Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ತಳಮಟ್ಟದ ಹೋರಾಟದಿಂದ `CM’ ಪಟ್ಟದವರೆಗೆ : ಡಿಕೆಶಿ 45 ವರ್ಷಗಳ ರಾಜಕೀಯ ಪಯಣ ಇಲ್ಲಿದೆ

BREAKING: `KPCC’ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ನೇಮಕ | B.K. Hariprasad

BREAKING : ಇಂದು ಕರ್ನಾಟಕದ 25ನೇ `ಮುಖ್ಯಮಂತ್ರಿ’ ಆಗಿ ಡಿಕೆಶಿ ಪ್ರಮಾಣವಚನ : ಕಾರ್ಯಕ್ರಮದ ಆಹ್ವಾನ ಪತ್ರಿಕೆ ವೈರಲ್.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುಂದಿನ ಪೀಳಿಗೆಯ GPU ಸೂಪರ್‌ಪಾಡ್‌ ಪ್ರಾರಂಭಿಸಿದ ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿಮಿಟೆಡ್
KARNATAKA

ಮುಂದಿನ ಪೀಳಿಗೆಯ GPU ಸೂಪರ್‌ಪಾಡ್‌ ಪ್ರಾರಂಭಿಸಿದ ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿಮಿಟೆಡ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಸರ್ಕಾರಿ ವಲಯ, ಬ್ಯಾಂಕಿಂಗ್‌, ಸಂಶೋಧನ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ “ಕೃತಕ ಬುದ್ದಿಮತ್ತೆ” (ಎಐ) ಬಳಕೆಯ ಮೂಲಕ ಕೆಲಸದ ಒತ್ತಡವನ್ನು ಸುಧಾರಿಸಿ, ಕೆಲಸದಲ್ಲಿ ಚುರುಕುತನ ಮೂಡಿಸುವ ಉದ್ದೇಶದಿಂದ ಇಎಸ್‌ಡಿಎಸ್‌ ಸಾಫ್ಟ್‌ವೇರ್‌ ಸಲ್ಯೂಷನ್‌ “ ಮುಂದಿನ ಪೀಳಿಗೆಗಾಗಿ “ಜಿಪಿಯು ಸೂಪರ್‌ಪಾಡ್ಸ್‌” ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಇಎಸ್‌ಡಿಎಸ್‌ ಸಾಫ್ಟ್‌ವೇರ್ ಸೊಲ್ಯೂಷನ್ ಲಿಮಿಟೆಡ್ ಕಂಪನಿಯ 20ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷ ಪಿಯೂಷ್ ಪ್ರಕಾಶಚಂದ್ರ ಸೋಮನಿ ಅವರು ಘೋಷಿಸಿದರು, ಬಳಿಕ ಮಾತನಾಡಿದ ಅವರು, ಪ್ರಸ್ತುತ ಎಐ ಮೇಲೆ ಹೆಚ್ಚುತ್ತಿರುವ ಬೇಡಿಕೆ ಪರಿಹರಿಸಲು “ಗ್ರಾಫಿಕ್‌ ಪ್ರೋಸೆಸಿಂಗ್‌ ಯುನಿಟ್ಸ್‌” (ಜಿಪಿಯು) ಉತ್ತಮ ಹಾದಿಯಾಗಿದೆ. ಜಾಗತಿಕ AI ಮೌಲ್ಯವು 2030 ರ ವೇಳೆಗೆ ಸುಮಾರು $15.7 ಟ್ರಿಲಿಯನ್ ಡಾಲರ್‌ ಸಮೀಪಿಸುವ ನಿರೀಕ್ಷೆಯಿದೆ, ಅದೇ ರೀತಿ, ಶೇ.80ರಷ್ಟು ಹೂಡಿಕೆಯು GPU ಕಡೆಗೆ ಕೇಂದ್ರೀಕರಿಸಿದೆ. ಜಿಪಿಯು ಮೇಲೆ ಹೆಚ್ಚಿನ ವಿಶ್ವಾಸಾರ್ಹತೆ ಹೊಂದಿದ್ದು, ಪರಿಸರ ವ್ಯವಸ್ಥೆಯ ಅಗತ್ಯಕ್ಕೂ ಸ್ನೇಹಮಯವಾಗಿದೆ. ಆದರೆ, ಜಿಪಿಯು ದುಬಾರಿ ವೆಚ್ಚದ ಕಾರಣದಿಂದ ಸಾಕಷ್ಟು ಸಂಸ್ಥೆಗಳು ಜಿಪಿಯು ಬದಲಿಗೆ ಎಐ ನತ್ತ ಒಲವು ತೋರುತ್ತಿದ್ದಾರೆ, ಹೀಗಾಗಿ ನಮ್ಮ ಸಂಸ್ಥೆ ದೊಡ್ಡ-ಪ್ರಮಾಣದ ಜಿಪಿಯು ಕ್ಲಸ್ಟರ್‌ ಮತ್ತು ಸೂಪರ್‌ಪಾಡ್‌ ಪರಿಚಯಿಸಿದ್ದು, ಬಳಕೆಗೂ ಹೆಚ್ಚು ಸುಲಭದಾಯಕವಾಗಿವೆ.

