ಬೆಂಗಳೂರು: ಕೇರಳ ರಾಜ್ಯದಲ್ಲಿ ನೀಫಾ ವೈರಸ್ ಆರ್ಭಟ ಹೆಚ್ಚಾಗಿದೆ. ಕೇರಳದ ನೆರೆಯ ರಾಜ್ಯವಾಗಿರುವಂತ ಕರ್ನಾಟಕ್ಕಕೂ ನೀಫಾ ವೈರಸ್ ಹರಡುವ ಆತಂಕ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯಿಂದ ನೀಫಾ ವೈರಸ್ ನಿಯಂತ್ರಣ ಸಂಬಂಧ ಮಾರ್ಗಸೂಚಿ ಪ್ರಕಟಿಸಲಾಗಿದೆ. ಆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ದಿನಾಂಕ 21-07-2024 ರಂದು ನಿಪಾ ವೈರಸ್ ಪುಕರಣ ಪತ್ತೆಯಾಗಿದೆ. AES ರೋಗಲಕ್ಷಣಗಳನ್ನು ಹೊಂದಿದ್ದ ಮಲಪ್ಪುರಂನ 14 ವರ್ಷದ ಬಾಲಕ ಪೆರಿಂತಲ್ಮನ್ಮಾದಲ್ಲಿನ ಆರೋಗ್ಯ ಕೇಂದ್ರದಲ್ಲಿ ತೋರಿಸಿಕೊಂಡು ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್ನ ಉನ್ನತ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸುವ ಮೊದಲು ಸಾವನ್ನಪ್ಪಿದ್ದಾನೆ. ರೋಗಿಯ ಮಾದರಿಗಳನ್ನು ಎನ್ಐವಿ, ಪುಣೆಗೆ ಕಳುಹಿಸಲಾಗಿ, ನಿವಾ ವೈರಸ್ ಸೋಂಕು ದೃಢಪಟ್ಟಿದೆ ಎಂದಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರವು ಮಲಪ್ಪುರಂನಲ್ಲಿ ರೋಗವನ್ನು ತಡೆಗಟ್ಟಲು ತಕ್ಷಣದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸೂಚಿಸಿದೆ. ಪ್ರಕರಣದ ತನಿಖೆ, ಸಾಂಕ್ರಾಮಿಕ ರೋಗಗಳ ಸಂಬಂಧಗಳ ಗುರುತಿಸುವಿಕೆ ಮತ್ತು ತಾಂತ್ರಿಕ ಬೆಂಬಲದೊಂದಿಗೆ ಕೇರಳ ರಾಜ್ಯಕ್ಕೆ ಸಹಾಯ ಮಾಡಲು ಕೇಂದ್ರ ತಂಡದೊಂದಿಗೆ ರಾಷ್ಟ್ರೀಯ ‘ಒನ್ ಹೆಲ್ತ್ ಮಿಷನ್’ನ ಬಹು ಸದಸ್ಯರ ಜಂಟಿ ಏಕಾಏಕಿ ಪುಕರಣ ಪ್ರತಿಕ್ರಿಯಾ ತಂಡವನ್ನು ನಿಯೋಜಿಸಲಾಗಿದೆ. ಕೇರಳ ರಾಜ್ಯ ಸರ್ಕಾರವು ತಕ್ಷಣದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಸಲಹೆ ನೀಡಿದೆ. ಹಣ್ಣಿನ ಬಾವಲಿಗಳು ನಿಫಾ ವೈರಸ್ನ ಸಾಮಾನ್ಯ ಜಲಾಶಯವಾಗಿದ್ದು, ಬಾವಲಿಯಿಂದ ಕಲುಷಿತಗೊಂಡ ಹಣ್ಣುಗಳನ್ನು ಆಕಸ್ಮಿಕವಾಗಿ ಸೇವಿಸುವುದರಿಂದ ಮನುಷ್ಯರು ಸೋಂಕಿಗೆ ಒಳಗಾಗಬಹುದು ಎಂಬುದಾಗಿ ತಿಳಿಸಿದೆ.
ಈ ಹಿಂದೆ, 2023 ರಲ್ಲಿ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಪ್ರಕರಣ ವರದಿಯಾಗುವುದರೊಂದಿಗೆ, ಕೇರಳದಲ್ಲಿ ನಿವಾ ವೈರಸ್ ಕಾಯಿಲೆ (NVD) ಯ ಅನೇಕ ಏಕಾಏಕಿ ಪ್ರಕರಣಗಳು ವರದಿಯಾಗಿದ್ದರೂ, ಇಲ್ಲಿಯವರೆಗೆ ಕರ್ನಾಟಕ ರಾಜ್ಯದಿಂದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದಿದೆ.
ಕೇರಳದಲ್ಲಿ ಏಕಾಏಕಿ ಪುಕರಣ ವರದಿಯಾದಾಗಲೆಲ್ಲಾ ಕೇರಳದಿಂದ ಗಡಿಯಾಚೆಗಿನ ಸೋಂಕು ಹರಡುವುದನ್ನು ತಡೆಯಲು ಕರ್ನಾಟಕ ರಾಜ್ಯವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ.
ಹಾಲಿ, ಮಲಪ್ಪುರಂನಲ್ಲಿ ವರದಿಯಾದ ಪ್ರಕರಣವು ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡೋಮ್ (ಎಇಎಸ್) ಪಕರಣವಾಗಿದ್ದು, ಹೆಚ್ಚಿನ ಅಪಾಯದ ಸಂಪರ್ಕಗಳನ್ನು ಪರೀಕ್ಷೆಗೊಳಪಡಿಸಲಾಗಿ ನಿಫಾ ಸೋಂಕು ಪತ್ತೆಯಾಗಿಲ್ಲದಿರುವುದರಿಂದ, ಮನುಷ್ಯರಿಂದ ಮನುಷ್ಯನಿಗೆ ಹರಡುವ ಸಾಧ್ಯತೆಯು ತುಂಬಾ ಕಡಿಮೆಯಾಗಿದೆ ಮತ್ತು ಈ ಕ್ಷಣದಲ್ಲಿ ಭಯಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆಯ ಕ್ರಮವಾಗಿ, ಕೇರಳದ ರೋಗ ಪೀಡಿತ ಪ್ರದೇಶವನ್ನು ನಿಪಾ ವೈರಸ್ ಸೋಂಕಿನಿಂದ ಸುರಕ್ಷಿತ ಎಂದು ಘೋಷಿಸುವವರೆಗೆ ಕೇರಳದ ಪೀಡಿತ ಪ್ರದೇಶಗಳಿಗೆ (ಮಲ್ಲಪುರಂ ಜಿಲ್ಲೆ) ಪುಯಾಣವು ಅತ್ಯಂತ ಅವಶ್ಯಕವಾಗಿಲ್ಲಿದಿದ್ದಲ್ಲಿ, ಪಯಾಣವನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ.
ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಹೆಚ್ಚುವರಿ ನಿಲುಗಡೆಗೆ ಅವಕಾಶ
BIG NEWS: ಆ.1ರಿಂದ ‘ಆರೋಗ್ಯ ಇಲಾಖೆ’ಯ ನೌಕರರು ‘ರಿಯಲ್ ಟೈಮ್ ಅಟೆಂಡೆನ್ಸ್ ಸಿಸ್ಟಮ್ ಹಾಜರಾತಿ’ ದಾಖಲು ಕಡ್ಡಾಯ