಯಕೀಯ: ನಾಲ್ಕನೇ ಸುತ್ತು ಆರಂಭ, ಮಾ.3ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ

27/02/2026 7:45 PM
State News
KARNATAKA

GOOD NEWS: ರಾಜ್ಯದ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: 26ನೇ ಕಂತಿನ ಹಣ ಬಿಡುಗಡೆ, ಖಾತಿಗೆ ಜಮಾ

By kannadanewsnow0927/02/2026 7:58 PM KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ 26ನೇ ಕಂತಿನ ತಲಾ 2000 ರೂ. ಹಣ ಫಲಾನುಭವಿಗಳ ಖಾತೆಗೆ ಯಶಸ್ವಿಯಾಗಿ…

ಹೋಳಿ ಹುಣ್ಣಿಮೆ ಚಂದ್ರಗ್ರಹಣದ ಸೂತಕದ ಸಮಯದಲ್ಲಿ ಈ ಮಂತ್ರ ತಪ್ಪದೇ ಪಠಿಸಿ

27/02/2026 7:49 PM

ಪಿಜಿ ವೈದ್ಯಕೀಯ: ನಾಲ್ಕನೇ ಸುತ್ತು ಆರಂಭ, ಮಾ.3ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ

27/02/2026 7:45 PM

ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷರಾಗಿ ಯೋಗೇಶ್ ಬಾಬು ಮುಂದುವರೆಸಿ: ಸಿಎಂಗೆ ಡಿಸಿಎಂ ಡಿಕೆಶಿ ಪತ್ರ

27/02/2026 7:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.