ನವದೆಹಲಿ : ಇತ್ತೀಚೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಕರೆನ್ಸಿಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಕೆಲವು ವರ್ಷಗಳ ಹಿಂದೆ, ನಕಲಿ 500 ರೂಪಾಯಿ ನೋಟುಗಳು ಮಾರುಕಟ್ಟೆಗೆ ಬಂದಿವೆ ಮತ್ತು ಆರ್‌ಬಿಐ ಅವುಗಳನ್ನ ನಿಷೇಧಿಸುತ್ತಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಅದೇ ರೀತಿ, ಆರ್‌ಬಿಐ 350 ರೂಪಾಯಿ ನೋಟುಗಳನ್ನು ಮುದ್ರಿಸುತ್ತಿದೆ ಎಂಬ ಸುದ್ದಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವು ಸುದ್ದಿಗಳು ಹೊರಬರುತ್ತಿರುವುದರಿಂದ ಜನರು ಗೊಂದಲಕ್ಕೊಳಗಾಗುತ್ತಿದ್ದಾರೆ.
ಸಾಮಾಜಿಕ ಮಾಧ್ಯಮ ಪೋಸ್ಟ್’ಗಳಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಆರ್‌ಬಿಐ ಉತ್ತರಿಸಿದೆ. ಕೆಲವು ಜನರು ನಕಲಿ ನೋಟುಗಳನ್ನ ಚಲಾವಣೆ ಮಾಡುತ್ತಿದ್ದಾರೆ ಮತ್ತು ದೊಡ್ಡ ಮುಖಬೆಲೆಯ ನೋಟುಗಳನ್ನ ಮತ್ತೆ ಅಮಾನ್ಯಗೊಳಿಸಲಾಗುವುದು ಎಂಬ ಸುದ್ದಿಗಳಿಂದ ಜನರು ಚಿಂತಿತರಾಗಿದ್ದು, ಆರ್‌ಬಿಐ ನೇರವಾಗಿ ಪ್ರತಿಕ್ರಿಯಿಸಿದ್ದು, ಸತ್ಯವನ್ನ ಬಹಿರಂಗಪಡಿಸಿದೆ.
ಇಂತಹ ಹಲವು ಪ್ರಕರಣಗಳಲ್ಲಿ ಆರ್‌ಬಿಐ, ಕೇಂದ್ರ ಸರ್ಕಾರಿ ಅಧಿಕಾರಿಗಳು, ಹಣಕಾಸು ಇಲಾಖೆ ಸಚಿವರು ಮತ್ತು ಇತರ ಸಿಬ್ಬಂದಿ ಪ್ರತಿಕ್ರಿಯಿಸಿ, ನಕಲಿ ನೋಟುಗಳ ಚಲಾವಣೆ, ಹೊಸ ಕರೆನ್ಸಿ ಮುದ್ರಣ ಇತ್ಯಾದಿಗಳ ಬಗ್ಗೆ ವೈರಲ್ ಆಗುತ್ತಿರುವ ಸುದ್ದಿ ನಿಜವೋ ಸುಳ್ಳೋ ಎಂದು ಹೇಳಿದ್ದಾರೆ.
ಈಗ ಮತ್ತೆ ಅಂತಹದ್ದೇ ಸುದ್ದಿ ಓಡಾಡುತ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ 10 ಮತ್ತು 20 ರೂಪಾಯಿ ನಾಣ್ಯಗಳು ಮತ್ತು ನೋಟುಗಳನ್ನ ರದ್ದುಗೊಳಿಸಲಿದೆ ಎಂದು ಹೇಳುವ ಪೋಸ್ಟ್’ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಸಧ್ಯ ಈ ವಿಷಯದ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. 10 ನೋಟುಗಳು ಮತ್ತು ನಾಣ್ಯಗಳು ಚಲಾವಣೆಯಲ್ಲಿ ಉಳಿಯುತ್ತವೆ ಎಂದು ಆರ್‍ಬಿಐ ಹೇಳಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ 10 ರೂಪಾಯಿ ನೋಟುಗಳು ಮತ್ತು ನಾಣ್ಯಗಳನ್ನ ಮುದ್ರಿಸುವುದಾಗಿಯೂ ಘೋಷಿಸಿದೆ. 20 ರೂಪಾಯಿ ನೋಟುಗಳ ಮುದ್ರಣವನ್ನು ಇಲ್ಲಿಯವರೆಗೆ ನಿಲ್ಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ನಕಲಿ ಸುದ್ದಿಗಳಿಂದ ಜನರು ಭಯಭೀತರಾಗಬೇಡಿ ಎಂದು ಅಧಿಕಾರಿಗಳು ಹೇಳಿದ್ದು, ಕರೆನ್ಸಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಘೋಷಣೆ ಬಂದರಷ್ಟೇ ನಂಬಬೇಕೆಂದು ಸೂಚಿಸಿದ್ದಾರೆ.
ಇದಲ್ಲದೆ, ಕೇಂದ್ರ ಸರ್ಕಾರವು 20 ರೂಪಾಯಿ ನಾಣ್ಯಗಳ ವಿವರಗಳನ್ನು ಬಹಿರಂಗಪಡಿಸಿದೆ. ಈಗಾಗಲೇ ಚಲಾವಣೆಯಲ್ಲಿರುವ 10 ರೂಪಾಯಿ ನಾಣ್ಯದಂತೆಯೇ 20 ರೂಪಾಯಿ ನಾಣ್ಯವನ್ನು ತಯಾರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸಧ್ಯ ಒಂದಷ್ಟು ನಾಣ್ಯಗಳು ಕೂಡ ಮಾರುಕಟ್ಟೆಗೆ ಬಂದಿವೆ.
BREAKING : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : ಪತ್ನಿಯನ್ನು ಕಲ್ಲಿನಿಂದ ಜಜ್ಜಿ, ಬರ್ಬರವಾಗಿ ಕೊಂದ ಪತಿ!
BREAKING : ಉತ್ತರಕನ್ನಡದಲ್ಲಿ ಪೋಲೀಸರ ಭರ್ಜರಿ ಕಾರ್ಯಾಚರಣೆ : ರಾತ್ರೋರಾತ್ರಿ ಐವರು ಬಡ್ಡಿ ದಂಧೆಕೋರರು ಅರೆಸ್ಟ್!
BREAKING: ಬೆಂಗಳೂರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಶವ ಪತ್ತೆ