ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಂತ NHM ಗುತ್ತಿಗೆ, ಹೊರಗುತ್ತಿಗೆ ನೌಕರರು, ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ, ಮುಷ್ಕರ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಅನಿರ್ಧಿಷ್ಠಾವಧಿ ಮುಷ್ಕರ ಮಾಡಲು ನೋಟಿಸನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ ಅವರು, ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಸಾಕಷ್ಟು ಬಾರಿ ಹೋರಾಟಗಳನ್ನು ಮಾಡಿದ್ದು ಸರ್ಕಾರದಿಂದ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಆದರೆ ಇಲ್ಲಿಯವರೆಗೂ ಬೇಡಿಕೆಗಳ ಅನುಷ್ಟಾನದಲ್ಲಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ವರದಿಯನ್ನೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಿರುವುದಿಲ್ಲ ಎಂಬುದಾಗಿ ಹೇಳಿದ್ದಾರೆ.
ಕಾನೂನಿನಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶ ಇದೆ ಎಂದಾದ ಮೇಲೆ ಸಿಬ್ಬಂದಿಗಳಿಗೆ ಸೌಲಭ್ಯಗಳನ್ನು ನೀಡಲು ಮೀನಾಮೇಶ ಎಣಿಸುವುದು ಯಾಕೆ? ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ವತಿಯಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಅನಿರ್ಧಿಷ್ಠಾವಧಿ ಮುಷ್ಕರವನ್ನು ಮಾಡಲು ಸಂಘದಿಂದ ನಿರ್ಧರಿಸಲಾಗಿದೆ. ಇದನ್ನೇ ಮುಷ್ಕರದ ನೋಟಿಸ್ ಎಂದು ತಿಳಿಸುತ್ತಾ ಮುಂದಿನ 15 ದಿನಗಳ ನಂತರ ಯಾವುದೇ ದಿನದಂದು ಹೋರಾಟ ಆರಂಭಿಸುವುದಾಗಿ ತಿಳಿಸಿದ್ದಾರೆ.
1. ಈಗಾಗಲೇ ಮಾನ್ಯ ಆಯುಕ್ತರು ತಿಳಿಸಿದಂತೆ ಮಣಿಪುರ ರಾಜ್ಯದಲ್ಲಿ 2140 ಸಿಬ್ಬಂದಿಗಳನ್ನು ಖಾಯಂ ಗೊಳಿಸಿದ್ದು ಹಾಗೂ ಇನ್ನೂ ಕೆಲವು ರಾಜ್ಯಗಳಲ್ಲಿ ಎನ್.ಹೆಚ್.ಎಮ್ ಸಿಬ್ಬಂದಿಗಳನ್ನು ಖಾಯಂಮಾಡಲು ನಿಯಮಗಳನ್ನು ರೂಪಿಸಿದ್ದು, ಅದರಂತೆ ನಮ್ಮ ರಾಜ್ಯದಲ್ಲಿಯೂ ಸಹ ನಿಯಮಗಳನ್ನುರೂಪಿಸಿ ಖಾಯಂಗೊಳಿಸುವುದು.
2. ಕನಿಷ್ಠ ವೇತನದ ಬದಲು ದೆಹಲಿ ಮಾದರಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡುವುದು.
3. ಈಗಾಗಲೇ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ನೀಡುವ ಬಗ್ಗೆ ಮಾನ್ಯ ಆರೋಗ್ಯ ಸಚಿವರ ಸೂಚನೆಯಂತೆ ಕಾನೂನು ಇಲಾಖೆ ಒಪ್ಪಿಗೆ ನೀಡಿದ್ದು ಅದರಂತೆ ಖಾಲಿ ಇರುವ, ಪರಸ್ಪರ ಒಪ್ಪಿಗೆ, ವೈದ್ಯಕೀಯ ಹಾಗೂ ಪತಿಪತ್ನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಆದೇಶವನ್ನು ಕೂಡಲೇ ಹೊರಡಿಸುವುದು.
