ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿರುವಂತ ಅಕ್ಷಯಸಾಗರ ಸೌಹಾರ್ದ ಸಹಕಾರಿ ಸಂಘದ ನೂತನ ಅಕ್ಷಯ ಬೆಳ್ಳಿ ಭವನವನ್ನು ನವೆಂಬರ್.17ರಂದು ಲೋಕಾರ್ಪಣೆಗೊಳಿಸಲಾಗುತ್ತಿದೆ.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡತ ಅಕ್ಷಯ ಸಾಗರ ಸೌಹಾರ್ದ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಬಿ.ಜಿ ದಿನೇಶ್ ಬರದವಳ್ಳಿ ಅವರು, ದಿನಾಂಕ 17-11-2024ರಂದು ಬೆಳಿಗ್ಗೆ 10 ಗಂಟೆಗೆ ಸಾಗರ ವಿನೋಬ ನಗರದ ಸಣ್ಣಮನೆ ಬಡಾವಣೆಯಲ್ಲಿ ನಿರ್ಮಿಸಿರುವಂತ ಅಕ್ಷಯ ಬೆಳ್ಳಿ ಭವನವನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದರು.
25ನೇ ವರ್ಷಕ್ಕೆ ಸಂಘವು ಕಾಲಿಡುತ್ತಿರುವ ಹಿನ್ನಲೆಯಲ್ಲಿ ಗಿರರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಲಿದ್ದಾರೆ. ಜಡೆ ಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಸಮ್ಮುಖದಲ್ಲಿ ಅಕ್ಷಯ ಬೆಳ್ಳಿ ಭವನ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುರು ಬಸವ ಪಂಡಿತಾರಾಧ್ಯ ಮಹಾಂತ ದೇಶಿ ಕೇಂದ್ರ ಸ್ವಾಮೀಜಿಗಳು ಕೂಡ ಸಾನಿಧ್ಯ ವಹಿಸಲಿದ್ದಾರೆ. ಅಕ್ಷಯ ಬೆಳ್ಳಿ ಭವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ. ಆಡಳಿತ ಕಚೇರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೆರವೇರಿಸಲಿದ್ದಾರೆ ಎಂದರು.
ಅಕ್ಷಯ ಬೆಳ್ಳಿ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಾಗರ ಕ್ಷೇತ್ರದ ಜನಪ್ರಿಯ ಶಾಸಕರಾದಂತ ಗೋಪಾಲಕೃಷ್ಣ ಬೇಳೂರು ವಿಶೇಷ ಆಹ್ವಾನಿತರಾಗಿ ಹಾಜರಿರಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಹಕಾರ ಸಚಿವ ಎಸ್ ಎಸ್ ಪಾಟೀಲ್, ಮಾಜಿ ಸಚಿವ ಹರತಾಳು ಹಾಲಪ್ಪ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷರಾದಂತ ಜಿ.ನಂಜನಗೌಡ್ರು, ಹಿರಿಯ ನ್ಯಾಯವಾದಿ ಜಯಕುಮಾರ್ ಎಸ್ ಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರಾದಂತ ಶಂಕರ್ ಬಿದರಿ, ಶಿವಮೊಗ್ಗ ಮ್ಯಾಮ್ ಕೋಸ್ ಉಪಾಧ್ಯಕ್ಷ ಹೆಚ್ ಎಸ್ ಮಹೇಶ್ ಹುಲ್ಕಳಿ, ಕಾರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಉಪಾಧ್ಯಕ್ಷ ಎಆರ್ ಪ್ರಸನ್ನ ಕುಮಾರ್, ಸಾಗರ ನಗರಸಭೆಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಟಿ.