ಬೆಂಗಳೂರು : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಅಕ್ಟೋಬರ್ 28 ರಂದು ಪಿ-ಕ್ಯಾಪ್ ವಿತರಣೆಗೆ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ದಿನಾಂಕ 28-10-2025 ರಂದು ಬ್ಯಾಂಕ್ವೆಟ್ ಹಾಲ್, ವಿಧಾನ ಸೌಧ, ಬೆಂಗಳೂರು ಇಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರಿಂದ ಪಿ-ಕ್ಯಾಪ್ ಘೋಷಣೆ ಹಾಗೂ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಆದುದರಿಂದ, ಎಲ್ಲಾ ಕಮೀಷನರೇಟ್ ಹಾಗೂ ಜಿಲ್ಲೆಗಳಿಂದ ತಲಾ ಒಬ್ಬರು ಪಿಸಿ ಅಥವಾ ಹೆಚ್ಸಿ ಗಳನ್ನು ಸದರಿ ಕಾರ್ಯಕ್ರಮಕ್ಕೆ ನಿಯೋಜಿಸಿ, ಸದರಿಯವರು ದಿನಾಂಕ 27-10-2025 ರಂದು ಬೆಳಿಗ್ಗೆ 9.00 ಘಂಟೆಗೆ ಡಿ.ಸಿ.ಪಿ., ವಿಧಾನ ಸೌಧ ಸೆಕ್ಯೂರಿಟಿ, ಬೆಂಗಳೂರು ಇವರ ಮುಂದೆ ವಿಧಾನ ಸೌಧ, ಬ್ಯಾಂಕ್ವೆಟ್ ಹಾಲ್ನಲ್ಲಿ ವರದಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿ ಕಳುಹಿಸಲು ಸೂಚಿಸಲಾಗಿದೆ.
ಸದರಿ ಕಾರ್ಯಕ್ರಮಕ್ಕೆ ನಿಯೋಜಿಸುವ ಪಿಸಿ ಅಥವಾ ಹೆಚ್ಸಿ ರವರ ಪಿ-ಕ್ಯಾಪ್ ಅಳತೆಯ ವಿವರವನ್ನು ದಿನಾಂಕ 23-10-2025 ರಂದು ಸಂಜೆ 4.00 ಘಂಟೆಯೊಳಗೆ ಐ.ಜಿ.ಪಿ., ಕೇಂದ್ರಸ್ಥಾನ, ಪೊಲೀಸ್ ಪ್ರಧಾನ ಕಛೇರಿ, ಬೆಂಗಳೂರು ಇವರಿಗೆ ಕಡ್ಡಾಯವಾಗಿ ಕಳುಹಿಸಿಕೊಡುವಂತೆ ಸೂಚಿಸಿದೆ.