ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ “ನಿಮ್ಮ ಸೈನ್ಯವನ್ನು ತಿಳಿದುಕೊಳ್ಳಿ” ಮತ್ತು “Wall of Heroes” ಉಪಕ್ರಮಗಳನ್ನು ಅಳವಡಿಸಿಕೊಳ್ಳಲು ರಾಷ್ಟ್ರೀಯ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಉಲ್ಲೇಖ-1ರ ಪತ್ರದಲ್ಲಿ Defence Force League, DIFT Foundation, Pune, Maharashtra (Proposal for Association with ” Know your Army-National Quiz” and “Wall of Heroes” Initiatives & Invitation to become Ambassador for “Know Your Army” Mission) ನಂತೆ ಸಾರ್ವಜನಿಕರು, ವಿಶೇಷವಾಗಿ ಯುವಕರಲ್ಲಿ ನಮ್ಮ ದೇಶದ ಸಶಸ್ತ್ರ ಪಡೆಗಳ ಬಗ್ಗೆ ಆಳವಾದ ತಿಳುವಳಿಕೆ ಮತ್ತು ಮೆಚ್ಚುಗೆಯನ್ನು ಬೆಳೆಸಲು ಹಾಗೂ ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಹುಟ್ಟುಹಾಕಲು ರಸಪ್ರಶ್ನೆ ಎಂಬ ರಾಷ್ಟ್ರೀಯ ಉಪಕ್ರಮಗಳನ್ನು ಬ್ರೆನ್ಪಲ್ಸ್ Al ಫಾರ್ಮ್ನಲ್ಲಿ National Level Quiz – “Know your Army” ಮತ್ತು ಭಾರತಾಧ್ಯಂತ ಶಾಲೆಗಳಲ್ಲಿ ತೊಡಗಿಸಿಕೊಳ್ಳಲು ವಿನ್ಯಾಸಗೊಳಿಸಲಾದ “Wall of Heroes” ಯೋಜನೆ ಕೈಗೊಳ್ಳುವುದಾಗಿದೆ.
ಹಾಗೂ ಉಲ್ಲೇಖ-2 ರ ಪತ್ರದಲ್ಲಿ ಸೈನ್ಯದಲ್ಲಿ ರಾಷ್ಟ್ರ ನಾಯಕತ್ವದಲ್ಲಿ, ಶಿಕ್ಷಣ, ರಕ್ಷಣೆ, ತಂತ್ರಜ್ಞಾನ, ಶೌರ್ಯ-ಸಾಹಸ, ಮತ್ತು ಇತರೆ ವಿವಿಧ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆ ಸ್ಫೂರ್ತಿದಾಯಕವಾಗಿದೆ ಎಂದು ಸ್ಮರಿಸುವುದಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಜ್ಞಾನವನ್ನು ಹುಟ್ಟುಹಾಕಲು ಕೈಗೊಂಡಿರುವ ಸದರಿ ಸಂಸ್ಥೆಯ ಕಾರ್ಯಕ್ರಮಕ್ಕೆ ಅಗತ್ಯ ಸೂಕ್ತ ಸಹಕಾರ ನೀಡುವಂತೆ ತಿಳಿಸಿ, ಉಲ್ಲೇಖಿತ ಪತ್ರಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ, ತಮ್ಮ ಹಂತದಲ್ಲಿ ಅಗತ್ಯ ಕ್ರಮವಹಿಸಲು ಸೂಚಿಸಿದೆ.
