Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ರಾಜ್ಯ ಸರ್ಕಾರದಿಂದ ‘ದಿನಗೂಲಿ ನೌಕರ’ರಿಗೆ ಸಿಹಿಸುದ್ದಿ: 5 ಲಕ್ಷದವರೆಗೆ ನಗದು ರಹಿತ ‘ಉಚಿತ ಆರೋಗ್ಯ ಯೋಜನೆ’ ಜಾರಿ

01/04/2026 4:17 PM

BIG NEWS : ಕೊಪ್ಪಳದಲ್ಲಿ ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್!

01/04/2026 4:09 PM

BREAKING: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಬಿಗ್ ರಿಲೀಫ್: ಮಾನಹಾನಿ ಕೇಸ್ ವಜಾಗೊಳಿಸಿದ ಕೋರ್ಟ್

01/04/2026 4:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸುದ್ದಿ ಬ್ರೇಕ್ ಅವಸರದಲ್ಲಿ ಅವಾಂತರ ಆಗಬಾರದು: ಚಿತ್ರದುರ್ಗ KUWJ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜು
KARNATAKA

ಸುದ್ದಿ ಬ್ರೇಕ್ ಅವಸರದಲ್ಲಿ ಅವಾಂತರ ಆಗಬಾರದು: ಚಿತ್ರದುರ್ಗ KUWJ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜು

By kannadanewsnow0917/06/2025 9:00 PM

ಚಿತ್ರದುರ್ಗ: ಸುದ್ದಿಬ್ರೇಕ್ ಮಾಡುವ ಅವಸರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾದ್ಯಮಗಳು ಅವಾಂತರ ಸೃಷ್ಟಿಸಬಾರದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ‌ಎಸ್.ಸಿದ್ದರಾಜು ಹೇಳಿದರು.

ಚಿತ್ರದುರ್ಗದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ‌ ವಿದ್ಯಾರ್ಥಿಗಳು ಆರಂಭಿಸಿರುವ ಶೈಕ್ಷಣಿಕ ಆಧಾರಿತ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಿ ಮಾತನಾಡಿದ ಅವರು,ಪತ್ರಿಕೋದ್ಯಮ ಹಾಗು ಸಮಾಜ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಮಾದ್ಯಮ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ಮತ್ತು ಮುದ್ರಣಮಾದ್ಯಮ‌ಎಂಬ ಎರಡು ಹಂತಗಳಿವೆ. ಅವುಗಳಲ್ಲಿ ಎಲೆಕ್ಟ್ರಾನಿಕ್ ಮಾದ್ಯಮ ಕುರಿತು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಇಂದಿನ ಆಧುನಿಕ ಭರಾಟೆಯಲ್ಲಿ ಪತ್ರಿಕೋದ್ಯಮ ಅನ್ನೋದು ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಈ ಹಿಂದೆ ಸಾಮಾಜಿಕ ಕಳಕಳಿ ಹಾಗು ಸಮಾಜವನ್ನು ಸರಿದಾರಿಯನ್ನು ಕೊಂಡೊಯ್ಯುವ ಕೆಲಸವನ್ನು ಮಾಡುತಿದ್ದವು. ಆದರೆ ಇಂದಿನ ಸ್ಪರ್ಧಾಯುಗದಲ್ಲಿ ಕೆಲ ಮಾದ್ಯಮಗಳು ಟಿಆರ್ ಪಿ ಹಾಗೂ ಹಣದಾಸೆಗೆ ಸುದ್ದಿಯ ಸಾರವನ್ನು ತಿರುಚುತ್ತಿವೆ. ಇದು ಸಮಾಜದ ಮೇಲೆ ಬಾರಿ ದುಷ್ಪರಿಣಾಮ ಬೀರುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಇನ್ನು ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ಬ್ರೇಕಿಂಗ್‌ ನ್ಯೂಸ್ ಅನ್ನೋದು ತುಂಬಾ ಮಹತ್ವ ಹೊಂದಿದೆ. ಹೀಗಾಗಿ ಯಾರು ಮೊದಲು ಯಾವುದೇ ಒಂದು ಸುದ್ದಿಯನ್ನು ಜನರಿಗೆ‌ ತಲುಪಿಸ್ತಾರೆ ಅನ್ನೋದೇ‌ ಬ್ರೇಕಿಂಗ್ ಎಂದು‌ ಕರೆಯುತ್ತೇವೆ. ತಡವಾಗಿ ಸುದ್ದಿ‌ ಬಂದರೆ‌ ಅದನ್ನು ಜನ‌ ಗಮನಿಸುವುದಿಲ್ಲ. ಆದರೆ ಇತ್ತೀಚಿನ‌ ದಿನಗಳಲ್ಲಿ‌ ಸುದ್ದಿ‌ ಬ್ರೇಕ್ ಮಾಡುವ ಅವಸರದಲ್ಲಿ‌‌ ಕೆಲ ಮಾದ್ಯಮಗಳು‌ ಅವಾಂತರ‌ ಸೃಷ್ಟಿಸ್ತಿವೆ. ಆ‌ ಕೆಲಸ‌ ಆಗಬಾರದು. ಜನರಿಗೆ ‌ಪತ್ರಕರ್ತ‌ ನೀಡುವ‌ ಸುದ್ದಿ‌ ನಿಖರತೆ, ಸ್ಪಷ್ಟತೆ ಹಾಗು ಸತ್ಯವಾಗಿರಬೇಕು ಎಂದರು.

