ಪ್ಯಾರಿಸ್ : ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆಯೂ ಆದಂಥ ನೀತಾ ಅಂಬಾನಿ ಅವರ ಮೇಲೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಮತ್ತೊಮ್ಮೆವಿಶ್ವಾಸವನ್ನು ವ್ಯಕ್ತಪಡಿಸಿದೆ. ಐಒಸಿ ಸದಸ್ಯರಾಗಿ ಅವರು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಒಟ್ಟು 93 ಮತದಾರರು ಮತ ಚಲಾಯಿಸಿದ್ದು, ಎಲ್ಲ 93 ಮತಗಳು ನೀತಾ ಅಂಬಾನಿ ಪರವಾಗಿ ಅಂದರೆ ಶೇಕಡಾ ನೂರರಷ್ಟು ಮತಗಳು ಅವರಿಗೆ ಬಂದಿವೆ. ಅಂದಹಾಗೆ 2016ನೇ ಇಸವಿಯಲ್ಲಿ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ನೀತಾ ಅಂಬಾನಿ ಐಒಸಿ ಸದಸ್ಯೆಯಾಗಿ ಆಯ್ಕೆಯಾದರು. ನೀತಾ ಅವರು ರಿಲಯನ್ಸ್ ಫೌಂಡೇಷನ್‌ನ ಸಂಸ್ಥಾಪಕರು ಸಹ ಆಗಿದ್ದಾರೆ.
ತಮ್ಮ ಮರು ಆಯ್ಕೆ ಬಗ್ಗೆ ಮಾತನಾಡಿದ ನೀತಾ ಅಂಬಾನಿ, “ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆ ಆಗಿ ಮತ್ತೆ ನನ್ನನ್ನು ಚುನಾಯಿಸಿರುವುದಕ್ಕೆ ಅಪಾರವಾದ ಗೌರವವಿದೆ. ನನ್ನ ಮೇಲಿನ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ಐಒಸಿ ಅಧ್ಯಕ್ಷರಾದ ಬ್ಯಾಚ್ ಮತ್ತು ನನ್ನ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಮರುಚುನಾವಣೆಯು ನನಗೆ ವೈಯಕ್ತಿಕ ಮೈಲುಗಲ್ಲು ಮಾತ್ರವಲ್ಲ, ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಪ್ರಭಾವವನ್ನು ತೋರಿಸುತ್ತದೆ ಮತ್ತು ನಾನು ಈ ಸಂತೋಷ ಮತ್ತು ಹೆಮ್ಮೆಯ ಕ್ಷಣವನ್ನು ಪ್ರತಿ ಭಾರತೀಯರೊಂದಿಗೆ ಹಂಚಿಕೊಳ್ಳುವುದಕ್ಕೆ ಬಯಸುತ್ತೇನೆ. ಹಾಗೂ ಭಾರತವೂ ಒಳಗೊಂಡಂತೆ ಪ್ರಪಂಚದಾದ್ಯಂತ ಒಲಿಂಪಿಕ್ ಸಂಭ್ರಮವನ್ನು ಬಲಪಡಿಸುವುದರಲ್ಲಿ ನಿರತಳಾಗಿದ್ದೇನೆ,” ಎಂದರು.
40 ವರ್ಷಗಳ ಕಾಯುವಿಕೆಯ ನಂತರ ನೀತಾ ಅಂಬಾನಿಯವರ ನೇತೃತ್ವದಲ್ಲಿ ಭಾರತವು ಐಒಸಿ ವಾರ್ಷಿಕ ಸಭೆಯ ಆತಿಥ್ಯವನ್ನು ಪಡೆದುಕೊಂಡಿತು. ಇದನ್ನು 2023 ರಲ್ಲಿ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ನೀತಾ ಅಂಬಾನಿ ನೇತೃತ್ವದಲ್ಲಿ ಒಲಿಂಪಿಕ್ಸ್‌ನಲ್ಲಿ ಇಂಡಿಯಾ ಹೌಸ್ ನಿರ್ಮಾಣವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರರು, ಬೆಂಬಲಿಗರು ಮತ್ತು ಪ್ರೇಕ್ಷಕರಿಗೆ ಇದು ಭಾರತದಿಂದ ದೂರವಿರುವಂಥ ಮನೆಯಂತಿದೆ.
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ‘ಗ್ರಾಮಠಾಣ’ ಒಳಗಿನ, ಹೊರಗಿನ ‘ಆಸ್ತಿ ಅಳತೆ’ಗೆ ಅವಕಾಶ