ಈ ನಮ್ಮ GPU ಸೂಪರ್‌ಪಾಡ್‌ಗಳು ಹೆಚ್ಚು ಕಾರ್ಯಕ್ಷಮತೆ, ಸ್ಥಿರತೆ ಮತ್ತು ಪ್ರಮಾಣವನ್ನು ಒದಗಿಸುವ ಎಐ ಆಧಾರಿತವನ್ನು ಕಡಿಮೆ ಮಾಡುತ್ತದೆ. ಬಳಕೆದಾರರಿಗೇ ಹೆಚ್ಚು ಅವಕಾಶ ನೀಡಲು ನಾವು ಸೂಪರ್‌ಪಾಡ್ ಕಾನ್ಫಿಗರೇಟರ್ ಉಪಕರಣವನ್ನು ರಚಿಸಿದ್ದೇವೆ ಎಂದು ವಿವರಿಸಿದರು.

ಈ ಮಹತ್ವದ ಪ್ರಾರಂಭವು ESDS ಅನ್ನು ಕ್ಲೌಡ್, ನಿರ್ವಹಣೆಯ ಸೇವೆಗಳು, ಡೇಟಾ ಸೆಂಟರ್ ಮೂಲಸೌಕರ್ಯ ಮತ್ತು ಸಾಫ್ಟ್‌ವೇರ್ ಪರಿಹಾರಗಳ ಸಂಪೂರ್ಣ ಶ್ರೇಣಿಯ ಪೂರೈಕೆದಾರರಾಗಿ ಕೆಲಸ ಮಾಡಲಿದೆ. ಇದು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ AI ಕಂಪ್ಯೂಟ್ ಒದಗಿಸುವ GPU ಪೂರೈಕೆದಾರರಾಗಿ ತನ್ನ ಸಾಮರ್ಥ್ಯ ಪ್ರದರ್ಶಿಸಲಿದೆ. GPUs ಮತ್ತು ಆಕ್ಸಿಲರೇಟರ್‌ಗಳನ್ನು ಒಳಗೊಂಡಂತೆ AI-ಆಪ್ಟಿಮೈಸ್ಡ್ ಸರ್ವರ್‌ಗಳ ಮೇಲಿನ ಜಾಗತಿಕ ವೆಚ್ಚವು 2026 ರ ವೇಳೆಗೆ ಸರಿಸುಮಾರು US $329.5 ಶತಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಅಂದಾಜಿಸಿದರು.

ಇನ್ನು, ನಮ್ಮ ಜಿಪಿಯು ಸರ್ವಿಸ್‌ ಪಡೆದಿದ್ದ ಒಂದು ಸಂಶೋಧನಾ ಪ್ರಯೋಗಾಲಯವು ತನ್ನ ವ್ಯವಹಾರದಲ್ಲಿ ಹಿಂದೆಂದಿಗಿಂತಲೂ ಉತ್ತಮ ಔಟ್‌ಪುಟ್‌ ಹೊರಹಾಕಿದೆ. ಜಿಪಿಯು ಸೇವೆಯ ಮೂಲಕ 40 ದಿನಗಳವರೆಗೆ ವಿಸ್ತರಿಸಲಾಗಿದ್ದ 50-ಬಿಲಿಯನ್-ಪ್ಯಾರಾಮೀಟರ್ ಮಾದರಿಯ ತರಬೇತಿಯನ್ನು ಕೇವಲ 10 ದಿನಗಳಿಗೆ ಇಳಿಸಿಕೊಳ್ಳಲು ಸಹಾಯ ಮಾಡಿತು, ಅಷ್ಟೆ ಅಲ್ಲದೆ, ಇವರ ವೆಚ್ಚದಲ್ಲಿಯೂ 60 ಪ್ರತಿಶತ ಕಡಿತಗೊಳಿಸಿದ್ದು, 4 ಪಟ್ಟು ಕಡಿಮೆ ಪುನರಾವರ್ತನೆ ಕೆಲಸಗಳನ್ನು 30 ಪಟ್ಟು ವೇಗಕ್ಕೆ ತೆಗೆದುಕೊಂಡು ಹೋಗಿದೆ ಎಂದು ವಿವರಣೆ ನೀಡಿದರು.

