Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM

Viral Video: ವೈರಲ್ ರೀಲ್‌ಗಾಗಿ ಯುವಕನ ಹುಚ್ಚಾಟ್ಟ: ರೈಲು ಹಳಿಗಳ ಮೇಲೆ ಮಲಗಿದ ಹುಡುಗ; ವಿಡಿಯೋ ವೈರಲ್

06/07/2025 6:20 PM

ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿಯೇ, ಧರೆಗುರುಳಿದ ಬೃಹತ್ ಗಾತ್ರದ ಮರ : ಎಲೆಕ್ಟ್ರಿಕ್ ಕಾರು ಸಂಪೂರ್ಣ ಜಖಂ!

06/07/2025 6:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BJP ಅಧ್ಯಕ್ಷ ಸ್ಥಾನದಿಂದ ಬಿ.ವೈ ವಿಜಯೇಂದ್ರ ಬದಲಾವಣೆ ಇಲ್ಲ: ಮಾಜಿ ಸಚಿವ ರೇಣುಕಾಚಾರ್ಯ
KARNATAKA

BJP ಅಧ್ಯಕ್ಷ ಸ್ಥಾನದಿಂದ ಬಿ.ವೈ ವಿಜಯೇಂದ್ರ ಬದಲಾವಣೆ ಇಲ್ಲ: ಮಾಜಿ ಸಚಿವ ರೇಣುಕಾಚಾರ್ಯ

By kannadanewsnow0927/09/2024 4:42 PM

ಬೆಂಗಳೂರು: ಯಾವುದೇ ಕಾರಣಕ್ಕೂ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿರುವ ಬಿ.ವೈ.ವಿಜಯೇಂದ್ರ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ರಾಜಾಧ್ಯಕ್ಷರಾದ ಮೇಲೆ ಹೊಸ ಚೈತನ್ಯ ಬಂದಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡುತ್ತಿದ್ದಾರೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ಹೇಗೆ ಕೆಳಗಿಳಿಸುತ್ತಾರೆ ನಾವು ನೋಡುತ್ತೇವೆ ಎಂದು ಎಚ್ಚರಿಸಿದರು.

ಇಲ್ಲಿಯ ತನಕ ನಾವ ಮಾತನಾಡಬಾರದೆಂದು ಸುಮ್ಮನಿz?ದÉ?ವೆ. ಆದರೆ ಕೆಲವರು ಪಕ್ಷದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ವರಿಷ್ಠರು. ಅವರನ್ನು ವಿರೋಧ ಮಾಡುತ್ತಿರುವುದು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಗುಡುಗಿದರು.

ವಿಜಯೇಂದ್ರ ಅನುಭವ, ಸಂಘಟನೆ, ಅವರ ಉಪ ಚುನಾವಣೆ ಗೆಲುವು ಎಲ್ಲಾ ನೋಡಿದ ಮೇಲೆ ಹೈಕಮಾಂಡ್ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ.ಅ ವರ ವಿರುದ್ದ ಏಕೆ ಮಾತಾಡುತ್ತಾರೆ? ಯಾವುದೇ ಕಾರಣಕ್ಕೂ ಅವರನ್ನು ಕೆಳಗೆ ಇಳಿಸಲು ಸಾಧ್ಯವಿಲ್ಲ. ಅಷ್ಟಕ್ಕೇನೂ ಅವರು ರೆಡಿಮೇಡ್ ಫುಡ್ಡಾ ಎಂದು ಪ್ರಶ್ನಿಸಿದರು.

