ಪಾಟ್ನಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನ ಬಿಹಾರ ಪ್ರವಾಸದಲ್ಲಿದ್ದು, ಇಂದು ಬಿಹಾರದ ಪುರ್ನಿಯಾದಲ್ಲಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಸಚಿವರು ಭಾರೀ ವಾಗ್ದಾಳಿ ನಡೆಸಿದರು.

BREAKING NEWS: ವಿಪಕ್ಷಗಳ ಗದ್ದಲದ ನಡುವೆ ಮಹತ್ವದ ಭೂ ಕಬಳಿಕೆ, ಕರ್ನಾಟಕ ಸ್ಟ್ಯಾಪ್ 3ನೇ ತಿದ್ದುಪಡಿ ವಿಧೇಯಕ ಪರಿಷತ್ ನಲ್ಲಿ ಅಂಗೀಕಾರ

2024 ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರಿನಲ್ಲಿ  ಬಿಜೆಪಿಯ ಏಕವ್ಯಕ್ತಿ ಚುನಾವಣಾ ಪ್ರಚಾರವನ್ನು ಪರಿಣಾಮಕಾರಿಯಾಗಿ ಪ್ರಾರಂಭಿಸಿದರು.

ಕಳೆದ ತಿಂಗಳು ಬಿಜೆಪಿ ನೇತೃತ್ವದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಒಕ್ಕೂಟದಿಂದ ಹೊರಬಂದು ಕಾಂಗ್ರೆಸ್‌ನೊಂದಿಗೆ ಮಹಾಘಟಬಂಧನ್ (ಮಹಾಮೈತ್ರಿ) ಸೇರಿದ ನಂತರ ನಿತಿನ್ ಕುಮಾರ್ ರಾಜ್ಯದಲ್ಲಿ ಬಿಜೆಪಿ ಆಯೋಜಿಸಿದ ‘ಜನಭವನ ಮಹಾಸಭಾ’.ಮೊದಲ ರ್ಯಾಲಿಯಾಗಿದೆ.

ರ್ಯಾಲಿಯಲ್ಲಿ ಮಾತನಾಡಿದ ಗೃಹ ಸಚಿವರು, ರಾಜ್ಯದಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಕುರಿತಂತೆ ಜನರಿಗೆ ಮಾಹಿತಿ ನೀಡಿದರು. ಇದೇ ವೇಳೆ ನಿಮಗಾಗಿ ರಾಜ್ಯದಲ್ಲಿ ವಿಮಾನ ನಿಲ್ದಾಣ ನಿರ್ಮಿಸುತ್ತಿರುವುದಾಗಿ ತಿಳಿಸಿದರು.

ರ್ಯಾಲಿ ಬಳಿಕ ಅಮಿತ್ ಶಾ ಅವರು ಕಿಶನ್‌ಗಂಜ್‌ನಲ್ಲಿ ಬಿಹಾರದ ಬಿಜೆಪಿ ಸಂಸದರು, ಶಾಸಕರು ಮತ್ತು ಮಾಜಿ ಸಚಿವರೊಂದಿಗೆ ಕೇಂದ್ರ ಗೃಹ ಸಚಿವರು ಸಭೆ ನಡೆಸಲಿದ್ದಾರೆ. ಸಂಜೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯ ಅಧ್ಯಕ್ಷತೆಯನ್ನು ಅವರು ವಹಿಸಲಿದ್ದಾರೆ.

BREAKING NEWS : ಧಾರ್ಮಿಕ ಮತಾಂತರ ವಿವಾದ ; ಕೇಂದ್ರ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ | SC issues notice to Centre

Share.
Exit mobile version