Share. Facebook Twitter LinkedIn WhatsApp Email

Related Posts

BIG NEWS : ತಳಮಟ್ಟದ ಹೋರಾಟದಿಂದ `CM’ ಪಟ್ಟದವರೆಗೆ : ಡಿಕೆಶಿ 45 ವರ್ಷಗಳ ರಾಜಕೀಯ ಪಯಣ ಇಲ್ಲಿದೆ

7 Mins Read

BREAKING: `KPCC’ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ನೇಮಕ | B.K. Hariprasad

1 Min Read

BREAKING : ಇಂದು ಕರ್ನಾಟಕದ 25ನೇ `ಮುಖ್ಯಮಂತ್ರಿ’ ಆಗಿ ಡಿಕೆಶಿ ಪ್ರಮಾಣವಚನ : ಕಾರ್ಯಕ್ರಮದ ಆಹ್ವಾನ ಪತ್ರಿಕೆ ವೈರಲ್.!

1 Min Read
Recent News

BIG NEWS : ತಳಮಟ್ಟದ ಹೋರಾಟದಿಂದ `CM’ ಪಟ್ಟದವರೆಗೆ : ಡಿಕೆಶಿ 45 ವರ್ಷಗಳ ರಾಜಕೀಯ ಪಯಣ ಇಲ್ಲಿದೆ

BREAKING: `KPCC’ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ನೇಮಕ | B.K. Hariprasad

BREAKING : ಇಂದು ಕರ್ನಾಟಕದ 25ನೇ `ಮುಖ್ಯಮಂತ್ರಿ’ ಆಗಿ ಡಿಕೆಶಿ ಪ್ರಮಾಣವಚನ : ಕಾರ್ಯಕ್ರಮದ ಆಹ್ವಾನ ಪತ್ರಿಕೆ ವೈರಲ್.!

BREAKING : ಸತೀಶ್ ಜಾರಕಿಹೊಳಿಗೆ ತಪ್ಪಿದ `KPCC’ ಅಧ್ಯಕ್ಷ ಸ್ಥಾನ : ಬಿ.ಕೆ.ಹರಿಪ್ರಸಾದ್ ಗೆ ಪಟ್ಟ.!

State News
KARNATAKA

BIG NEWS : ತಳಮಟ್ಟದ ಹೋರಾಟದಿಂದ `CM’ ಪಟ್ಟದವರೆಗೆ : ಡಿಕೆಶಿ 45 ವರ್ಷಗಳ ರಾಜಕೀಯ ಪಯಣ ಇಲ್ಲಿದೆ

By kannadanewsnow57 KARNATAKA 7 Mins Read

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು (ಬುಧವಾರ) ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಸಂಜೆ 4.05ಕ್ಕೆ ಲೋಕಸೌಧದ…

BREAKING: `KPCC’ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ನೇಮಕ | B.K. Hariprasad

BREAKING : ಇಂದು ಕರ್ನಾಟಕದ 25ನೇ `ಮುಖ್ಯಮಂತ್ರಿ’ ಆಗಿ ಡಿಕೆಶಿ ಪ್ರಮಾಣವಚನ : ಕಾರ್ಯಕ್ರಮದ ಆಹ್ವಾನ ಪತ್ರಿಕೆ ವೈರಲ್.!

BREAKING : ಸತೀಶ್ ಜಾರಕಿಹೊಳಿಗೆ ತಪ್ಪಿದ `KPCC’ ಅಧ್ಯಕ್ಷ ಸ್ಥಾನ : ಬಿ.ಕೆ.ಹರಿಪ್ರಸಾದ್ ಗೆ ಪಟ್ಟ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.