ಕಿತ್ತೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾರಿಗೆ ಸೇವೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ ನೂತನ ಬಸ್ ಘಟಕವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದರು.
ಸಮಗ್ರ ಸಾರಿಗೆ ಅಭಿವೃದ್ಧಿಯ ಗುರಿಯೊಂದಿಗೆ ಈ ಭಾಗದ ಪ್ರಯಾಣಿಕರಿಗೆ ಸುಸಜ್ಜಿತ ಸೇವೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ನೂತನ ಘಟಕದ ವಿಶೇಷತೆಗಳು:
-
ವೆಚ್ಚ ಮತ್ತು ವಿಸ್ತೀರ್ಣ: ಒಟ್ಟು ₹5.27 ಕೋಟಿ ವೆಚ್ಚದಲ್ಲಿ, 4 ಎಕರೆ ವಿಸ್ತೀರ್ಣದಲ್ಲಿ ಈ ಆಧುನಿಕ ಬಸ್ ಘಟಕವನ್ನು ನಿರ್ಮಿಸಲಾಗಿದೆ.
-
ಕಾರ್ಯಾಚರಣೆ: ಪ್ರಸ್ತುತ ಈ ಘಟಕವು 15 ವಾಹನಗಳ ಬಲವನ್ನು ಹೊಂದಿದ್ದು, 15 ವೇಗದೂತ ಅನುಸೂಚಿಗಳ (Schedules) ಮೂಲಕ ಕಾರ್ಯಾಚರಣೆ ಆರಂಭಿಸಿದೆ.
-
ವ್ಯಾಪ್ತಿ: ಈ ಘಟಕದ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣವೂ ಒಳಗೊಂಡಿದೆ.
ಸಾರಿಗೆ ಸಂಸ್ಥೆಯ ಇತರೆ ಅಭಿವೃದ್ಧಿ ಕಾಮಗಾರಿಗಳು:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಸಚಿವರು ಪಟ್ಟಿ ಮಾಡಿದರು:
-
ಹುಬ್ಬಳ್ಳಿ: ₹23.48 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ.
-
ಬಾಗಲಕೋಟೆ: ನವನಗರದಲ್ಲಿ ₹6.56 ಕೋಟಿ ವೆಚ್ಚದಲ್ಲಿ 5 ಎಕರೆ ವಿಸ್ತೀರ್ಣದ ನೂತನ ಘಟಕ ನಿರ್ಮಾಣ.
-
ಶಿಗ್ಗಾಂವ: ₹8 ಕೋಟಿ ವೆಚ್ಚದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ಹೊಸ ಬಸ್ ಘಟಕದ ನಿರ್ಮಾಣ.

ನೇಮಕಾತಿ ಪ್ರಕ್ರಿಯೆಗೆ ಚುರುಕು:
ಸಾರಿಗೆ ಸಂಸ್ಥೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು:
-
2000 ಚಾಲನಾ ಸಿಬ್ಬಂದಿಗಳ ನೇಮಕಾತಿ ಪೂರ್ಣಗೊಳಿಸಿ ಆದೇಶ ನೀಡಲಾಗಿದೆ.
-
ಮಾರ್ಚ್ 2024 ರಿಂದ ಈವರೆಗೆ ವಿವಿಧ ಹುದ್ದೆಗಳಲ್ಲಿ 158 ಜನರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲಾಗಿದೆ.
-
ದರ್ಜೆ-2 ರ ಅಧಿಕಾರಿಗಳ ಒಟ್ಟು 33 ಹುದ್ದೆಗಳ ನೇರ ನೇಮಕಾತಿ ಹಾಗೂ ಆಂತರಿಕ ನೇಮಕಾತಿ ಪ್ರಕ್ರಿಯೆಗಳು ಸದ್ಯ ಪ್ರಗತಿಯಲ್ಲಿವೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು:
ಈ ಉದ್ಘಾಟನಾ ಸಮಾರಂಭದಲ್ಲಿ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಿನಯ ಬಾ. ನಾವಲಗಟ್ಟಿ, ವಾ.ಕ.ರ.ಸಾ. ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ಹನಮಣ್ಣವರ, ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
BIG BREAKING: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ: ಸಂಪುಟ ವಜಾಗೊಳಿಸಿದ ರಾಜ್ಯಪಾಲರು








