ಬೆಂಗಳೂರು: ಪ್ರತಿ ಮೂರು ತಿಂಗಳಿಗೊಮ್ಮೆ ವೇತನ ,ಜಿಲ್ಲೆಗಳಿಗೆ ಅನುದಾನ ಬಿಡುಗಡೆಗೆ ವಿಳಂಬ ಮಾಡಲಾಗುತ್ತಿದೆ. ಶೇ.15ರಷಅಟು ವೇತನ ಹೆಚ್ಚಳಕ್ಕೆ ಅನುದಾನ ಬಿಡುಗಡೆಯನ್ನೇ ಮಾಡಿಲ್ಲ. ಖಾಯಂ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಈ ಎಲ್ಲಾ ಕಾರಣದಿಂದಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸೋದಕ್ಕೆ ಎನ್ ಹೆಚ್ ಎಂ ಗುತ್ತಿಗೆ ನೌಕರರು ಮುಂದಾಗಿದ್ದಾರೆ. 14 ದಿನಗಳ ಒಳಗಾಗಿ ಬೇಡಿಕೆ ಈಡೇರಿಸದೇ ಇದ್ದರೇ, ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ KSHCOEA ಸಂಘವು, ರಾಷ್ಟೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು, ಈಗ ನವೆಂಬರ್ ಡಿಸೆಂಬರ್ ತಿಂಗಳಿನಿಂದ ವೇತನ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದೂ, ಮನೆ ಬಾಡಿಗೆ, ಮಕ್ಕಳ ಶಾಲೆ ಫೀಸ್, ಗಾಡಿ ಬಾಡಿಗೆ, ಪೆಟ್ರೋಲ್ ಖರ್ಚು, ವಿದ್ಯುತ್ ಬಿಲ್ಲು ಮನೆಗೆ ಬೇಕಾಗುವ ಮೂಲಭೂತ ಅಗತ್ಯತೆಗಳು (ರೇಷನ್, ತರಕಾರಿ, ಹಾಲು, ಹಣ್ಣು, ಇನ್ನಿತರೇ ), ಬ್ಯಾಂಕ್ ಇ.ಎಂ.ಐ, ಆಟೋ, ಬಸ್ ಖರ್ಚು ಇವೆಲ್ಲವುಗಳಿಗೆ ಕೈಯಲ್ಲಿ ಸಂಬಳವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿರುತ್ತದೆ ಎಂದಿದೆ.
ಇತ್ತೀಚಿನ ದಿನ ಪತ್ರಿಕೆಗಳಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ವೇತನ ವಿಳಂಬದ ಬಗ್ಗೆ ಮಾಹಿತಿ ಇಲ್ಲ ಎಂದು ಉತ್ತರಿಸುತ್ತಾರೆ. ಸರ್ಕಾರವು ಸಹ ಮೌನವಾಗಿ ಕುಳಿತಿದ್ದು ಕಿಂಚಿತ್ತೂ ನೌಕರರ ಬಗ್ಗೆ ಕಾಳಜಿ ಇಲ್ಲದ ರೀತಿ ವರ್ತಿಸುತ್ತಿದ್ದೂ, ಮಾರ್ಚ್- 2025 ರಿಂದ ಇಲ್ಲಿಯವರೆಗೆ ಮೂರು ಮೂರು ತಿಂಗಳಿಗೆ ಒಮ್ಮೆ ವೇತನ ಪಾವತಿಸಿ ವೇತನ ವಿಳಂಬ ಮಾಡಿ ನೌಕರರ ಆತ್ಮಸ್ಥೈರ್ಯ ಕುಗ್ಗಿದರೂ ಸಹ ನಾವು ಇಲ್ಲಿಯವರೆಗೆ ಯಾವುದೇ ಹೋರಾಟ ಮಾಡದೆ ತಾವು ನೀಡಿರುವ ತಾಂತ್ರಿಕ ಕಾರಣ ಹಾಗೂ ಸಮುಜಾಯಿಶಿಗಳಿಗೆ ಒಪ್ಪಿ ಯಾವುದೇ ಹೋರಾಟಕ್ಕೆ ಇಳಿಯದೆ ಗೌರವಯುತವಾಗಿ ನಡೆದುಕೊಂಡಿರುತ್ತೇವೆ ಎಂಬುದಾಗಿ ತಿಳಿಸಿದೆ.
ಈಗ ತಾಳ್ಮೆಯ ಕಟ್ಟೆ ಒಡೆದಿದ್ದು ನಾವು ಹೋರಾಟ ಮಾಡುವಂತೆ ತಾವೇ ನಮಗೆ ಪ್ರೇರೇಪಿಸುತ್ತಿರುವ ಹಾಗೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದ್ದರೂ ಸಹ ಆರ್ಥಿಕ ಇಲಾಖೆಯು ಅನುದಾನ ಬಿಡುಗಡೆ ಮಾಡದೇ ಕೇವಲ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಯಾಕೆ ಈ ರೀತಿ ತಾಂತ್ರಿಕ ಕಾರಣ ನೀಡಿ ನಿರ್ಬಂಧ ಹಾಕುತ್ತಿದ್ದಾರೆ ಎಂದು ನಮಗೆ ತಿಳಿಯುತ್ತಿಲ್ಲ ಎಂಬುದಾಗಿ ಹೇಳಿದೆ.
