ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನಿಕೇತ್ ರಾಜ್.ಎಂ ಅವರು ಅಧಿಕಾರ ವಹಿಸಿಕೊಂಡರು.
ದಿನಾಂಕ 26-09-2025 ರಂದು ನಿಕೇತ್ ರಾಜ್. ಎಂ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸುವ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್. ಆರ್ (ಭಾ.ಆ.ಸೇ), ನಿರ್ದೇಶಕರು (ಮಾ.ತಂ) ಶಿಲ್ಪಾ. ಎಂ (ಭಾ.ಆ.ಸೇ) ಹಾಗೂ ನಿರ್ದೇಶಕರು (ಭ&ಜಾ) ಶ್ರೀ ಅಬ್ದುಲ್ ಅಹದ್ (ಭಾ.ಪೊ.ಸೇ) ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ, ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೊಸ ಅಧ್ಯಕ್ಷರನ್ನು ಸ್ವಾಗತಿಸಿದರು.