ಶಿವಮೊಗ್ಗ: ಪರಿತ್ಯಕ್ತ ಸೇರಿದಂತೆ ಯಾವುದೇ ಮಕ್ಕಳು ಆಧಾರ್ ಇಲ್ಲದೇ ಸರ್ಕಾರಿ ಸೌಲಭ್ಯ ಪಡೆಯುವುದರಿಂದ ವಂಚಿತರಾಗದಂತೆ ನೋಡಿಕೊಳ್ಳಲು ‘ಸಾಥಿ’ ಅಭಿಯಾನ ಕೈಗೊಳ್ಳಲಾಗಿದ್ದು, ಇದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ತಿಳಿಸಿದರು.
ಪಾಲನೆ ಮತ್ತು ಸಂರಕ್ಷಣೆ ಬೇಕಾಗಿರುವ ಮಕ್ಕಳಿಗೆ ಆಧಾರ್ ನೋಂದಣಿ, ಸರ್ಕಾರಿ ಯೋಜನೆಗಳ ಸೇರ್ಪಡೆ ಮತ್ತು ಟ್ರ್ಯಾಕಿಂಗ್ಗಾಗಿ ‘ಸಾಥಿ’ ಅಭಿಯಾನದ ಅಂಗವಾಗಿ ಸಮಿತಿ ಸದಸ್ಯರುಗಳಿಗೆ ಶುಕ್ರವಾರ ಕೋರ್ಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿರುವನ್ವಯ ತಂದೆ-ತಾಯಿ ಇಲ್ಲದಿರುವ ಪರಿತ್ಯಕ್ತ ಮಕ್ಕಳು, ವಲಸೆ ಇನ್ನಾವುದೇ ಕಾರಣಗಳಿಂದ ಆಧಾರ್ ಹೊಂದಿರದ ಮಕ್ಕಳನ್ನು ಗುರುತಿಸಿ ಆಧಾರ್ ಕಾರ್ಡ್ ನೀಡಲು ‘ಸಾಥಿ’ (ಸರ್ವೇ ಆಫ್ ಆಧಾರ್ ಆಂಡ್ ಆಕ್ಸಸ್ ಟು ಟ್ರ್ಯಾಕಿಂಗ್ & ಹೊಲಿಸ್ಟಿಕ್ ಇನ್ಕು÷್ಲಷನ್) ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ಪರಿತ್ಯಕ್ತ ಮಕ್ಕಳಿಗೆ ಕಾನೂನು ಗುರುತು ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಪರಿತ್ಯಕ್ತ, ವಲಸೆ, ಹಾಗೂ ಇನ್ನಿತರೆ ಕಾರಣಗಳಿಂದ ಆಧಾರ್ ನೋಂದಣಿಯಾಗದ ಮಕ್ಕಳನ್ನು ಗುರುತಿಸಲು ಈಗಾಗಲೇ ಸರ್ವೇ ನಡೆಸಿ, ಹಲವು ಮಕ್ಕಳನ್ನು ಗುರುತಿಸಲಾಗಿದೆ.
ಗುರುತಿಸಲಾದ ಅನೇಕ ಮಕ್ಕಳಿಗೆ ಪೊಷಕರು ಇದ್ದಾರೆ. ಆದರೂ ಸಹ ಅವರಿಗೆ ಆಧಾರ್ ಇಲ್ಲ. ಉದಾಹರಣೆಗೆ ಹಕ್ಕಿಪಿಕ್ಕಿ ಕ್ಯಾಂಪ್, ಮರ ಕಡೆಯುವ ಕಾರ್ಮಿಕರು, ಇತರೆ ವಲಸೆ ಕಾರ್ಮಿಕರ ಪೋಷಕರಲ್ಲಿ ಯಾವುದೇ ದಾಖಲೆಗಳು ಇಲ್ಲದ ಕಾರಣ ಆಧಾರ್ ಮಾಡಿಸಲು ಸಾಧ್ಯವಾಗಿಲ್ಲ.
ಪೋಷಕರಿಗೆ ಯಾವುದೇ ರೀತಿಯ ದಾಖಲೆಗಳು ಇಲ್ಲದಿದ್ದರೆ, ಅಂತಹ ಪೋಷಕರು ತಮ್ಮ ಮೂಲ ನಿವಾಸಿ ದೃಢೀಕರಣ ಪಡೆದು, ಚುನಾವಣಾ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿ, ಗುರುತಿನ ಚೀಟಿ ಪಡೆದು, ಆ ದಾಖಲೆಯನ್ನು ನೀಡಿ ಆಧಾರ್ ಪಡೆಯಬಹುದು.
ಇ-ಸ್ವತ್ತು ಕರಡು ನಿಯಮಾವಳಿಗಳು ಈ ಮಾಸಾಂತ್ಯಕ್ಕೆ ಸಿದ್ಧ: ಸಚಿವ ಪ್ರಿಯಾಂಕ್ ಖರ್ಗೆ
BREAKING : ಯುವ ನಟನಿಗೆ ವಂಚನೆ, ಬೆದರಿಕೆ : ಖ್ಯಾತ ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