ನಮ್ಮ ನೌಕರರಿಗೆ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀನಿವಾಸಚಾರಿ ವರದಿ ಯಂತೆ 15% ವೇತನ ಹೆಚ್ಚಳ ಮಾಡಲಾಗಿತ್ತು ಅದರಂತೆ ಒಂದು ವರ್ಷ ಮಾತ್ರ ಪಾವತಿಸಿ ಮತ್ತೆರಡು ವರ್ಷಗಳು ಕಳೆದರೂ ಅದನ್ನು ಆರ್ಥಿಕ ಇಲಾಖೆಯವರು ಅನುಮೋದನೆ ನೀಡದೆ ನಮ್ಮ ನೌಕರರಿಗೆ ಅನ್ಯಾಯ ಮಾಡಿರುತ್ತಾರೆ. ಅದೇ ಅಧಿಕಾರಿಗಳಿಗೆ ಬೇಕಾದ 7, 8, 9 ನೇ ವೇತನ ಆಯೋಗದಂತೆ ವೇತನ ಹೆಚ್ಚಳ ಮಾಡಿಕೊಳ್ಳುತ್ತಾರೆ. ಇವರ ವೇತನ ಹೆಚ್ಚಿಸಿಕೊಳ್ಳುವಾಗ ಯಾವುದೇ ಆರ್ಥಿಕ ಹೊರೆ ಆಗುವುದಿಲ್ಲ ಎಂದಿದೆ.
ವೇತನ ವಿಳಂಬ, 15% ವೇತನ ಹೆಚ್ಚಳ, ಪ್ರಣಾಳಿಕೆಯಂತೆ ಖಾಯಂಯಾತಿ, ಮರು ನೇಮಕಾತಿಯ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದೂ ಇವೆಲ್ಲವನ್ನೂ ಈ ಸಂದರ್ಭದಲ್ಲಿ ನೆನಪಿಸುತ್ತಾ ನಮ್ಮ ನೌಕರರ ಬಗ್ಗೆ ಸರ್ಕಾರಕ್ಕೆ ಇರುವ ನಿಸ್ಕಾಳಜಿಗೆ ಬಗ್ಗೆ ಬೇಸತ್ತಿದ್ದೇವೆ ಎಂಬುದಾಗಿ ಅಳಲು ತೋಡಿಕೊಂಡಿದೆ.
ನಾವುಗಳು ಅತ್ಯಂತ ಕಡಿಮೆ ವೇತನ ಪಡೆಯುವ ನೌಕರರು ಎಂಬ ಕನಿಷ್ಠ ಮಾನವೀಯತೆ ಇಲ್ಲದೆ ಸರ್ಕಾರವು ನಡೆದುಕೊಳ್ಳುತ್ತಿರುವ ಬಗ್ಗೆ ನಮ್ಮ ನೌಕರರು ಆಕ್ರೋಶಗೊಂಡಿದ್ದು ನಮಗೆ ಬೃಹತ್ ಹೋರಾಟಕ್ಕೆ ತಾವೇ ಧುಮುಕಿಸುತ್ತಿದ್ದೂ, ಸಂಘದ ಸರ್ವ ಸದಸ್ಯರು ಹೋರಾಟ ಮಾಡುವದರ ಬಗ್ಗೆ ನಿರ್ಣಯ ಕೈಗೊಂಡಿದ್ದು, ಈಗಾಗಲೇ ಸಾಕಷ್ಟು ಬಾರೀ ಮನವಿ ಮಾಡಿದ್ದು ಇದನ್ನೇ ಹೋರಾಟದ ನೋಟೀಸ್ ಎಂದು ಪರಿಗಣಿಸಬೇಕು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಆರೋಗ್ಯ ಮಧ್ಯಸ್ತಿಕೆ ವಹಿಸಿ ಸಭೆ ಕರೆದು ಬಗೆಹರಿಸದೆ ಇದ್ದಲ್ಲಿ ನೋಟಿಸ್ ಕೈಗಾರಿಕಾ ವಿವಾದ ಕಾಯ್ದೆ 1947 ರ ಪ್ರಕಾರ 14 ದಿನಗಳ ನಂತರ ಯಾವುದೇ ದಿನದಂದು ಪ್ರತಿಭಟನೆ ಮಾಡಲಾಗುವುದಾಗಿ ಸರ್ಕಾರದ ಗಮನಕ್ಕೆ ತಂದಿದೆ.
ಇತಿಹಾಸ ಪ್ರಸಿದ್ದ ಸಾಗರದ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ಧತೆ: ಶಾಸಕ ಗೋಪಾಲಕೃಷ್ಣ ಬೇಳೂರು








