ನವದೆಹಲಿ : ತಿರುಮಲ ಶ್ರೀ ವೆಂಕಟೇಶ್ವರ ಲಡ್ಡು ಪ್ರಸಾದ ವಿಷಯವು ದೇಶಾದ್ಯಂತ ಭಾರಿ ಕೋಲಾಹಲವನ್ನ ಸೃಷ್ಟಿಸಿದೆ. ಪವಿತ್ರ ಲಡ್ಡು ತಯಾರಿಕೆಯಲ್ಲಿ ಶುದ್ಧ ಹಸುವಿನ ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ಮಾಡಿದ ತುಪ್ಪವನ್ನ ಬಳಸಲಾಗಿದೆ ಎಂಬ ವರದಿಗಳ ಬಗ್ಗೆ ಭಕ್ತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವೈಎಸ್ಆರ್ಸಿಪಿ ಆಡಳಿತಾವಧಿಯಲ್ಲಿ ಟಿಟಿಡಿಗೆ ತುಪ್ಪವನ್ನ ಪೂರೈಸಿದ ತಮಿಳುನಾಡು ಮೂಲದ ಎಆರ್ ಡೈರಿ ಈ ಬಗ್ಗೆ ಪ್ರತಿಕ್ರಿಯಿಸಿದೆ. ಅವರು ಸರಬರಾಜು ಮಾಡಿದ ತುಪ್ಪದಲ್ಲಿ ಯಾವುದೇ ಕಲಬೆರಕೆ ಇಲ್ಲ ಎಂದಿದೆ.
ಜೂನ್, ಜುಲೈ ತಿಂಗಳಲ್ಲಿ ತಮ್ಮ ಡೈರಿಯಿಂದ ತುಪ್ಪ ಪೂರೈಕೆ ಮಾಡಿದ್ದೇವೆ ಎಂದ ಎಆರ್ ಡೈರಿ ಆಡಳಿತ ಮಂಡಳಿ, ಈಗ ಟಿಟಿಡಿಗೆ ತುಪ್ಪ ಪೂರೈಕೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡೆಸಿದೆ. “ನಾವು ಕಳೆದ 25 ವರ್ಷಗಳಿಂದ ಡೈರಿ ಸೇವೆಗಳನ್ನ ಒದಗಿಸುತ್ತಿದ್ದೇವೆ ಮತ್ತು ದೇಶಾದ್ಯಂತ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡುತ್ತಿದ್ದೇವೆ. ಅಂತಹ ಯಾವುದೇ ಆರೋಪಗಳನ್ನ ಸ್ವೀಕರಿಸಿಲ್ಲ” ಎಂದು ಹೇಳಿದರು.
ತಮ್ಮ ಸಂಸ್ಥೆಯ ವಿರುದ್ಧ ಇತ್ತೀಚಿನ ಆರೋಪಗಳ ಹಿನ್ನೆಲೆಯಲ್ಲಿ, ಟಿಟಿಡಿಗೆ ಸರಬರಾಜು ಮಾಡಿದ ತುಪ್ಪದ ಗುಣಮಟ್ಟದ ಮಾನದಂಡಗಳ ಬಗ್ಗೆ ಪರೀಕ್ಷೆಗಳನ್ನ ನಡೆಸಲಾಯಿತು ಎಂದು ಅದು ಹೇಳಿದೆ. ತುಪ್ಪದಲ್ಲಿ ಯಾವುದೇ ದೋಷಗಳಿಲ್ಲ ಎಂಬುದು ಪರೀಕ್ಷೆಗಳಿಂದ ತಿಳಿದುಬಂದಿದೆ. ಆದ್ರೂ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೇಳಿದ ಕೂಡಲೇ ಸೂಕ್ತ ವರದಿ ಕಳುಹಿಸಿದ್ದೇವೆ. ಆದರೆ ಟಿಟಿಡಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.
BREAKING: ಬೆಂಗಳೂರಲ್ಲಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಕೇಸ್: ಓರ್ವ ಯುವಕನನ್ನು ಪೊಲೀಸರು ವಶಕ್ಕೆ
ದುಬಾರಿ ರೀಚಾರ್ಜ್ ಗೆ ಬ್ರೇಕ್ : ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ | PM-Wi-Fi Hotspot
BREAKING: ರಾಜ್ಯ ಸರ್ಕಾರದಿಂದ ‘ಮುಜರಾಯಿ ಇಲಾಖೆ ದೇವಾಲಯ’ಗಳಲ್ಲಿ ಪ್ರಸಾದ ತಯಾರಿಕೆಗೆ ‘ನಂದಿನಿ ತುಪ್ಪ’ ಬಳಸಲು ಆದೇಶ