4. ಈಗಾಗಲೇ ಜಿಲ್ಲೆಯ ಒಳಗೆ ವರ್ಗಾವಣೆ ನೀಡುವ ಬಗ್ಗೆ ಆದೇಶ ಹೊರಡಿಸಿದ್ದು ಈ ಆದೇಶದಲ್ಲಿ ಕೇವಲ ಪರಸ್ಪರ ವರ್ಗಾವಣೆಗೆ ಮಾತ್ರ ಅವಕಾಶ ನೀಡಿದ್ದು, ಈ ಆದೇಶವನ್ನು ಪರಿಷ್ಕರಿಸಿ ಪರಸ್ಪರ ಒಪ್ಪಿಗೆ ಜೊತೆಗೆ ಖಾಲಿ ಇರುವ ಹುದ್ದೆಗಳಿಗೆ, ಪತಿಪತ್ನಿ ಪ್ರಕರಣಗಳು ಮತ್ತು ವೈದ್ಯಕೀಯ ಪ್ರಕರಣಗಳಿಗೂ ಸಹ ಜಿಲ್ಲೆಯ ಒಳಗಡೆ ವರ್ಗಾವಣೆ ನೀಡಲು ಆದೇಶಿಸಬೇಕು.
5. ಹಲವಾರು ಸುತ್ತಿನ ಸಭೆಗಳು ಆದರೂ ಈವರೆಗೂ ಆರೋಗ್ಯ ವಿಮೆ ಜಾರಿ ಆಗದೇ ಇರುವುದು ಮತ್ತು ಹಲವಾರು ಸಿಬ್ಬಂದಿಗಳು ಮೃತ ಪಟ್ಟರೂ ಬ್ಯಾಂಕರ್ಸ್ ಜೊತೆ ಸಭೆಗಳನ್ನು ಮಾಡಿದ ನಂತರವೂ ಟರ್ಮ್ ವಿಮೆ ಜಾರಿ ಆಗದೇ ಇದ್ದು ಕೂಡಲೇ ಅಂತಿಮ ಆದೇಶ ಹೊರಡಿಸುವುದು.
6. ಸರ್ಕಾರಿ ಆದೇಶದಂತೆ ಜಿಲ್ಲೆಗಳಿಗೆ ಪ್ರಸಕ್ತ ಆರ್ಥಿಕ ವರ್ಷದ 15% ವೇತನ ಹೆಚ್ಚಳದ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವುದು.
7. ಶಾಲಾ ಆರೋಗ್ಯ ಕಾರ್ಯಕ್ರಮಗಳನ್ನು ಮಾಡಲು RBSK ಕಾರ್ಯಕ್ರಮದಡಿಯಲ್ಲಿ ವೈದ್ಯರ ಸಹಿತ ಸಿಬ್ಬಂದಿಗಳನ್ನು ನೇಮಕಾತಿ ಮಾಡಿದ್ದು ಬೇರೆ ಜಿಲ್ಲೆಗಳಲ್ಲಿ ಹೆಚ್ಚುವರಿ ಬೇಡಿಕೆ ಇರುವ ಕಾರಣ 24 ತಂಡದ 96 ಸಿಬ್ಬಂದಿಗಳನ್ನು ಕೈ ಬಿಡದೇ ಆ ಸಿಬ್ಬಂದಿಗಳಿಗೆ ಅದೇ ಜಿಲ್ಲೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುವುದು.
8. ಎನ್.ಹೆಚ್ಎಮ್ ಸಿಬ್ಬಂದಿಗಳಿಗೆ 2017-18ರಲ್ಲಿ ಮೂಲ ವೇತನ ನಿಗದಿ ಮಾಡಿದ್ದು ಈವರೆಗೂ ಪರಿಷ್ಕರಣೆ ಮಾಡದೇ ಇದ್ದು, ಕಾಲಕಾಲಕ್ಕೆ ಮೂಲ ವೇತನವನ್ನು ಪರಿಷ್ಕರಣೆ ಮಾಡುವಂತೆ ಮನವಿ.
9. ಪ್ಯಾರಾ ಮೆಡಿಕಲ್ ವಿಶೇಷ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಈ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸುವುದು.
10. ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ವರದಿಯಂತೆ ಕೃಪಾಂಕವನ್ನು ನೀಡಿ ನೇಮಕಾತಿ ಮಾಡಿಕೊಳ್ಳುತ್ತಿದ್ದು ಆದರೆ ವರ್ಷಕ್ಕೆ 2% ಇರುವ ಕೃಪಾಂಕವನ್ನು 3% ರಷ್ಟು ಮಾಡಿ ಗರಿಷ್ಠ 30 ಕ್ಕೆ ಹೆಚ್ಚಿಸುವುದು ಹಾಗೂ ಬೇರೆ ಇಲಾಖೆಯಲ್ಲಿ ಮಾಡಿಕೊಳ್ಳುವ ನೇಮಕಾತಿಗಳಿಗೂ ಸಹ ಅರ್ಹ ಎನ್.ಹೆಚ್ಎಮ್ ಸಿಬ್ಬಂದಿಗಳು ಅರ್ಜಿ ಹಾಕುವಾಗ ಕೃಪಾಂಕ ಮತ್ತು ವಯೋಮಿತಿ ನೀಡಲು ಮನವಿ.
11. ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಶ್ರೀನಿವಾಸಾಚಾರಿ ವರದಿಯಂತೆ 17055 ಗುತ್ತಿಗೆ ಸಿಬ್ಬಂದಿಗಳಿಗೆ 15% ವೇತನ ಹೆಚ್ಚಿಸಿ ನೀಡುತ್ತಿದ್ದು ಅದರಂತೆ ಹೊರಗುತ್ತಿಗೆ ನೌಕರರ ಸಹಿತ ಬಾಕಿ ಉಳಿದ ಗುತ್ತಿಗೆ ನೌಕರರಿಗೂ ಸಹ 15% ವೇತನ ಹೆಚ್ಚಿಸುವುದು.
12. ದಿನಾಂಕ: 01.04.2023 ರ ನಂತರ 05 ವರ್ಷ ಪೂರ್ಣ ಗೊಳಿಸುವ ವೈದ್ಯರು ಹಾಗೂ ಸಿಬ್ಬಂದಿಗಳಿಗೂ ಸಹ 15% ವೇತನವನ್ನು ಅನ್ವಯ ಮಾಡುವುದು.
13. ಕರ್ತವ್ಯಕ್ಕೆ ಸೇರುವ ಸಮಯದಲ್ಲಿ ನಿಖರವಾಗಿ ರೂ.20,000/- ವೇತನವನ್ನು ಪಡೆಯುತ್ತಿದ್ದ ನೌಕರರಿಗೆ 15 % ವೇತನದ ಅನುದಾನ ಬಿಡುಗಡೆ ಆಗಿದ್ದರೂ ಸಹ ತಡೆ ಹಿಡಿಯಲಾಗಿದ್ದು ಇವರಿಗೂ ಸಹ ಪಾವತಿಸುವಂತೆ ನಿರ್ದೇಶನ ನೀಡುವುದು.
14. ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ನೌಕರರನ್ನಾಗಿ ಮಾಡಿಕೊಳ್ಳುವ ಬಗ್ಗೆ ಅಂತಿಮ ಹಂತದಲ್ಲಿದ್ದು ಕೂಡಲೇ ಆದೇಶ ಹೊರಡಿಸುವುದು.
15. NHM ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿ.ಇ.ಓ ಗಳ ಪದನಾಮವನ್ನು ಬದಲು ಮಾಡಿ ಅವರನ್ನೂ ಸಹ ಗುತ್ತಿಗೆ ನೌಕರನ್ನಾಗಿ ಮಾಡುವುದು.
16. ಪ್ರತೀ ತಿಂಗಳು ವೇತನ ಪಾವತಿಸಲು NHM ಸಿಬ್ಬಂದಿಗಳು ಮುಂಗಡ ರಶೀದಿ ಸಲ್ಲಿಸುವ ಅವಜ್ಞಾನಿಕ ಪದ್ಧತಿಯನ್ನು ಕೈಬಿಡುವಂತೆ ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಬೇಕು. ಇದರಿಂದಾಗಿ ಸರಿಯಾದ ಸಮಯಕ್ಕೆ ವೇತನ ಆಗದೇ ಪರದಾಡುವಂತಾಗಿದೆ ಹಾಜರಾತಿ ಮೇಲೆ ವೇತನ ಪಾವತಿಸಲು ಸೂಚಿಸಲು ಮನವಿ.
17. ಎನ್.ಹೆಚ್.ಎಮ್ ಸಿಬ್ಬಂದಿಗಳಿಗೆ ಅನುಕೂಲ ಆಗುವಂತೆ HRMS SOFTWARE ನ್ನು ಈಗಾಗಲೇ ಅಪ್ ಡೇಟ್ ಮಾಡಿಸುತ್ತಿದ್ದು HRMS PAYROLL ಮೂಲಕ ವೇತನವನ್ನು ಹಾಗೂ ವೇತನ ದೃಢೀಕರಣ ಪತ್ರವನ್ನು ನೀಡಲು ಕೂಡಲೇ ಆದೇಶ ಹೊರಡಿಸುವುದು.
18. ರೂ.15000/-ಕ್ಕಿಂತ ಕಡಿಮೆ ಇರುವ ಸಿಬ್ಬಂದಿಗಳಿಗೆ ಇಪಿಎಫ್ ಯೋಜನೆ ಜಾರಿಯಲ್ಲಿದ್ದು ರೂ.15000/-ಕ್ಕಿಂತ ಮೇಲ್ಪಟ್ಟ ವೇತನ ಪಡೆಯುತ್ತಿರುವ ನೌಕರರಿಗೂ ಮೂಲ ವೇತನ 15000/- ಮಿತಿಗೆ ಒಳಪಡಿಸಿ ಇಪಿಎಫ್ ಯೋಜನೆ ಜಾರಿಗೊಳಿಸುವುದು.
