ಹುಬ್ಬಳ್ಳಿ: ಇಂದು ಮುಂಜಾಗನೇ ಮೃತ ನೇಹಾ ಹಿರೇಮಠ ಅವರ ತಂದೆ ನಿರಂಜನ್ ಅವರ ಆಪ್ತ ಸಹಾಯಕ ಆಗಿರುವಂತ ವಿನಯ್ ಎಂಬಾತನನ್ನು ಮೂವರು ಅಪರಿಚಿತರು ಕಿಡ್ನ್ಯಾಪ್ ಮಾಡೋದಕ್ಕೆ ಯತ್ನಿಸಿರುವಂತ ಘಟನೆ ನಡೆದಿದೆ.
ಹುಬ್ಬಳ್ಳಿಯಲ್ಲಿ ಇಂದು ಮುಂಜಾಗನೆ ವಾಲ್ವೇಕರ್ ಗಲ್ಲಿಯಲ್ಲಿನ ಗಜಾನನ ಬ್ಯಾಂಕ್ ಎದುರು ಮೂವರು ನಿರಂಜನ್ ಅವರ ಪಿಎ ವಿನಯ್ ಆಲಿಯಾಸ್ ಈರಣ್ಣ ಎಂಬುವರನ್ನು ಕಾರನ್ನು ಹತ್ತುವಂತೆ ಬೆದರಿಸಿ, ಕಿಡ್ನ್ಯಾಪ್ ಮಾಡೋದಕ್ಕೆ ಯತ್ನಿಸಿದ್ದಾರೆ.
ಈ ವೇಳೆಯಲ್ಲಿ ಕೂಡಲೇ ಅಲರ್ಟ್ ಆದಂತೆ ನಿರಂಜನ್ ಪಿಎ ವಿನಯ್ ತಮ್ಮ ಮೊಬೈಲ್ ತೆಗೆದುಕೊಂಡು ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಇದರಿಂದ ಹೆದರಿದಂತ ಮೂವರು ಅಪರಿಚಿತರು ಅಲ್ಲಿಂದ ಪರಾರಿಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಈ ಘಟನೆಯ ಬಳಿಕ ನಿರಂಜನ್ ಪಿಎ ವಿನಯ್ 112ಗೆ ಕರೆ ಮಾಡಿ, ಪೊಲೀಸರಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿದ್ದು, ಕಿಡ್ನ್ಯಾಪ್ ಗೆ ಯತ್ನಿಸಿದಂತ ಮೂವರ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
BREAKING: ನೀಟ್ ಪಿಜಿ-2024ರ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ: ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಿ | NEET PG 2024
BREAKING : ಬಂಧನವಾಗಿ 9 ದಿನಗಳ ಬಳಿಕ ದರ್ಶನ್ ನೋಡಲು ಪೊಲೀಸ್ ಠಾಣೆಗೆ ಬಂದ ಪತ್ನಿ ವಿಜಯಲಕ್ಷ್ಮಿ| Vijayalakshmi