ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಬೆಳಗಾವಿಯ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟಿದ್ದಂತ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕವನ್ನು ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನಪರಿಷತ್ ನಲ್ಲಿ ಮಂಡಿಸಿ, ಬಿಜೆಪಿ ಸರ್ಕಾರ ಅಂಗೀಕಾರ ಪಡೆದಿತ್ತು. ಈ ಬಳಿಕ ಇಂದು ವಿಧಾನಪರಿಷತ್ ನಲ್ಲಿ ಮಹತ್ವದ ಭೂ ಕಬಳಿಕ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಸ್ಟ್ಯಾಪ್ 3ನೇ ತಿದ್ದುಪಡಿ ವಿಧೇಯಕವನ್ನು ಮಂಡಿಸಿ, ಅಂಗೀಕಾರ ಪಡೆದಿದೆ.

BREAKING NEWS: ತನ್ನ ಆರು ಅಂಗಸಂಸ್ಥೆಳೊಂದಿಗೆ ವಿಲೀನಗೊಳ್ಳಲಿದೆ ʻಟಾಟಾ ಸ್ಟೀಲ್‌ʼ | Tata Steel Merged

ರಾಜ್ಯ ಸರ್ಕಾರದ 40% ಕಮೀಷನ್ ಆರೋಪ, ಪೇ ಸಿಎಂ ಪೋಸ್ಟರ್ ವೈರಲ್ ಗದ್ದಲದ ನಡುವೆಯೂ ಇಂದು ವಿಧಾನಮಂಡಲದ ಉಭಯ ಸದನಗಳ ಕಲಾಪ ನಡೆಯಿತು. ವಿಧಾನಸಭೆಯಲ್ಲಿ ವಿಪಕ್ಷಗಳ ನಾಯಕರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು. ವಿಪಕ್ಷಗಳ ನಾಯಕ ಈ ವರ್ತನೆಗೆ ಸ್ಪೀಕರ್ ಕಾಗೇರಿ ಗರಂ ಆಗಿ, ಕಿಡಿಕಾರಿದ ಘಟನೆಗೂ ಸದನ ಸಾಕ್ಷಿಯಾಯಿತು.

BIGG NEWS: BMS ಟ್ರಸ್ಟ್‌ ನಿಂದ ಒಂದು ಕುಟುಂಬಕ್ಕೆ ವರ್ಗಾವಣೆ; ಹೆಚ್.ಡಿ ಕುಮಾರಸ್ವಾಮಿ ಆರೋಪ

ಮತ್ತೊಂದೆಡೆ ವಿಧಾನ ಪರಿಷತ್ ನಲ್ಲಿಯೂ ರಾಜ್ಯ ಸರ್ಕಾರದ ಹಗರಣ, ಕಮೀಷನ್ ಆರೋಪದ ಬಗ್ಗೆ ಭಿತ್ತಿಪತ್ರ ಹಿಡಿದು ಸಭಾಪತಿ ಪೀಠಕ್ಕೆ ಎದುರು ನಿಂತಂತ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ನಡುವೆಯೂ ರಾಜ್ಯ ಸರ್ಕಾರದಿಂದ ವಿಧಾನಪರಿಷತ್ತಿನಲ್ಲಿ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಸ್ಟ್ಯಾಪ್ 3ನೇ ತಿದ್ದುಪಡಿ ವಿಧೇಯಕವನ್ನು ಮಂಡಿಸಿ, ಅಂಗೀಕಾರ ಪಡೆಯಲಾಯಿತು.

ಅಫ್ಘನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ವೇಳೇ ‘ಮಧ್ಯರಾತ್ರಿ’ ಪ್ರಧಾನಿ ಮೋದಿ ಜೈಶಂಕರ್ ಗೆ ಕರೆ ಮಾಡಿ ಕೇಳಿದ್ದೇನು ಗೊತ್ತಾ? | ‘Jaage ho?…’:

ರಾಜ್ಯ ಸರ್ಕಾರದಿಂದ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ತಿದ್ದುಪಡಿ ವಿಧೇಯಕ ಮಂಡಿಸಿದ್ದಕ್ಕೆ ಪರಿಷತ್ ಸದಸ್ಯ ಭೋಜೇಗೌಡ ಹಾಗೂ ಜೆಡಿಎಸ್ ಸದಸ್ಯರು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ ವಿಧಾನ ಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು.

Share.
Exit mobile version