ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆಯ ಭ್ರಷ್ಟಾಚಾರ ಖಂಡಿಸಿ ಮದ್ಯ ಮಾರಾಟಗಾರರು ಪ್ರತಿಭಟನೆಗೆ ಇಳಿಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನವೆಂಬರ್.20ರಂದು ರಾಜ್ಯಾಧ್ಯಂತ ಎಣ್ಣೆ ಸಿಗೋದು ಡೌಟ್ ಎನ್ನಲಾಗುತ್ತಿದೆ.
ಈ ಬಗ್ಗೆ ಫೆಡರೇಷನ್ ಆಫ್ ವೈನ್ಸ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದಾಚಾರ್ಯ ಹೆಗ್ಡೆ ಅವರು ಮಾಹಿತಿ ಹಂಚಿಕೊಂಡಿದ್ದು, ರಾಜ್ಯದಲ್ಲಿನ ಅಬಕಾರಿ ನೀತಿ ಖಂಡಿಸಿ ನವೆಂಬರ್.20ರಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ರಾಜ್ಯ ಅಬಕಾರಿ ಇಲಾಖೆಯಲ್ಲಿ ದಿನೇ ದಿನೇ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಿ ಅಂತ ಸರ್ಕಾರದ ಗಮನಕ್ಕೆ ತಂದರೇ ಈವರೆಗೆ ಕ್ರಮವಹಿಸಿಲ್ಲ. ನಮ್ಮ ಜೊತೆಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಕೂಡ ಸಭೆ ಕರೆದು ಮಾತನಾಡಿಲ್ಲ ಎಂಬುದಾಗಿ ಕಿಡಿಕಾರಿದರು.
ರಾಜ್ಯದಲ್ಲಿನ ಅಬಕಾರಿ ನೀತಿ ವಿರುದ್ಧ ಮದ್ಯ ಮಾರಾಟಗಾರರು ನವೆಂಬರ್.20ರಂದು ಮದ್ಯ ಮಾರಾಟವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ. ಅದು ವೈನ್, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಯಾವುದೇ ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ. ಮದ್ಯ ಮಾರಾಟ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಸೋ ನವೆಂಬರ್.20ರಂದು ವೈನ್ ಶಾಪ್, ಬಾರ್, ರೆಸ್ಟೋರೆಂಟ್ ಗಳು ಬಂದ್ ಆಗಲಿದ್ದಾವೆ. ಅದು ಮದ್ಯ ಮಾರಾಟ ಬಂದ್ ಬಂದ್. ಕೇವಲ ಎಂಎಸ್ಐಎಲ್ ನಲ್ಲಿ ಮಾತ್ರವೇ ಎಣ್ಣೆ ಸಿಗಲಿದೆ. ಅದರ ಹೊರತಾಗಿ ರಾಜ್ಯಾಧ್ಯಂತ ಮದ್ಯ ಮಾರಾಟ ಬಂದ್ ಆಗಲಿದೆ.
ಮಕ್ಕಳ ದಿನಾಚರಣೆ: ಹೀಗಿದೆ ‘ಡಿಸಿಎಂ ಡಿಕೆಶಿ’ ವಿದ್ಯಾರ್ಥಿಗಳೊಂದಿಗೆ ಸಂವಾದದ ಪ್ರಮುಖ ಹೈಲೈಟ್ಸ್
ಶಾಸಕರನ್ನು ಖರೀದಿಸೋಕೇ ಅವರೇನು ಕುದುರೆಯೊ, ಕತ್ತೆಯೋ, ಅಥವಾ ದನಾನೋ? : MLC ಸಿಟಿ ರವಿ ಕಿಡಿ