ರಾಜ್ಯದ ಅಧ್ಯಕ್ಷ ಆದ ಮೇಲೆ ಕಾಲಿಗೆ ಚಕ್ರಕಟ್ಟಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರು ಅಧ್ಯಕ್ಷ ಆದ ಮೇಲೆ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಕಾಂಗ್ರೆಸ್ ಅಧಿಕಾರದಿಂದ ಬೇಸತ್ತಿರುವ ಜನತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾತನಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಒಂದು ವೇಳೆ ಅವರು ತಪ್ಪು ಮಾಡಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಕೊಡಬೇಕು ಹಾದಿಬೀದಿಯಲ್ಲಿ ಮಾತನಾಡುವುದರಿಂದ ಉಪಯೋಗವಿಲ್ಲ. ಒಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರೆ ನಾವು ಒಪ್ಪಿಕೊಳ್ಳುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಬೆಂಗಳೂರಿನಿಂದ ಮೈಸೂರುವರೆಗೆ ನಡೆದ ಮುಡಾ ಪಾದಯಾತ್ರೆ ಯಶಸ್ವಿಯಾಗಿದೆ. ಇದನ್ನು ಸಹಿಸದವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪಾದಯಾತ್ರೆಯನ್ನು ವಿರೋಧಿಸಿದವರು ಪಕ್ಷದ ಉಳಿವಿಗಾಗಿ ಮಾತನಾಡುತ್ತಿರುವುದು ದುರದೃಷ್ಟಕರ. ನಾವು ಮೌನವಾಗಿ ಇರೋರು ನಮ್ಮ ದೌರ್ಬಲ್ಯವಲ್ಲ. ಹಿಂದೆಯೇ ನಾವೆಲ್ಲ ಸೇರುತ್ತೇವೆ ಎಂದು ಹೇಳಿದ್ದವು ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಪರಿಣಾಮ ಬಿಜೆಪಿ ಪರಿಸ್ಥಿತಿ ಏನಾಯಿತು ಎಂಬುದನ್ನು ನೋಡಿಕೊಳ್ಳಬೇಕು.ದಾವಣಗೆರೆ, ಚಿಕ್ಕೋಡಿ ಮತ್ತಿತರ ಕಡೆ ಪಕ್ಷದ ಸೋಲಿಗೆ ಯಡಿಯೂರಪ್ಪ ಅವರೇ ಕಾರಣ. ಪಕ್ಷ ನಿಷ್ಠೆ ಬಗ್ಗೆ ಮಾತನಾಡುವವರು ಮೈಸೂರು, ಕೊಡುಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕವಾಗಿ ಸಭೆ ನಡೆಸುತ್ತಾರೆ ಎಂದರೆ ಏನರ್ಥ ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.

ಪಕ್ಷರ ಉಳುವಿಗಾಗಿ ಮುಂದೆ ನಾವು ಸಭೆ ಮಾಡ್ತೀವಿ. ಪಕ್ಷದ ಪರವಾಗಿ ಮುಂದೆ ನಾವು ಸಭೆ ಸೇರುತ್ತೇವೆ.ಸಂಘ ಪರಿವಾರ, ಹೈಕಮಾಂಡ್ ಒಟ್ಟಾಗಿ ಹೋಗಿ ಅಂತ ಹೇಳಿದ್ದಾರೆ. ಆದರು ಇವರು ಹೀಗೆ ಮಾಡ್ತಿದ್ದಾರೆ.ನಾವು ಹೈಕಮಾಂಡ್ ಬಳಿ ಹೋಗುತ್ತೇವೆ. ದಾವಣಗೆರೆ, ಚಿಕ್ಕೋಡಿ ಸೋಲಿಗ ಯಾರು ಕಾರಣ? ಮೈಸೂರಿನಲ್ಲಿ ಟಿಕೆಟ್ ಸಿಗದಕ್ಕೆ ವಿಜಯೇಂದ್ರ ಕಾರಣನಾ? ಯಡಿಯೂರಪ್ಪ ಅಧಿಕಾರ ಇದ್ದಾಗ ಇಂದ್ರ ಚಂದ್ರ ಅಂದರು. ಈಗ ಅವರ ವಿರುದ್ದ ಮಾತಾಡುತ್ತೀರಾ ಎಂದು ಪ್ರಶ್ನಿಸಿದರು.

