Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ​ಚೀನಾದಲ್ಲಿ ಭೀಕರ ಸ್ಫೋಟ: 7 ಮಂದಿ ದುರ್ಮರಣ, 17 ಜನರಿಗೆ ಗಂಭೀರ ಗಾಯ | Explosion in China

‘ಈ ದಾಳಿಗಳು ತಕ್ಷಣ ನಿಲ್ಲಬೇಕು!’: ಅಮೆರಿಕ ರಾಯಭಾರಿಗೆ ಭಾರತದ ‘ಸಮನ್ಸ್ : ಪಶ್ಚಿಮ ಏಷ್ಯಾ ಹಡಗು ದಾಳಿ ವಿರುದ್ಧ ತೀವ್ರ ಆಕ್ರೋಶ!

‘ವಾಣಿಜ್ಯ ಹಡಗುಗಳ ಮೇಲಿನ ನಿರಂತರ ದಾಳಿಗಳು ತೀವ್ರ ಕಳವಳಕಾರಿ’: ಒಮಾನ್ ಕರಾವಳಿ ಬಿಕ್ಕಟ್ಟಿನ ಬಗ್ಗೆ ಭಾರತ ಖಡಕ್ ಎಚ್ಚರಿಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ಪೊಲೀಸರು ಡ್ರಗ್ ಜಾಲ ಬೇಧಿಸುವ ಸಿದ್ಧತೆಯಲ್ಲಿದ್ದಾಗಲೇ ‘NCB’ ಎಂಟ್ರಿ; ಕಾರ್ಯಾಚರಣೆ ಹೀಗಿತ್ತು!
KARNATAKA

ಬೆಂಗಳೂರು ಪೊಲೀಸರು ಡ್ರಗ್ ಜಾಲ ಬೇಧಿಸುವ ಸಿದ್ಧತೆಯಲ್ಲಿದ್ದಾಗಲೇ ‘NCB’ ಎಂಟ್ರಿ; ಕಾರ್ಯಾಚರಣೆ ಹೀಗಿತ್ತು!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದಲ್ಲಿ ಪತ್ತೆಯಾಗಿರುವ ಡ್ರಗ್ ಫ್ಯಾಕ್ಟರಿ ಇದೀಗ ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದೆ. ಮಹಾರಾಷ್ಟ್ರದಲ್ಲಿನ ಡ್ರಗ್ ದಂಧೆ ಕರ್ನಾಟದತ್ತ ತನ್ನ ಕಬಂಧ ಬಾಹುವನ್ನು ಚಾಚಿರುವ ಬಗ್ಗೆ ಸುಳಿವರಿತ ಬೆಂಗಳೂರು ಪೊಲೀಸರೇ ಭಾರೀ ಕಾರ್ಯಾಚರಣೆಗೆ ತಯಾರಿ ನಡೆಸಿದ್ದರು. ಆ ಹೊತ್ತಿಗೆ ಮಹಾರಾಷ್ಟ್ರ ANTF ಮತ್ತು ಎನ್‌ಸಿಬಿ ಅಧಿಕಾರಿಗಳು ಬೆಂಗಳೂರು ಪೊಲೀಸರ ಜೊತೆ ಚರ್ಚಿಸಿದರು. ಅದಾಗಲೇ ತಾವು ದಾಳಿಗೆ ತಯಾರಿ ನಡೆಸಿದ್ದ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಪೊಲೀಸರ ಜೊತೆ ಎನ್‌ಸಿಬಿ ಅಧಿಕಾರಿ ಸಾಥ್ ನೀಡಿದರು. ಈ ಮೂಲಕ ಬೆಂಗಳೂರು ಪೊಲೀಸರ ನೇತೃತ್ವದಲ್ಲೇ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಬೃಹತ್ ಡ್ರಗ್ ಜಾಲ ಪತ್ತೆಯಾಗಿದೆ.

