ಮೈಸೂರು: ನಾನು ನ್ಯಾಷನಲ್ ಲೀಡರ್ ಅಂತ ಹೇಳಿಲ್ಲ. ಅಪ್ಪನ ನೆಲೆ ಬಿಡಿಸಿ ಬಾದಾಮಿ ಕ್ಷೇತ್ರಕ್ಕೆ ಓಡಿಸುವವರು ನ್ಯಾಷನಲ್ ಲೀಡರ್. ಸಿಎಂ ಮೇಲೆ ಒತ್ತಡ ತರೋರು ನ್ಯಾಷನಲ್ ಲೀಡರ್ ಅಂತ ಡಾ.ಯತೀಂದ್ರ ಟೀಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಇಂದು ನಗರದಲ್ಲಿ ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ? ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಟೀಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು. ಅಲ್ಲದೇ ಖಂಡಿತ ನಾನು ನ್ಯಾಷನಲ್ ಲೀಡರ್ ಅಲ್ಲ. ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದು ಬರವಣಿಗೆ ಮೂಲಕ ಹೆಸರು ಸಂಪಾದಿಸಿ ಈ ಸ್ಥಾನಕ್ಕೆ ಬಂದಿದ್ದೇನೆ. ಅಪ್ಪ ಸಿಎಂ ಆಗಿದ್ದರೆ ತನ್ನ ಖಾಸಗಿ ಲ್ಯಾಬ್ ಗೆ ಗುತ್ತಿಗೆ ಪಡೆದು ಕೊಳ್ಳುವಂತವರು ನ್ಯಾಷನಲ್ ಲೀಡರ್ ಎಂದು ಗುಡುಗಿದರು.
ಅಪ್ಪನ ನೆಲೆ ಬಿಡಿಸಿ ಬದಾಮಿ ಕ್ಷೇತ್ರಕ್ಕೆ ಓಡಿಸುವವರು ನ್ಯಾಷನಲ್ ಲೀಡರ್ ಆಗಿದ್ದಾರೆ. ತಾನು ಹೇಳಿದ ವರ್ಗಾವಣೆ ಲಿಸ್ಟ್ ಗೆ ಸಹಿ ಮಾಡಿ ಅಂತಾ ಸಿಎಂ ಮೇಲೆ ಒತ್ತಡ ತರುವವರು ನ್ಯಾಷನಲ್ ಲೀಡರ್ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಮೈಸೂರು ಭಾಗದ ನಿಜವಾದ ನ್ಯಾಷನಲ್ ಲೀಡರ್ ಯತೀಂದ್ರ ಸಿದ್ದರಾಮಯ್ಯ ಆಗಿದ್ದಾರೆ ಎನ್ನುವ ಮೂಲಕ ಯತೀಂದ್ರ ಸಿದ್ದರಾಮಯ್ಯಗೆ ಸಂಸದ ಪ್ರತಾಪಸಿಂಹ ಟಾಂಗ್ ನೀಡಿದರು.
BIG Alert: ‘ವಾಹನ ಸವಾರ’ರ ಗಮನಕ್ಕೆ: ಜ.16ರಿಂದ ಮತ್ತೆ 4 ದಿನ ಬೆಂಗಳೂರಿನ ‘ಪೀಣ್ಯ ಫ್ಲೈ ಓವರ್ ಕ್ಲೋಸ್’
BREAKING: ‘ಸ್ವಂತ ಮಗ’ನನ್ನೇ ಕೊಂದ ಪ್ರಕರಣ: ‘ಸಿಇಓ ಸುಚನಾ’ 6 ದಿನ ಗೋಪಾ ಪೊಲೀಸರ ಕಸ್ಟಡಿಗೆ