ಶಾಸಕ ಬಿ.ಪಿ.ಹರೀಶ್ ರಾಜಕೀಯಕ್ಕೆ ಜನ್ಮ ಕೊಟ್ಟಿದ್ದು ಯಡಿಯೂರಪ್ಪ. ಇದನ್ನು ಮರೆಯಬಾರದು. ಅವರ ವಿರುದ್ದ ಮಾತಾಡ್ತೀರಾ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಶಿಸ್ತುಕ್ರಮ ತೆಗೆದುಕೊಳ್ಳಿ:

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ಮಾತನಾಡಿ, ಪಕ್ಷದ ವಿರೋಧ ಚಟುವಟಿಕೆ ಮಾಡುವವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಎಷ್ಟು ಪಾರ್ಟಿ ಬದಲಾವಣೆ ಮಾಡಿಕೊಂಡು ಬಂದರು ಇವತ್ತು ಮಾತಾಡುತ್ತಾರೆ. ಬಿಜೆಪಿ ಬಗ್ಗೆ ನಿಯತ್ತು ಇಲ್ಲದೆ ಜೆಡಿಎಸ್‍ಗೆ ಹೋಗಿದ್ದರು ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಭಿನ್ನಮತೀಯ ನಾಯಕರ ವಿರುದ್ಧ ಕಿಡಿಕಾರಿದರು.

ಯಡಿಯೂರಪ್ಪ ಅವರನ್ನ ಇಳಿಸಿ ಯಡಿಯೂರಪ್ಪ ಬೇರೆ ಪಕ್ಷ ಮಾಡಿದಾಗ ಬಿಜೆಪಿ ಪಕ್ಷ ನಡೆಸಲು ಆಗಲಿಲ್ಲ. ಪಕ್ಷ ಶಕ್ತಿ ಕಳೆದುಕೊಂಡಿತ್ತು. ಮತ್ತೆ ಯಡಿಯೂರಪ್ಪ ಬಂದರು ಅಧಿಕಾರಕ್ಕೆ ಮತ್ತೆ ಪಕ್ಷ ಬಂತು. ಯಡಿಯೂರಪ್ಪ ಇನ್ನು ಶಕ್ತಿ ಉಳಿಸಿಕೊಂಡಿದ್ದಾರೆ. ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಎಲ್ಲರನ್ನು ಪದಾಧಿಕಾರಿಗಳು ಮಾಡಲು ಸಾಧ್ಯವಿಲ್ಲ. ಪಾರ್ಟಿ ನಿಯಮಾನುಸಾರ ಯಾರನ್ನು ಮಾಡಲು ಸಾಧ್ಯವೋ ಮಾಡುತ್ತಾರೆ. ಕಾಂಗ್ರೆಸ್ ರೀತಿ ದೊಡ್ಡದಾಗಿ ಪದಾಧಿಕಾರಿಗಳು ಮಾಡಲು ಆಗೊಲ್ಲ. ಕೇಂದ್ರದ ಸೂಚನೆ ಪ್ರಕಾರ ಮಾಡಿz?ದÉ?ವೆ ಎಂದರು.

ಶಕ್ತಿ ಇರುವರು ಎಲ್ಲಿz?ದÉ?ನು? ಅವರನ್ನ ಮಾಡಿದರು, ಇವರನ್ನು ಮಾಡಿದರು ಎಂದರೆ ಹೇಗೆ? ಸಮಯ ಅನುಕೂಲ, ಸಂಧರ್ಭದಲ್ಲಿ ಪದಾಧಿಕಾರಿಗಳನ್ನು ಮಾಡುತ್ತಾರೆ. ನಾವು ಪಕ್ಷದ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ನಾನು ಆಕಾಂಕ್ಷಿ ಆಗಿದ್ದೆ. ಟಿಕೆಟ್ ಸಿಕ್ಕಿಲ್ಲ. ಆದರೆ ಪಕ್ಷ ಹೇಳಿತು ನಾವು ಪಕ್ಷದ ಕೆಲಸ ಮಾಡಿz?ದÉ?ವೆ. ಇದು ಪಕ್ಷ ನಿಷ್ಠೆ ಎಂದು ಸಮರ್ಥಿಸಿಕೊಂಡರು.