ಕೇಂದ್ರ ಗುಪ್ತ ದಳದ ಮಾಹಿತಿ ಪ್ರಕಾರ, ಬಾಗಲೂರು ಮತ್ತು ಕೊತ್ತನೂರು ಠಾಣೆಗಳ ಗಡಿ ಭಾಗದಲ್ಲಿ ಡ್ರಗ್ ಹೊಂದಿಸಿಕೊಂಡು ಅದನ್ನು ವಿತರಿಸುವ ಸಂಚು ಈ ಮಾಫಿಯಾದಿಂದ ನಡೆಯುತ್ತಿತ್ತು. ಬೆಂಗಳೂರು ಪೊಲೀಸರ ಕಣ್ಣುತಪ್ಪಿಸಿ ಈ ದಂಧೆ ನಡೆಸುತ್ತಿದ್ದ ಮಾಫಿಯಾ ತಮ್ಮ ನೆಲೆಯನ್ನು ರಾಜ್ಯದಿಂದ ರಾಜ್ಯಕ್ಕೆ ಬದಲಾಯಿಸುತ್ತಿತ್ತು.

ಇತ್ತೀಚೆಗಷ್ಟೇ ಬೆಂಗಳೂರು ಹೊರವಲಯದಲ್ಲಿ ಬೀಡು ಬಿಟ್ಟು ದಂಧೆ ಆರಂಭಕ್ಕೆ ತಯಾರಿ ನಡೆಸಿತ್ತು. ಈ ಪ್ರದೇಶಗಳು ಇತ್ತೀಚೆಗಷ್ಟೇ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಸೇರಿದ್ದರಿಂದ ಹಾಗೂ ಪೊಲೀಸರ ಓಡಾಟ ಕಡಿಮೆ ಇರಬಹುದೆಂಬ ಭ್ರಮೆಯಿಂದ ಈ ಡ್ರಗ್ ಮಾಫಿಯಾವು ತನ್ನ ರಹಸ್ಯ ಚಟುವಟಿಕೆಗೆ ಈ ಪ್ರದೇಶಗಳನ್ನೇ ಆಯ್ಕೆ ಮಾಡಿತ್ತೆನ್ನಲಾಗಿದೆ.

ಅದಾಗಲೇ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಒಬ್ಬಾತ, ಒಂದಷ್ಟು MDMA ಹಾಗೂ ಮಾದಕ ದ್ರವ್ಯಗಳನ್ನು ಅವಲಹಳ್ಳಿಯ ಮನೆಯೊಂದಕ್ಕೆ ಸಾಗಿಸಿದ್ದಾನೆ. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ವೈಟ್ ಫೀಲ್ಡ್ ಉಪವಿಭಾಗದ ಪೊಲೀಸರು ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ಮಹಾರಾಷ್ಟ್ರ ANTF ಮತ್ತು ಎನ್‌ಸಿಬಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಬೆಂಗಳೂರು ಪೊಲೀಸರ ಜೊತೆಯಲ್ಲೇ ಮಹಾರಾಷ್ಟ್ರ ಹಾಗೂ ಕೇಂದ್ರದ ತಂಡಗಳು ಯಶಸ್ವೀ ಜಂಟಿ ಕಾರ್ಯಾಚರಣೆ ನಡೆಸಿವೆ.

ಬೆಂಗಳೂರು ಪೊಲೀಸರದ್ದೇ ಪ್ರಮುಖ ಪಾತ್ರ!

ಬೆಂಗಳೂರಿನಲ್ಲಿ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ದಂಧೆ ನಡೆಸಲಾಗುತ್ತಿದ್ದ ಸಂಗತಿ ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿವೆ. ಈ ದಂಧೆಕೋರರು ಇತ್ತೀಚೆಗಷ್ಟೇ ಕರ್ನಾಟಕಕ್ಕೆ ಲಗ್ಗೆ ಹಾಕಿದ್ದಾರೆ. ಆದರೆ, ಅಷ್ಟರಲ್ಲೇ ಬೆಂಗಳೂರು ಪೊಲೀಸರು ಈ ಜಾಲವನ್ನು ಬೇಧಿಸಲು ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರು ಪೊಲೀಸರ ಪರಿಶ್ರಮವೇ ತಮ್ಮ ಈ ಕಾರ್ಯಾಚರಣೆ ಯಶಸ್ವಿಯಾಗಲು ಕಾರಣವಾಯಿತು ಎಂದು ಮಹಾರಾಷ್ಟ್ರ ANTF ಮತ್ತು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಡ್ರಗ್ ಫ್ಯಾಕ್ಟರಿ ದಂಧೆಯಲ್ಲಿ ಸೆರೆಸಿಕ್ಕವರು ಹೊರ ರಾಜ್ಯದವರೇ ಆಗಿದ್ದು, ಅದರ ಮೂಲವನ್ನು ಪತ್ತೆಹಚ್ಚುವಲ್ಲಿ ಎನ್‌ಸಿಬಿ ಅಧಿಕಾರಿಗಳು ಪ್ರಯತ್ನ ಮುಂದುವರಿಸಿದ್ದಾರೆ.

