ಹುಬ್ಬಳ್ಳಿ: ಜಿಲ್ಲೆಯಲ್ಲಿ ಕಾರ್ಪೋರೇಟರ್ ಪುತ್ರಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಧ್ವನಿ ಎತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣ ಅಮಾನವೀಯವಾದದ್ದು ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
ಈ ಬಗ್ಗೆ ಕರ್ನಾಟಕ ಬಿಜೆಪಿ ಪ್ರಧಾನಿ ಮೋದಿ ಅವರ ಮಾತನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಅಮಾನವೀಯವಾದುದು. ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದರೂ ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ನೀತಿ ಅನುಸರಿಸಿ ಘಟನೆಯನ್ನು ಗಂಭೀರವಾಗಿ ತೆಗದುಕೊಳ್ಳಲೇ ಇಲ್ಲ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಅಮಾನವೀಯವಾದುದು. ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದರೂ ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ನೀತಿ ಅನುಸರಿಸಿ ಘಟನೆಯನ್ನು ಗಂಭೀರವಾಗಿ ತೆಗದುಕೊಳ್ಳಲೇ ಇಲ್ಲ.
– ಪ್ರಧಾನಿ ಶ್ರೀ @narendramodi#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ pic.twitter.com/YdBy6N6StM
— BJP Karnataka (@BJP4Karnataka) April 28, 2024
ಅಂದಹಾಗೇ ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಹತ್ಯೆಯಾಗಿತ್ತು. ಫಯಾಜ್ ಎಂಬಾತ ಚಾಕುವಿನಿಂದ 14 ಬಾರಿ ಹಿರಿದು ಹತ್ಯೆಗೈದಿದ್ದನು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಈಗಾಗಲೇ ಸಿಐಡಿ ಅಧಿಕಾರಿಗಳು ಪ್ರಕರಣದ ಕುರಿತಂತೆ ತನಿಖೆ ಕೂಡ ನಡೆಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2024: ಬೆಂಗಳೂರಿನ 3 ಕ್ಷೇತ್ರಗಳಲ್ಲಿ ‘ಮತದಾನದ’ ಪ್ರಮಾಣ ಇಳಿಕೆ