ಹಾಗೆಯೇ ವರದಿಗಾರರ ಜೀವನದಲ್ಲಿ ಗುರಿ ಇರಬೇಕು. ಆಗ ಜೀವನವನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಸುದ್ದಿ ವಿಚಾರದಲ್ಲಿ ಯಶಸ್ಸು ಕಂಡಾಗ ಸಂತೋಷ ಆಗಲಿದೆ. ಅಂತೆಯೇ ಇಂದಿನ ಮಕ್ಕಳು ಬಹುತೇಕ ಕಾರ್ಟೂನ್, ಚಿಂಟು‌ ಟಿವಿಗೆ‌ ಸೀಮಿತವಾಗಿರುತ್ತಾರೆ. ಹೀಗಿರುವಾಗ ಈ ಸಂಸ್ಥೆಯು ಮಕ್ಕಳಲ್ಲಿ ಮಾದ್ಯಮದ‌ ಪರಿಕಲ್ಪನೆ ಕಣ್ಮುಂದೆ ತರುವ ಕೆಲಸವನ್ನು ಈ ಶಾಲೆ ಮಾಡುತಿದ್ದು, ಮಾದ್ಯಮದ ಬಗ್ಹೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸ್ತಿರುವ ಕಾರ್ಯ ಶ್ಲಾಘನೀಯ ಹಾಗು ಅರ್ಥಪೂರ್ಣ ಎನಿಸಿದೆ. ಹೀಗಾಗಿ ಈ ಸಂಸ್ಥೆಗೆ ನಮ್ಮ‌ಪತ್ರಕರ್ತರ ಸಂಘದಿಂದ ಅಭಿನಂದನೆ ಸಲ್ಲಿಸುತ್ತೇನೆ.

ಜೊತೆಗೆ ಇಂದಿನ ಸಮಾಜದಲ್ಲಿ ಬಹುತೇಕ ಮಕ್ಕಳು ನಾನು ಐಎಎಸ್,ಐಪಿಎಸ್ ಆಗಬೇಕೆಂಬ ಕನಸು ಕಾಣ್ತಾರೆ. ಆದ್ರೆ ಓರ್ವ ಪತ್ರಕರ್ತ ಕೂಡ ಎಲ್ಲಾ ಕ್ಷೇತ್ರಗಳಲ್ಲು ಒಬ್ಬನಾಗಿರ್ತಾನೆ. ಕೃಷಿ‌ ಚಟುವಟಿಕೆ ಅಂತ ಬಂದಾಗ ರೈತರಲ್ಲೊಬ್ಬರಾಗುತ್ತಾನೆ. ರೈತರ ಸಂಕಷ್ಟ ತಿಳಿಯಲು ಅವರ ಅಂತರಾಳಕ್ಕೆ ಇಳಿಯುತ್ತಾನೆ.

