ಜೆರುಸಲೇಂ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ತೀವ್ರತೆ ಹೆಚ್ಚಾಗುತ್ತಿರುವ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್ ಜೊತೆ ನೇರ ಶಾಂತಿ ಮಾತುಕತೆ ನಡೆಸಲು ಅಧಿಕೃತವಾಗಿ ಸಮ್ಮತಿ ಸೂಚಿಸಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮದ ಪ್ರಯತ್ನಗಳ ನಡುವೆ ಈ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ನೆತನ್ಯಾಹು, “ಲೆಬನಾನ್‌ನ ಸತತ ವಿನಂತಿಯ ಮೇರೆಗೆ ನಾವು ನೇರ ಮಾತುಕತೆಗೆ ಸಿದ್ಧರಿದ್ದೇವೆ” ಎಂದು ತಿಳಿಸಿದ್ದಾರೆ. ಈ ಮಾತುಕತೆಯು ಮುಖ್ಯವಾಗಿ ಈ ಕೆಳಗಿನ ಅಂಶಗಳ ಮೇಲೆ ಕೇಂದ್ರೀಕೃತವಾಗಲಿದೆ:
ಹೆಜ್ಬೊಲ್ಲಾ ನಿಶಸ್ತ್ರೀಕರಣ: ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರ ಸಂಘಟನೆಯನ್ನು ಶಸ್ತ್ರರಹಿತಗೊಳಿಸುವುದು ಇಸ್ರೇಲ್‌ನ ಮೊದಲ ಷರತ್ತಾಗಿದೆ.
ದಶಕಗಳ ಕಾಲದ ಹಗೆತನ ಮರೆತು ಉಭಯ ದೇಶಗಳ ನಡುವೆ ಶಾಂತಿಯುತ ಸಂಬಂಧ ವೃದ್ಧಿಸುವುದು.ಇಸ್ರೇಲ್‌ನ ಉತ್ತರ ಭಾಗದ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿದೆ.








