ಗದಗ: ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಒಬ್ಬರು ಲಾಡ್ಜ್ ನಲ್ಲೇ ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ನಡೆದಿದೆ. ಈ ಮೂಲಕ ನೇಣುಬಿಗಿದುಕೊಂಡು ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಾವಿಗೆ ಶರಣಾಗಿದ್ದಾರೆ.
ಗದಗ ನಗರದ ಪಲ್ಲವಿ ಲಾಡ್ಜ್ ಗೆ ತೆರಳಿದ್ದಂತ ನಿರ್ಮಿತಿ ಕೇಂದ್ರದ ಶಂಕರಗೌಡ ಪಾಟೀಲ್ ಎಂಬುವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಇಂಜಿನಿಯರ್ ಆಗಿದ್ದಾರೆ.
ಇಂದು ಬೆಳಿಗ್ಗೆ 7.30ಕ್ಕೆ ಮನೆಯಿಂದ ಹೊರ ಬಂದಿದ್ದಂತ ನಿರ್ಮಿತಿ ಕೇಂದ್ರದ ಇಂಜಿನಿಯರ್ ಶಂಕರಗೌಡ ಪಾಟೀಲ್ ಅವರು ಲಾಡ್ಜ್ ನಲ್ಲಿ ರೂಂ ಪಡೆದು ಉಳಿದುಕೊಂಡಿದ್ದರು. ಲಾಡ್ಜ್ ನ ಸರ್ವಿಸ್ ಬಾಯ್ ಗಳು ರೂಂ ಬಾಗಿಲು ಬಡಿದಾಗ ಪ್ರತ್ಯುತ್ತರ ನೀಡಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ, ಲಾಡ್ಜ್ ನ ರೂಂ ಬಾಗಿಲು ತೆರೆದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
BREAKING : ರಾಮನಗರದಲ್ಲಿ ಭೀಕರ ಕೊಲೆ : ‘ನ್ಯೂ ಇಯರ್’ ಪಾರ್ಟಿ ವೇಳೆ ವ್ಯಕ್ತಿಯನ್ನು ಕೊಂದು ಬಾವಿಗೆ ಎಸೆದ ದುರುಳರು!