ಜಾನಪದೀಯ ದಾಟಿಯಲ್ಲಿರುವಂತ ನವೀನ್ ಸಜ್ಜು ಅವರ ಆ ಹಾಡಿಗೆ ನೋಡುಗರು, ಕೇಳುಗರು ಫಿದಾ ಆಗಿದ್ದಾರೆ. ಲೋ ನವೀನ ಚಿತ್ರದ ಕೊಣಾನೆ ಹಾಡಂತೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಎನ್.ಎಸ್ ಸ್ಟೂಡಿಯೋ ಬ್ಯಾನರ್ ಅಡಿಯಲ್ಲಿ ಲೋ ನವೀನ ಚಿತ್ರ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಹಣ ಹೂಡಿರೋದು ನಿರ್ಮಾಪಕ ಕೀರ್ತಿ ಸ್ವಾಮಿ. ಧನುರ್ಧಾರಿ ಪವನ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದೆ.
ಚಿತ್ರ ಬಿಡುಗಡೆಗೂ ಮುನ್ನವೇ ಕೊಣಾನೆ ಹಾಡು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ನೋಡುಗರನ್ನು ಸೆರೆಹಿಡಿದಿದೆ. ನವೀನ್ ಸಜ್ಜು ಬರೆದಿರುವಂತ ಈ ಹಾಡಿಗೆ, ಅವರೇ ಸಂಗೀತ ನಿರ್ದೇಶನ ಕೂಡ ನೀಡಿದ್ದಾರೆ.
ಚಾಮಮ್ಮ, ಲಕ್ಷ್ಮಮ್ಮ, ನವೀನ್ ಸಜ್ಜು ಜೊತೆಗೂಡಿ ಹಾಡಿರುವಂತ ಹಾಡಂತ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಸಖತ್ ಸದ್ದು ಮಾಡಿದೆ. ಚಿತ್ರ ತೆರೆ ಕಂಡ ನಂತ್ರ ಅಷ್ಟೇ ಹಿಟ್ ಮೇಲೆ ಹಿಟ್ ಆಗಲಿ ಎಂಬುದು ನಮ್ಮ ಹಾರೈಕೆಯಾಗಿದೆ. ಆ ಹಾಡು ಕೆಳಗಿದೆ ನೀವು ಕೇಳಿಬಿಡಿ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
ಪೋಷಕರೇ ಗಮನಿಸಿ : ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸುವುದು ಹೇಗೆ.? ಇಲ್ಲಿದೆ ಮಾಹಿತಿ
ಹೊಸ ಮನೆಗೆ ಬಾಗಿಲು ಹಾಕಿಸುವ ಮುನ್ನ ಈ ವಿಚಾರಗಳು ನಿಮ್ಮ ಗಮನದಲ್ಲಿ ಇರಲಿ! ಯಾವ ರಾಶಿಗೆ ಯಾವ ದಿಕ್ಕಿನ ಬಾಗಿಲು ಗೊತ್ತಾ








