ಬೆಂಗಳೂರು: ನಗರದ ಜನತೆಗೆ ಗುಡ್ ಎನ್ನುವಂತೆ ಬೆಂಗಳೂರಿನ ಹೊಸ ಮಾರ್ಗವೊಂದರಲ್ಲಿ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬಿಎಂಟಿಸಿಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ನೂತನ ಮಾರ್ಗವನ್ನು ದಿನಾಂಕ 02.04.2025 ರಿಂದ ರಿಂದ ಪರಿಚಯಿಸಿದ್ದು, ವಿವರ ಕೆಳಕಂಡಂತಿದೆ:
ಕ್ರ.ಸಂ | ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ |
01 | 220-ಬಿ/1 | ಕೆ.ಆರ್ ಮಾರುಕಟ್ಟೆ | ಉಪಾಧ್ಯಾಯ ಬಡಾವಣೆ | ಸಿರ್ಸಿ ಸರ್ಕಲ್, ನಾಯಂಡಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯ ಗೇಟ್,
ಚಂದ್ರಮೌಳೇಶ್ವರ ದೇವಸ್ಥಾನ, ಭೈರವನಗರ |
01 |
02 | 220-ಸಿ/1 | ಕೆಂಪೇಗೌಡ ಬಸ್ ನಿಲ್ದಾಣ | ಜ್ಞಾನ ಭಾರತಿ ಲೇಔಟ್ 01ನೇ ಬ್ಲಾಕ್ | ಸಿರ್ಸಿ ಸರ್ಕಲ್, ನಾಯಂಡಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯ ಗೇಟ್,
ಚಂದ್ರಮೌಳೇಶ್ವರ ದೇವಸ್ಥಾನ, ಭೈರವನಗರ |
01 |
ಮಾರ್ಗ ಸಂಖ್ಯೆ: 220-ಬಿ/1
ಬಿಡುವ ವೇಳೆ | ||
ಹಳೇಗುಡ್ಡದಹಳ್ಳಿ | ಶಿವಾಜಿನಗರ ಬಸ್ ನಿಲ್ದಾಣ | |
6:50, 8:40, 10:15, 14:45, 16:15, 18:05, 19:45, 21:20 | 6:10,7:35, 9:25,11:00, 15:30, 17:15, 18:55, 20:35 |
ಮಾರ್ಗ ಸಂಖ್ಯೆ: 220-ಸಿ/1
ಬಿಡುವ ವೇಳೆ | ||
ಕೆಂಪೇಗೌಡ ಬಸ್ ನಿಲ್ದಾಣ | ಶಿವಾಜಿನಗರ ಬಸ್ ನಿಲ್ದಾಣ | |
6:15, 8:00, 9:50, 15:15, 17:15, 19:10, 21:05 | 5:30, 7:05, 8:50, 11:10, 16:05, 18:10, 20:05 |
‘ಬಂಡೀಪುರ’ದಲ್ಲಿ ರಾತ್ರಿ ಸಂಚಾರದ ಬಗ್ಗೆ ಸಿಎಂ ಜೊತೆ ಸಮಾಲೋಚಿಸಿ ನಿರ್ಧಾರ: ಸಚಿವ ಈಶ್ವರ್ ಖಂಡ್ರೆ