ಹಾಗೆಯೇ ದೇಶದ ರಕ್ಷಣೆ ವಿಚಾರ ಬಂದಾಗ ಸೈನಿಕರಂತೆ 24x 7 ಶ್ರಮಿಸ್ತಾರೆ.ಕೋವಿಡ್ ಸೇರುದಂತೆ ಅನೇಕ ಜೀವಹಾನಿ ಸಂಧರ್ಭಗಳಲ್ಲು ಪ್ರಾಣದಹಂಗು ತೊರೆದು ಪತ್ರಕರ್ತರು ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ಪತ್ರಕರ್ತರಾದರೆ ಎಲ್ಲಾ ಕ್ಷೇತ್ರಗಳನ್ನು ಪರೋಕ್ಷವಾಗಿ ತಲುಪುವ ವ್ಯಕ್ತಿ ಅಂದ್ರೆ ಅವರೇ ಜರ್ನಲಿಸ್ಟ್ ಗಳು ಅಂತ ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದರು.

ಜೊತೆಗೆ ಓರ್ವ ಪತ್ರಕರ್ತ ಆದವನು ಸಂಬಂಧ, ಸ್ನೇಹ ಹಾಗು ಸ್ವಾರ್ಥವನ್ನು‌ ಬದಿಗಿಟ್ಟು‌ ನಿಷ್ಟೂರ ಹಾಗು‌ ನಿಸ್ವಾರ್ಥದಿಂದ ಕೆಲಸ‌ ನಿರ್ವಹಿಸಬೇಕು ಎಂದು ಹೇಳ್ತಾ,‌ ನಿತ್ಯ ರಾಜಕೀಯ, ಕೃಷಿ ಹಾಗು ಕಾನೂನು ಅಂತ ಸುದ್ದಿ ಬಿಸಿಯಾಗಿರ್ತಿದ್ದ  ನನಗೆ ಇಂದು ಮಕ್ಕಳೊಂದಿಗೆ ಕ್ಷಣಕಾಲ ಕಳೆಯುವ ಅವಕಾಶ ಮಾಡಿಕೊಟ್ಟ ಶಾಲೆಯ ಆಡಳಿತ ಮಂಡಳಿಗೆ ನಮಸ್ಕಾರ ಹೇಳ್ತಾ ಜಾಗೃತಿಯ ಮಾತುಗಳಿಗೆ ವಿರಾಮ‌ ಹೇಳಿದರು.

ಬಳಿಕ ಮಾತನಾಡಿದ ವಿದ್ಯಾವಿಕಾಸ‌ ಸಂಸ್ಥೆಯ ಮುಖ್ಯಸ್ಥರಾದ‌ ಪೃಥ್ವೀಶ್‌‌ ಅವರು,ನಮ್ಮ ಶಾಲೆಯ ವಿದ್ಯಾರ್ಥಿಗಳು ಹಾಗು ಶಿಕ್ಷಕರು ತುಂಬಾ ಆಸಕ್ತಿ ವಹಿಸಿ ಯೂಟ್ಯೂಬ್ ವಾಹಿನಿ ಮಾಡಿದ್ದಾರೆ. ಇದರಿಂದ ನಗರದಲ್ಲಿನ ಪರಿಸರ ಹಾಗು ಶೈಕ್ಷಣಿಕವಾಗಿ ಈ ವಾಹಿನಿಯಲ್ಲಿ ಸುದ್ದಿ ಮಾಡಲು ಉತ್ಸುಕರಾಗಿದ್ದಾರೆ. ಇದು ತುಂಭಾ ಒಳ್ಳೆಯ ಕಾರ್ಯವಾಗಿದ್ದು, ವಿದ್ಯಾರ್ಥಿ‌ದೆಸೆಯಿಂದಲೇ ಪತ್ರಿಕೋದ್ಯಮದ ಬಗ್ಹೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ನಮ್ಮ ಸಂಸ್ಥೆ ಈ ಕಾರ್ಯಕ್ಕೆ ಮುಂದಾಗಿದೆ ಎಂದರು.