19. ಎನ್.ಹೆಚ್.ಎಮ್ ಸಿಬ್ಬಂದಿಗಳಿಗೆ ಕ್ರೀಡಾಕೂಟ ಏರ್ಪಡಿಸಲು ಈಗಾಗಲೇ ಸಭೆಗಳಾಗಿದ್ದು ಅದರಂತೆ ಅಂತಿಮ ಆದೇಶ ಹೊರಡಿಸಲು ಮನವಿ.
20. ಎನ್.ಹೆಚ್.ಎಮ್ ಅಡಿಯಲ್ಲಿ 03 ಮತ್ತು 05 ವರ್ಷ ಪೂರೈಸಿದ ಸಿಬ್ಬಂದಿಗಳಿಗೆ ಕ್ರಮವಾಗಿ ಶೇಕಡಾ 10 ಮತ್ತು ಶೆಕಡಾ 5ರಷ್ಟು ಹೆಚ್ಚುವರಿ ವೇತನ ನೀಡುತ್ತಿದ್ದು ಅದರಂತೆ 10 ಮತ್ತು 15 ವರ್ಷ ಪೂರೈಸಿದ ಎನ್.ಹೆಚ್.ಎಮ್ ನೌಕರರಿಗೆ ಹೆಚ್ಚುವರಿ ವೇತನ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.
21. ಬಾಗಲಕೋಟೆ ಜಿಲ್ಲೆಯಲ್ಲಿ ಇಲಾಖೆಯ ಅಧಿಕಾರಿಗಳ ಒಳಜಗಳದಿಂದ ಎನ್.ಹೆಚ್.ಎಮ್ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 116 ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿದ್ದು ಈ ನೌಕರರನ್ನು ಮುಂದುವರೆಸಲು ಆದೇಶ ನೀಡುವ ಬಗ್ಗೆ.
22. ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಸುಮಾರು 1300 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಡಯಾಲಿಸಿಸ್ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡುವ ಮೊದಲು ಇಲಾಖೆ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಮಾಡುವುದು ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡಿರುವ ಕಾರಣ ಸಂಘದ ಪದಾಧಿಕಾರಿಗಳು ಅನ್ನುವ ಕಾರಣಕ್ಕೆ ಕೆಲಸದಿಂದ ವಜಾ ಗೊಳಿಸಿರುವವರನ್ನು ಮರುನೇಮಕ ಮಾಡುವುದು.
23. ಎನ್.ಎಚ್.ಎಂ ಸಿಬ್ಬಂದಿಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನಮ್ಮ ಕ್ಲಿನಿಕ್ ಸಿಬ್ಬಂದಿಗಳಿಗೂ ಅನ್ವಯಿಸುವಂತೆ ಸ್ಪಷ್ಟ ಆದೇಶ ನೀಡವುದು.
ಈ ಮೇಲಿನ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು. ಮತ್ತೊಮ್ಮೆ ಮನವಿ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಅಗತ್ಯವಾದ ಈ ಇಲಾಖೆಯ ನೌಕರರನ್ನು ಮುಷ್ಕರ ಮಾಡುವ ಅನಿವಾರ್ಯ ಸ್ಥಿತಿಗೆ ದೂಡಬಾರದೆಂದು ಈ ಮೂಲಕ ಮನವಿ ಮಾಡುತ್ತೇವೆ. ಇದನ್ನೇ ಮುಷ್ಕರದ ನೋಟಿಸ್ ಎಂದು ತಿಳಿಸುತ್ತಾ ಮುಂದಿನ 15 ದಿನಗಳ ನಂತರ ಯಾವುದೇ ದಿನದಂದು ಹೋರಾಟ ಆರಂಭಿಸುವುದಾಗಿ ಹೇಳಿದ್ದಾರೆ.
BIG UPDATE: ಮಂಗಳೂರಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಮೂವರು ಯುವತಿಯರು ಸಾವು ಕೇಸ್: ಮಾಲೀಕ ಸೇರಿ ಇಬ್ಬರು ಅರೆಸ್ಟ್
BIG NEWS : ಅನರ್ಹರ `BPL’ ಕಾರ್ಡ್ ಗಳು ಮಾತ್ರ ವಾಪಸ್ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