ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಆಲುಗಡ್ಡೆ, ಬಾಳೆಕಾಯಿ, ಹೀರೆಕಾಯಿ ಪಕೋಡಾ ಸರ್ವೇ ಸಾಮಾನ್ಯ. ಆದರೆ ನಾವಿಂದು ಹೊಸ ರುಚಿ, ಸೌತೆಕಾಯಿ ಪಕೋಡಾ ಮಾಡುವ ಬಗೆ ತೀಳಿಸುತ್ತಿದ್ದೇವೆ. ಸಲಾಡ್‌ಗೆಂದು ಬಳಸುವ ಸೌತೆಕಾಯಿಯಿಂದ ಪಕೋಡಾ ಮಾಡಬಹುದಾ ಎಂದು ಹುಬ್ಬೇರಿಸಬೇಡಿ. ಹೌದು. ಸೌತೆಕಾಯಿ ಇಂದಲೂ ಪಕೋಡಾ ಮಾಡಬಹುದು. ಆಲುಗಡ್ಡೆ, ಹೀರೆಯಾಯಿಯಂತೆಯೇ ಸೇಮ್ ಅದರ ಹಾಗೆಯೇ ಸೌತೆಕಾಯಿ ಪಕೋಡಾ ಮಾಡಲಾಗುತ್ತದೆ. ಇದು ಮಾಡಲು ತುಂಬಾ ಈಸಿ ಕೂಡ ಹೌದು.
ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನ. ಇದರಿಂದ ಮಾಡಿದ ಪಕೋಡಾ ಆರೋಗ್ಯಕ್ಕೂ ಒಳ್ಳೆಯದು ಹಾಗು ನಾಲಿಗೆಗೂ ಸಖತ್ ರುಚಿ ನೀಡುತ್ತದೆ. ರುಚಿಕರವಾದ ಸೌತೆಕಾಯಿ ಪಕೋಡಾ ಮಾಡುವ ವಿಧಾನ ತಿಳಿದುಕೊಳ್ಳೋಣ ಬನ್ನಿ.
ಬೇಕಾಗು ಸಾಮಗ್ರಿಗಳು
ರೌಂಡಾಗಿ ಕತ್ತರಿಸಿ ಸೌತೆಕಾಯಿ
ಕಡಲೆ ಹಿಟ್ಟು
ಉಪ್ಪು
ಕೆಂಪು ಮೆಣಸಿನಕಾಯಿ ಪುಡಿ
ಓಂಕಾಳು
ಚಿಟಕೆ ಸೋಡಾ
ಕರಿಯಲು ಎಣ್ಣೆ
ಮಾಡುವ ವಿಧಾನ: ಒಂದು ಕಪ್ ಕಡಲೆ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಗಟ್ಟಿ ಪೇಸ್ಟ್ ಹದಕ್ಕೆ ಕಲಿಸಿಕೊಳ್ಳಿ. ಈ ಪೇಸ್ಟ್‌ಗೆ ನಿಮಗೆ ರುಚಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಉಪ್ಪು, ಖಾರಪುಡಿ ಹಾಕಿಕೊಳ್ಳಿ, ನಂತರ ಇದಕ್ಕೆ ಓಂಕಾಳು ಹಾಗು ಚಿಟಕೆ ಸೋಡಾ ಪುಡಿ ಸೇರಿಸಿ ಇಷ್ಟೆಲ್ಲ ಹಾಕಿದ ಮೇಲೆ ಮತ್ತೆ ಹಿಟ್ಟನ್ನು ಚೆನ್ನಾಗಿ ಕಲೆಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಚೆನ್ನಾಗಿ ಕಾದ ಮೇಲೆ ರೌಂಡಾಗಿ ಕತ್ತರಿಸಿದ ಸೌತೆಕಾಯಿಯನ್ನು ಒಂದೊಂದಾಗಿ ಕಲಿಸಿದ ಕಡಲೆಡಹಿಟ್ಟಿನಲ್ಲಿ ಅದ್ದಿ ಕಾಯಿದ ಎಣ್ಣೆಗೆ ಬಿಡಿ. ಆಗಾಗ ಕೈ ಆಡಿಸಿ, ಪಕೋಡಾ ಚೆನ್ನಾಗಿ ಎಣ್ಣೆಯಲ್ಲಿ ಕರಿದಿದೆ ಎಂದು ಪರೀಕ್ಷಿಸಿಕೊಂಡು ಆನಂತರ ಎಣ್ಣೆಯಿಂದ ಹೊರಗೆ ತೆಗೆಯಿರಿ. ಈಗ ಬಿಸಿ ಬಿಸಿ ಸೌತೆಕಾಯಿ ಪಕೋಡಾ ರೆಡಿಯಾಯ್ತು. ನೀವು ಒಮ್ಮೆ ಟ್ರೈ ಮಾಡಿ ನೋಡಿ.