ಬೆಂಗಳೂರು ವ್ಯಾಪ್ತಿಯಲ್ಲಿ ಡ್ರಗ್ ಜಾಲವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ರಹಸ್ಯ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅದರಲ್ಲೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪೊಲೀಸರು ನಿಗಾ ವಹಿಸಿದ್ದಾರೆ. ಬೆಂಗಳೂರು ಪೊಲೀಸರ ಈ ಕಾರ್ಯತಂತ್ರದಿಂದಾಗಿಯೇ ಬೃಹತ್ ಡ್ರಗ್ ಜಾಲ ಖೆಡ್ಡಾಕ್ಕೆ ಬಿದ್ದಿವೆ. ಹೊರ ರಾಜ್ಯಗಳ ಮಾಫಿಯಾದ ಡ್ರಗ್ ಜಾಲವನ್ನು ಬೇಧಿಸುವ ಪ್ರಯತ್ನ ನಡೆದಿರುವಾಗಲೇ ಎನ್‌ಸಿಬಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದರಿಂದ, ಸಹಜವಾಗಿಯೇ ಕಾರ್ಯಾಚರಣೆಯಲ್ಲಿ ಕೇಂದ್ರ ತಂಡದ ನೇತೃತ್ವವು ಕೇಂದ್ರಬಿಂದುವಾಯಿತು ಎನ್ನಲಾಗಿದೆ.

ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Share. Facebook Twitter LinkedIn WhatsApp Email

Related Posts

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

1 Min Read

ಪ್ರಧಾನಿ ಮೋದಿ ಭೇಟಿಯಾದ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್: ಕರ್ನಾಟಕದ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ

1 Min Read

ದೆಹಲಿಯಲ್ಲಿ ತಿಪಟೂರು ಶಾಸಕ ಕೆ. ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ವಿಚಾರಿಸಿದ ಡಿಸಿಎಂ ಜಿ. ಪರಮೇಶ್ವರ್

1 Min Read
Recent News

BREAKING: ​ಚೀನಾದಲ್ಲಿ ಭೀಕರ ಸ್ಫೋಟ: 7 ಮಂದಿ ದುರ್ಮರಣ, 17 ಜನರಿಗೆ ಗಂಭೀರ ಗಾಯ | Explosion in China

‘ಈ ದಾಳಿಗಳು ತಕ್ಷಣ ನಿಲ್ಲಬೇಕು!’: ಅಮೆರಿಕ ರಾಯಭಾರಿಗೆ ಭಾರತದ ‘ಸಮನ್ಸ್ : ಪಶ್ಚಿಮ ಏಷ್ಯಾ ಹಡಗು ದಾಳಿ ವಿರುದ್ಧ ತೀವ್ರ ಆಕ್ರೋಶ!

‘ವಾಣಿಜ್ಯ ಹಡಗುಗಳ ಮೇಲಿನ ನಿರಂತರ ದಾಳಿಗಳು ತೀವ್ರ ಕಳವಳಕಾರಿ’: ಒಮಾನ್ ಕರಾವಳಿ ಬಿಕ್ಕಟ್ಟಿನ ಬಗ್ಗೆ ಭಾರತ ಖಡಕ್ ಎಚ್ಚರಿಕೆ!

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

State News
KARNATAKA

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುವ ಐತಿಹಾಸಿಕ ಗ್ಯಾರಂಟಿ ಯೋಜನೆಗೆ ರಾಜ್ಯ…

ಪ್ರಧಾನಿ ಮೋದಿ ಭೇಟಿಯಾದ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್: ಕರ್ನಾಟಕದ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ

ದೆಹಲಿಯಲ್ಲಿ ತಿಪಟೂರು ಶಾಸಕ ಕೆ. ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ವಿಚಾರಿಸಿದ ಡಿಸಿಎಂ ಜಿ. ಪರಮೇಶ್ವರ್

ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಯೇ ಹೊರತು ಸ್ಥಗಿತ ಇಲ್ಲ; ಮೃತ, ಅನರ್ಹರ ಪತ್ತೆಗಷ್ಟೇ ಕ್ರಮ: ದಿನೇಶ್ ಗೂಳಿಗೌಡ ಸ್ಪಷ್ಟನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.