ನವದೆಹಲಿ : ನ್ಯೂಯಾರ್ಕ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವರು, 2021 ರಲ್ಲಿ ತಾಲಿಬಾನ್ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದ ವೇಳೇಯಲ್ಲಿ ಭಾರತವು ಅಫ್ಘಾನಿಸ್ತಾನದಿಂದ ತನ್ನ ದೇಶದ ನಾಗರಿಕರನ್ನು ಸ್ಥಳಾಂತರಿಸುವಾಗ ನಡೆದ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ಹೇಗೆ ತಮ್ಮನ್ನು ತಾವು ಅರಿತುಕೊಂಡರು ಎಂಬುದನ್ನು ನೆನಪಿಸಿಕೊಂಡ ಘಟನೆ ನಡೆದಿದೆ.

 2021  ರಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ನೆನಪಿಸಿಕೊಂಡ ಜೈಶಂಕರ್, ಗುರುವಾರ ಇಲ್ಲಿ ನಡೆದ ಪುಸ್ತಕ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ, “ಅಂದು ಮಧ್ಯರಾತ್ರಿಯನ್ನು ಸಮಯದಲ್ಲಿ ಅಫ್ಘಾನಿಸ್ತಾನದ ಮಜರ್-ಎ-ಶರೀಫ್ನಲ್ಲಿರುವ ನಮ್ಮ ದೂತವಾಸ ಕಚೇರಿ ಮೇಲೆ ದಾಳಿ ನಡೆದಿತ್ತು. ಸಂಪರ್ಕಕ್ಕಾಗಿ ನಾವು ಫೋನ್ ಗಳನ್ನು ಬಳಸುತ್ತಿದ್ದೆವು, ಏನಾಯಿತು ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೆವು. ಈ ವೇಳೆ ನನ್ನ ಫೋನ್ ರಿಂಗಣಿಸಿತು. ಪ್ರಧಾನಿ ಕರೆ ಮಾಡಿದಾಗ, ಕಾಲರ್ ಐಡಿ ಇರುವುದಿಲ್ಲ. ಅವರ ಮೊದಲ ಪ್ರಶ್ನೆ -ಜಾಗೆ ಹೋ? (ನೀವು ಎಚ್ಚರವಾಗಿದ್ದೀರಾ?) ಎಂದು ಕೇಳಿದರು ಅಂತ ಜೈಶಂಕರ್ ಹೇಳಿದರು.

“ಜಾಗೆ ಹೋ?… ಅಚಾ ಟಿವಿ ದೇಖ್ ರಹೇ ಹೋ… ತೋ ಕ್ಯಾ ಹೋ ರಹಾ ಹ್ ವಹಾ (ಅಲ್ಲಿ ಏನು ನಡೆಯುತ್ತಿದೆ?)” ಎಂದು ಮೋದಿ ಅವರ ಕರೆ ಬಗ್ಗೆ ಜೈಶಂಕರ್ ಹೇಳಿದರು, . ಪ್ರಧಾನ ಮಂತ್ರಿಯವರೊಂದಿಗಿನ ದೂರವಾಣಿ ಕರೆಯನ್ನು ಉಲ್ಲೇಖಿಸಿ ಜೈಶಂಕರ್ ಭಾಷಣದ ಸಮಯದಲ್ಲಿ ಮಾತನಾಡುತ್ತ “ಇದು ಇನ್ನೂ ಒಂದೆರಡು ಗಂಟೆಗಳನ್ನು ತೆಗೆದುಕೊಳ್ಳಬಹುದು ಮತ್ತು ನಾನು ಕಾರ್ಯಚರಣೆ ಬಗ್ಗೆ ಕಚೇರಿಗೆ ಕರೆ ಮಾಡಿ ತಿಳಿಸುವೆ ಅಂತ ಹೇಳಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು – ‘ಮುಜೆ ಫೋನ್ ಕರ್ ದೇನಾ’ (ದಯವಿಟ್ಟು ನನಗೆ ಕರೆ ಮಾಡಿ)” ಎಂದು ಜೈಶಂಕರ್ ಹೇಳಿದರು ಅಂಥ ನೆನಪಿಸಿಕೊಂಡರು.

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಯುದ್ಧ ಭುಗಿಲೆದ್ದಿರುವ ಉಕ್ರೇನ್ನಲ್ಲಿ ನಾಗರಿಕರ ಸುರಕ್ಷತೆಗಾಗಿ ಅನೇಕ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಾಗಿದೆ.

BIGG NEWS: KG ಹಳ್ಳಿ ಗಲಭೆ ಪ್ರಕರಣ; PFI ಸಂಘಟನೆಯ 14ಮಂದಿ ಕಾರ್ಯಕರ್ತರು ಅರೆಸ್ಟ್‌

ವಿದ್ಯಾರ್ಥಿನಿಯರಿಂದಲೇ ಶಾಲೆಯ ಶೌಚಾಲಯ ಸ್ವಚ್ಛ… ಭಾರೀ ಚರ್ಚೆಗೆ ಗ್ರಾಸವಾದ ವೈರಲ್‌ ಫೋಟೋ

BIGG NEWS : ‘ಬೆಂಕಿ ಪೊಟ್ಟಣ’ ಬಳಸಿ ಬಾಂಬ್‌ ಬ್ಲಾಸ್ಟ್‌ ನಡೆಸಿದ್ದ ಶಂಕಿತ ಉಗ್ರ : ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ

 

 

Share.
Exit mobile version