ಶಿವಮೊಗ್ಗ: ನವೆಂಬರ್.12, 2024ರಂದು ಸಾಗರದಲ್ಲಿ ಉಡುಪಿಯ ಕಾಪುವಿನಲ್ಲಿರುವಂತ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ವತಿಯಿಂದ ನವದುರ್ಗಾ ಲೇಖನ ಯಜ್ಞ ಸಮಿತಿಯಿಂದ ನವದುರ್ಗಾ ಲೇಖನ ಯಜ್ಞ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಅಂತ ಸಾಗರ ಭಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ತಿಳಿಸಿದ್ದಾರೆ.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಹಳೆಯ ಮಾರಿಗುಡಿಯನ್ನು ಕೆಡವಿ, ಹೊಸ ಮಾರಿಗುಡಿ ದೇವಸ್ಥಾವನ್ನು ಕಟ್ಟಲಾಗುತ್ತಿದೆ. ಸುಮಾರು 30 ಕೋಟಿ ವೆಚ್ಚದಲ್ಲಿ ಹೊಸ ಮಾರಿಗುಡಿ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಫೆಬ್ರವರಿ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ. ಕಾಪು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾಪು ವಾಸುದೇವ ಶೆಟ್ಟಿಯವರು ಕೆಲಸ ಮಾಡುತ್ತಿದ್ದಾರೆ ಎಂದರು.
ಸಾಕಷ್ಟು ದಾನಿಗಳಿಂದ ನೆರವಿನಿಂದ ನಿರ್ಮಾಣವಾಗುತ್ತಿದೆ. ಸುಮಾರು 100 ಕೋಟಿಯ ವೆಚ್ಚದಲ್ಲಿ ಹೊಸ ಮಾರಿಗುಡಿ ದೇವಸ್ಥಾನ ನಿರ್ಮಣ ಮಾಡಲಾಗುತ್ತಿದೆ. ಈ ದೇವಸ್ಥಾನದ ನವದುರ್ಗಾ ಲೇಖನ ಯಜ್ಞ ಸಮಿತಿ ರಚಿಸಲಾಗಿದೆ. ಇದರ ಅಧ್ಯಕ್ಷರಾಗಿ ಭೂಪತಿ ಭಟ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನವಲೇಖಾ ನವತುಂಗಾ ಲೇಖಾ ಯಜ್ಞ ಪುಸ್ತಕ ಯಾಗವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಸಾಗರದ ಶಂಕರಮಠದಲ್ಲಿ ನವೆಂಬರ್.12ರಂದು ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗುತ್ತಿದೆ ಎಂದರು.
ಈ ಸಮಿತಿಯ ಸದಸ್ಯರು ಸಾಗರಕ್ಕೆ ಭೇಟಿ ನೀಡಿ, ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ನಂಜುಂಡಸ್ವಾಮಿ, ಶರ್ಮಾಜಿ, ನಾಗರಾಜ ಬಾಳೆಕಾಯಿ, ಶ್ರೀನಿವಾಸ ಶೆಟ್ಟಿ, ಕುಮಾರ್ ಶೆಟ್ಟಿ, ಶಂಕರ್ ಶೆಟ್ಟಿ ಎಲ್ಲರೂ ಮಾತನಾಡಿ ಎಲ್ಲರೂ ಸೇರಿಕೊಂಡು ಮಾಡಲು ನಿರ್ಧರಿಸಲಾಗಿದೆ. ನಾಡಿದ್ದು ನವೆಂಬರ್.12ರಂದು ಚಿಂತನಾ ಹೆಗಡೆ ಅವರ ಮಹಿಳಾ ಭಾಗವತರ ಯಜ್ಞಗಾನ ಆಯೋಜಿಸಲಾಗಿದೆ. 5.30ರ ನಂತ್ರ ವಾಗೇಶ್ವರಿ ಪೂಜೆ ಆದಮೇಲೆ ಲೇಖನ ಯಜ್ಞ ಸ್ಪರ್ಧೆ ನಡೆಯಲಿದೆ. ಶಶಾಂಕ್ ದೇವಾಡಿಗ ಅವರ ಸ್ಯಾಕ್ಸೋ ಫೋನ್ ವಾದನವನ್ನು ಆಯೋಜಿಸಲಾಗಿದೆ ಎಂದರು.
ಈ ಕಾರ್ಯಕ್ರಮಕ್ಕೆ ಕಾಪು ಹೊಸ ಮಾರಿಗುಡಿ ಸಮಿತಿಯ ಅಧ್ಯಕ್ಷರಾದಂತ ಕೆ.ವಾಸುದೇವಶೆಟ್ಟಿ ಅವರು ಆಗಮಿಸುತ್ತಿದ್ದಾರೆ. ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್, ನವದುರ್ಗ ಲೇಖನಾ ಸಮಿತಿಯ ಕಾರ್ಕಳದ ವಿಜಯ್ ಕುಮಾರ್ ಶೆಟ್ಟಿ, ಕಾಪು ದೇವಸ್ಥಾನಕ್ಕೆ ಸಂಬಂಧಪಟ್ಟಂತ ತಂತ್ರಿಗಳು ಆಗಮಿಸಲಿದ್ದಾರೆ. ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಕೂಡ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದರು.
ವರದಿ: ವಸಂತ ಬಿ ಈಶ್ವರಗೆರೆ
ಉಪ ಚುನಾವಣೆ ಬಳಿಕ ಸಿಎಂ ಸ್ಧಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ: ಬಿವೈ ವಿಜಯೇಂದ್ರ
ಬೆಳಿಗ್ಗೆ ‘ಅರಿಶಿನ ನೀರ’ನ್ನು ಏಕೆ ಕುಡಿಯಬೇಕು? ಹೀಗಿದೆ ಪ್ರಯೋಜನಗಳ ಗುಟ್ಟು | Haldi Water Drinking Benefits