ಈ ವೇಳೆ ಮುಖ್ಯೋಪಾದ್ಯಾಯರಾದ‌‌‌ ತಿಪ್ಪೇಸ್ವಾಮಿ, ಶಿಕ್ಷಕರಾದ ಕಾವ್ಯ, ಸುಂದರೇಶ್ ಕುಮಾರ್ ಸೇರಿದಂತೆ ಶಿಕ್ಷಕ ವೃಂದ ಹಾಗು ವಿದ್ಯಾರ್ಥಿಗಳು ಇದ್ದರು.

Share. Facebook Twitter LinkedIn WhatsApp Email

Related Posts

GOOD NEWS: ರಾಜ್ಯ ಸರ್ಕಾರದಿಂದ ‘ದಿನಗೂಲಿ ನೌಕರ’ರಿಗೆ ಸಿಹಿಸುದ್ದಿ: 5 ಲಕ್ಷದವರೆಗೆ ನಗದು ರಹಿತ ‘ಉಚಿತ ಆರೋಗ್ಯ ಯೋಜನೆ’ ಜಾರಿ

01/04/2026 4:17 PM2 Mins Read

BIG NEWS : ಕೊಪ್ಪಳದಲ್ಲಿ ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್!

01/04/2026 4:09 PM1 Min Read

BREAKING : ಹಾವೇರಿಯಲ್ಲಿ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ಹರಿದ ಬಸ್ : 2 ವರ್ಷದ ಮಗು ಸಾವು, ಮೂವರಿಗೆ ಗಾಯ!

01/04/2026 3:32 PM1 Min Read
Recent News

GOOD NEWS: ರಾಜ್ಯ ಸರ್ಕಾರದಿಂದ ‘ದಿನಗೂಲಿ ನೌಕರ’ರಿಗೆ ಸಿಹಿಸುದ್ದಿ: 5 ಲಕ್ಷದವರೆಗೆ ನಗದು ರಹಿತ ‘ಉಚಿತ ಆರೋಗ್ಯ ಯೋಜನೆ’ ಜಾರಿ

01/04/2026 4:17 PM

BIG NEWS : ಕೊಪ್ಪಳದಲ್ಲಿ ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್!

01/04/2026 4:09 PM

BREAKING: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಬಿಗ್ ರಿಲೀಫ್: ಮಾನಹಾನಿ ಕೇಸ್ ವಜಾಗೊಳಿಸಿದ ಕೋರ್ಟ್

01/04/2026 4:08 PM

BREAKING: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

01/04/2026 4:03 PM
State News
KARNATAKA

GOOD NEWS: ರಾಜ್ಯ ಸರ್ಕಾರದಿಂದ ‘ದಿನಗೂಲಿ ನೌಕರ’ರಿಗೆ ಸಿಹಿಸುದ್ದಿ: 5 ಲಕ್ಷದವರೆಗೆ ನಗದು ರಹಿತ ‘ಉಚಿತ ಆರೋಗ್ಯ ಯೋಜನೆ’ ಜಾರಿ

By kannadanewsnow0901/04/2026 4:17 PM KARNATAKA 2 Mins Read

ಬೆಂಗಳೂರು: ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ತಾತ್ಕಾಲಿಕ ನೌಕರರ ಹಿತರಕ್ಷಣೆಗೆ ಕರ್ನಾಟಕ ಸರ್ಕಾರವು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.…

BIG NEWS : ಕೊಪ್ಪಳದಲ್ಲಿ ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್!

01/04/2026 4:09 PM

BREAKING : ಹಾವೇರಿಯಲ್ಲಿ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ಹರಿದ ಬಸ್ : 2 ವರ್ಷದ ಮಗು ಸಾವು, ಮೂವರಿಗೆ ಗಾಯ!

01/04/2026 3:32 PM

BREAKING : ಮಂಗಳೂರಲ್ಲಿ ಭೀಕರ ಅಪಘಾತ : ಕಾರು ಡಿಕ್ಕಿ ಹೊಡೆದ ರಭಸಕ್ಕೆ 10 ಅಡಿ ಹಾರಿ ಬಿದ್ದ ಮಹಿಳೆ!

01/04/2026 3:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.