ಡಿ ಮೇಘರಾಜ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಹೆಚ್ ಮಲ್ಲಿಕಾರ್ಜುನ ಹಕ್ರೆ, ಸಾಗರದ ಆಫ್ ಕೋಸ್ ಅಧ್ಯಕ್ಷ ಬಿಎ ಇಂದೂಧರ್ ಆಗಮಿಸುತ್ತಿದ್ದಾರೆ ಎಂದರು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಿವಮೊಗ್ಗದ ಸಹಕಾರಿ ಸಂಘಗಳ ಉಪನಿಬಂಧಕರಾದಂತ ಚಂದ್ರಶೇಖರ್ ನಾಗಭೂಷಣ್ ಕಲ್ಮನೆ, ಇರುವಕ್ಕಿ ಕೃಷಿ ಮತ್ತು ತೋಯಗಾರಿಕಾ ವಿವಿ ಉಪ ಕುಲಪತಿ ಜಗದೀಶ್, ಪಿಎಲ್ ಡಿ ಬ್ಯಾಂಕ್ ನಿವೃತ್ತ ಕಾರ್ಯದರ್ಶಿ ಎಂ.ಹೆಚ್ ಗೌಡ್ರು, ಸಾಗರದ ಹಿರಿಯ ನ್ಯಾಯವಾದಿ ಬಸಪ್ಪ ಗೌಡ್ರು, ಹಿರಿಯ ಸಹಕಾರಿಗಳಾದಂತ ಕೆ.ಜಿ ಜಗದೀಶ್ ಒಡೆಯರ್, ನಗರಸಭಾ ಸದಸ್ಯ ಗಣೇಶ್ ಪ್ರಸಾದ್, ಜನಾರ್ಧನ ಉಡುಪ, ಪೌರಾಯುಕ್ತ ಹೆಚ್.ಕೆ ನಾಗಪ್ಪ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ
ನವೆಂಬರ್.17, 2024ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭಗೊಂಡು, ರಾತ್ರಿ ವರೆಗೆ ನಡೆಯಲಿದೆ. ಮಧ್ಯಾಹ್ನ 2.30ರಿಂದ ವಿವಿಧ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಲಾ ಸಿಂಚನ ಶಿಕ್ಷಕರ ತಂಡದಿಂದ ಕೆರೆಗೆ ಹಾರ ನಾಟಕ ಪ್ರದರ್ಶನ ಕೂಡ ಇದೆ. ಸಂಜೆ 7 ಗಂಟೆಗೆ ಜೀ ಕನ್ನಡದ ಕಿರುತೆರೆಯ ಮಜಾ ಭಾರತ ಮತ್ತು ಕಾಮಿಡಿ ಕಿಲಾಡಿ ಖ್ಯಾತಿಯ ರಾಘು ಮತ್ತು ನಯನ ಹಾಗೂ ತಂಡದವರಿಂದ ಹಾಸ್ಯ ಕಾರ್ಯಕ್ರಮ ಕೂಡ ನಡೆಯಲಿದೆ ಎಂದರು.
ವಸ್ತು ಪ್ರದರ್ಶನ ಆಯೋಜನೆ
ಅಕ್ಷಯ ಬೆಳ್ಳಿ ಭವನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ, ಆಹಾರ ಮೇಳೆ ಕೂಡ ಆಯೋಜಿಸಲಾಗಿದೆ. ಈ ಮೇಳದಲ್ಲಿ ಭಾಗವಹಿಸುವವರು ಅಕ್ಷಯ ಸಾಗರ ಸೌಹಾರ್ದ ಸಂಘದ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಸ್ಟಾಲ್ ಬುಕ್ ಮಾಡಬಹುದಾಗಿದೆ.
ರೈತರಿಗೆ ಉಪಯೋಗವಾಗುವಂತ ಯಂತ್ರಗಳ ಪ್ರದರ್ಶ ಕೂಡ ಇರಲಿದೆ. ಚರಕದಿಂದ ಬಟ್ಟೆ ಪ್ರದರ್ಶನ ಕೂಡ ಇರಲಿದೆ. ಎಲ್ಲರೂ ಸಂಘವನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಸುಮಾರು 2 ಕೋಟಿ 55 ಲಕ್ಷ ವೆಚ್ಚದಲ್ಲಿ ನೂತನ ಭವನವನ್ನು ನಿರ್ಮಿಸಲಾಗಿದೆ. ಕಟ್ಟಡದ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ನವೆಂಬರ್.17ರಂದು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾಗರದ ಸಮಸ್ತ ಜನತೆಯು ಭಾಗಿಯಾಗುವಂತೆ ಕೋರಿದರು.
ಈ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದಂತ ನಿರಂಜನ್.ಹೆಚ್.ಬಿ, ಜಗದೀಶ್ ಬಿ.ಸಿ, ದೇವರಾಜ ಕೆ.ಸಿ, ಅಣ್ಣಾಜಿ ಗೌಡ್ರು.ಬಿ.ಬಿ, ಹಾಲಸ್ವಾಮಿ, ಇಂದ್ರಮ್ಮ.ಕೆ.ಬಿ, ಜ್ಯೋತಿ.ಕೆ.ಎಸ್, ಲೋಕನಾಥ ಬಿಳಿಸಿರಿ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