ಪಕ್ಷ ವಿರೋಧಿ ಚಟುವಟಿಕೆ ಯಾರೇ ಮಾಡಿದರೂ ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಜನತೆ ಗಮನಕ್ಕೆ: ಸೆ.29ರಂದು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

BREAKING: ರೇಣುಕಾಸ್ವಾಮಿ ಕೊಲೆ ಕೇಸ್: ಸೆ.30ಕ್ಕೆ ‘ನಟ ದರ್ಶನ್’ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ | Actor Darshan

BREAKING : ಸಿಎಂ ಬಳಿಕ ಖರ್ಗೆ ಕುಟುಂಬಕ್ಕೆ ಸಂಕಷ್ಟ : ‘ಭೂ ಕಬಳಿಕೆ’ ಆರೋಪದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ!

Share. Facebook Twitter LinkedIn WhatsApp Email

Related Posts

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM1 Min Read

ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿಯೇ, ಧರೆಗುರುಳಿದ ಬೃಹತ್ ಗಾತ್ರದ ಮರ : ಎಲೆಕ್ಟ್ರಿಕ್ ಕಾರು ಸಂಪೂರ್ಣ ಜಖಂ!

06/07/2025 6:19 PM1 Min Read

D K ಶಿವಕುಮಾರ್ ಅವರ ಭಕ್ತಿ, ಶ್ರದ್ಧೆ ವರ್ಣಿಸಲು ಅಸಾಧ್ಯ: ರಂಭಾಪುರಿ ಶ್ರೀ

06/07/2025 6:13 PM3 Mins Read
Recent News

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM

Viral Video: ವೈರಲ್ ರೀಲ್‌ಗಾಗಿ ಯುವಕನ ಹುಚ್ಚಾಟ್ಟ: ರೈಲು ಹಳಿಗಳ ಮೇಲೆ ಮಲಗಿದ ಹುಡುಗ; ವಿಡಿಯೋ ವೈರಲ್

06/07/2025 6:20 PM

ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿಯೇ, ಧರೆಗುರುಳಿದ ಬೃಹತ್ ಗಾತ್ರದ ಮರ : ಎಲೆಕ್ಟ್ರಿಕ್ ಕಾರು ಸಂಪೂರ್ಣ ಜಖಂ!

06/07/2025 6:19 PM

D K ಶಿವಕುಮಾರ್ ಅವರ ಭಕ್ತಿ, ಶ್ರದ್ಧೆ ವರ್ಣಿಸಲು ಅಸಾಧ್ಯ: ರಂಭಾಪುರಿ ಶ್ರೀ

06/07/2025 6:13 PM
State News
KARNATAKA

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

By kannadanewsnow0506/07/2025 6:26 PM KARNATAKA 1 Min Read

ಚಿಕ್ಕಮಗಳೂರು : ಚಿಕ್ಕಮಂಗಳೂರಲ್ಲಿ ಘೋರವಾದ ಘಟನೆ ನಡೆದಿದ್ದು, ಕಾಡುಕೋಣೆ ದಾಳಿಗೆ 52 ವರ್ಷದ ವ್ಯಕ್ತಿ ಒಬ್ಬರು ಬಲಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ…

ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿಯೇ, ಧರೆಗುರುಳಿದ ಬೃಹತ್ ಗಾತ್ರದ ಮರ : ಎಲೆಕ್ಟ್ರಿಕ್ ಕಾರು ಸಂಪೂರ್ಣ ಜಖಂ!

06/07/2025 6:19 PM

D K ಶಿವಕುಮಾರ್ ಅವರ ಭಕ್ತಿ, ಶ್ರದ್ಧೆ ವರ್ಣಿಸಲು ಅಸಾಧ್ಯ: ರಂಭಾಪುರಿ ಶ್ರೀ

06/07/2025 6:13 PM

7-7-25 ನಾಳೆ, 777 ಅತ್ಯಂತ ಶಕ್ತಿಶಾಲಿ ಕಾಸ್ಮಿಕ್ ದಿನವಾಗಿದೆ.

06/07/2025 6:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.