ಹೊಸನಗರ: ಹಳೇ ದ್ವೇಷ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಮೇಲೆ ಹಡಹಗಲೇ ಮಾರಣಾಂತಿಕ ಹಲ್ಲೆಯನ್ನು ದೇವರಾಜ್ ಎಂಬುವರು ನಡೆಸಿದ್ದರು. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿ ದೇವರಾಜ್ ಬಂಧಿಸಬೇಕು. ಈತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಬೇಕು ಎಂಬುದಾಗಿ ನಗರ ಠಾಣೆಯ ಪೊಲೀಸರಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತ ದೇವರಾಜ್ ಎಂಬಾತ ಹೊಸನಗರ ತಾಲ್ಲೂಕಿನ ನಿಟ್ಟೂರಿನ ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಮರ್ಮಾಂಗ ಹಿಸುಕಿ ಕೊಲೆಗೂ ಯತ್ನಿಸಿದ್ದರು. ಈ ಸಂಬಂಧ ನಾಗೋಡಿ ವಿಶ್ವನಾಥ್ ನೀಡಿದಂತ ದೂರಿನ ಹಿನ್ನಲೆಯಲ್ಲಿ ಹೊಸನಗರ ಪೊಲೀಸ್ ಠಾಣೆಯಲ್ಲಿ ದೇವರಾಜ್ ವಿರುದ್ಧ ಕೇಸ್ ದಾಖಲಾಗಿದೆ.
ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಮೇಲೆ ದೇವರಾಜ್ ಹಲ್ಲೆ ಮಾಡಿದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂತಗ ಗೂಂಡಾಗಿರಿ ವರ್ತನೆ ತೋರಿದಂತ ದೇವರಾಜ್ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ಹೊರ ಹಾಕಿದ್ದಾರೆ.
ಇಂದು ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದಂತ ಹೊಸನಗರ ತಾಲ್ಲೂಕು ಕೆಡಿಪಿ ಸದಸ್ಯರು, ಸಾರ್ವಜನಿಕರು, ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು ಪೊಲೀಸರನ್ನು ಭೇಟಿಯಾಗಿ ದೇವರಾಜ್ ಬಂಧಿಸುವಂತೆ ಒತ್ತಾಯಿಸಿದರು. ಜೊತೆಗೆ ಗೂಂಡಾ ಕಾಯ್ದೆಯಡಿ ರೌಡಿ ಶೀಟ್ ತೆರೆಯುವಂತೆ ಆಗ್ರಹಿಸಿ, ಮನವಿ ಪತ್ರ ಸಲ್ಲಿಸಿದರು.
ದೇವರಾಜ್ ಗುಂಡಾಗಿರಿ ಇದೇನು ಮೊದಲಲ್ಲ. ಕಳೆದ 4-5 ವರ್ಷಗಳಿಂದ ದೇವರಾಜ್ ಜನರನ್ನು ಬೆದರಿಸಿ, ಗುಂಡಾಗಿರಿ ನಡೆಸುತ್ತಿದ್ದಾನೆ. ಈತನ ವಿರುದ್ಧ ಈಗಾಗಲೇ ಹಲವು ಕೇಸ್ ಗಳು ದಾಖಲಾಗಿದ್ದಾವೆ. ಈತನ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗಿದೆ. ಈತನ ರೌಡಿಸಂಗೆ ಬ್ರೇಕ್ ಹಾಕುವಂತೆ ನಿಟ್ಟೂರು ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಪ್ರತಿಭಟನೆಯ ವೇಳೆ ಹೊಸನಗರ ತಾಲ್ಲೂಕು ಕೆಡಿಪಿ ಸದಸ್ಯ ನಾಗೇಂದ್ರ ಜೋಗಿ, ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ್ ಕುಂಬ್ಳೆ, ಶೋಭಾ ಉದಯ್, ರಾಘವೇಂದ್ರ ಆಚಾರ್, ಕಾಂಗ್ರೆಸ್ ಮುಖಂಡರಾದಂತ ಸತ್ಯನಾರಾಯಣ ಕೊಳಕಿ, ಮಂಜಪ್ಪ ಬೆನ್ನಟ್ಟೇ, ರವಿ ಚನ್ನಪ್ಪ ಸೇರಿದಂತೆ ಇತರರು ಹಾಜರಿದ್ದರು.
ಸಿಸೇರಿಯನ್ ಹೆರಿಗೆಗಳಿಗೆ ಕಡಿವಾಣ ಹಾಕಲು ನೂತನ ಕಾರ್ಯಕ್ರಮ ಜಾರಿ: ಸಚಿವ ದಿನೇಶ್ ಗುಂಡೂರಾವ್
ALERT : ಸಾರ್ವಜನಿಕರೇ ಎಚ್ಚರ : ಮೊಬೈಲ್ ನಲ್ಲಿ ಈ `ಗೇಮ್’ ಆಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗೋದು ಗ್ಯಾರಂಟಿ.!