ನವದೆಹಲಿ: ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಕೇಂದ್ರವು ಸಿಬಿಐ ತನಿಖೆಗೆ ಆದೇಶಿಸಿದ ಒಂದು ದಿನದ ನಂತರ, ಕೇಂದ್ರ ತನಿಖಾ ಸಂಸ್ಥೆ ಈ ವಿಷಯದ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದೆ.
ಕೇಂದ್ರ ಸರ್ಕಾರವು ನಿನ್ನೆ ಸಂಜೆಯಷ್ಟೇ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿರುವುದಾಗಿ ತಿಳಿದು ಬಂದಿದೆ.
ಸಿಬಿಐ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಈ ವಿಷಯದ ಬಗ್ಗೆ ಹೆಚ್ಚಿನ ಆದ್ಯತೆಯ ಮೇರೆಗೆ ತನಿಖೆ ನಡೆಸಲು ಸಿಬಿಐ ವಿಶೇಷ ತಂಡಗಳನ್ನು ರಚಿಸಿದೆ. ಸ್ಥಳೀಯ ಪೊಲೀಸ್ ಪ್ರಕರಣಗಳು ದಾಖಲಾಗಿರುವ ಪಾಟ್ನಾ ಮತ್ತು ಗೋಧ್ರಾಗೆ ವಿಶೇಷ ಸಿಬಿಐ ತಂಡಗಳನ್ನು ಕಳುಹಿಸಲಾಗುತ್ತಿದೆ.
CBI has registered a criminal case and initiated an investigation. Special teams have been formed by the CBI to investigate the matter on top priority. Special CBI teams are being sent to Patna and Godhra where local police cases have been registered: CBI https://t.co/TkMmtcymVs
— ANI (@ANI) June 23, 2024
BREAKING: ಛತ್ತೀಸ್ ಗಢದಲ್ಲಿ ನಕ್ಸಲರಿಂದ IED ಸ್ಪೋಟ: ಇಬ್ಬರು CRPF ಸಿಬ್ಬಂದಿ ಹುತಾತ್ಮ
‘ಚನ್ನಪಟ್ಟಣ’ವನ್ನು ಬಿಟ್ಟು ಕೊಡಲು ನನಗೆ ಮನಸ್ಸಿಲ್ಲ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