ಶಿವಮೊಗ್ಗ: ಸಾಗರದ ಪರಿಣಿತಿ ಕಲಾಕೇಂದ್ರ(ರಿ)ಯಿಂದ 10ನೇ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತ ಮಹೋತ್ಸವವನ್ನು ನವೆಂಬರ್.23, 24ರಂದು ಆಯೋಜಿಸಲಾಗಿದೆ.
ಈ ಬಗ್ಗೆ ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಪರಿಣಿತಿ ಕಲಾ ಕೇಂದ್ರದ ಪ್ರೋಗ್ರಾಂ ಡೈರೆಕ್ಟರ್ ವಿದ್ವಾನ್ ಎಂ.ಗೋಪಾಲ್ ಅವರು, ದಿನಾಂಕ 23-11-2024 ಮತ್ತು 24-11-2024ರಂದು ಎರಡು ದಿನ 10ನೇ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತ ಮಹೋತ್ಸವ 2024 ಆಯೋಜಿಸಲಾಗಿದೆ. ಸಾಗರದ ಗಾಂಧಿ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ವಾದ್ಯಗಳನ್ನು ನುಡಿಸುವುದು, ರಾಜ್ಯ, ಹೊರ ರಾಜ್ಯಗಳ ಕಲಾವಿಧರಿಂದ ಕಲಾ ಪ್ರದರ್ಶನ ಕೂಡ ಆಯೋಜಿಸಲಾಗಿದೆ ಎಂದು ಹೇಳಿದರು.
ದಿನಾಂಕ 23-11-2024ರಂದು ಸಂಜೆ 5 ಗಂಟೆಗೆ ಸಾಗರದ ಗಾಂಧಿ ಮೈದಾನದಲ್ಲಿನ ಕಾರ್ಯಕ್ರಮವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಬೆಂಗಳೂರಿನ ಹಿರಿಯ ಸಂಗೀತ ವಿದ್ವಾನ್ ಕರ್ನಾಟಕ ಕಲಾಶ್ರೀ ವಿ.ಆನೂರು ಆರ್ ಅನಂತಕೃಷ್ಣ ಶರ್ಮ ಅವರು ಉದ್ಘಾಟಿಸಲಿದ್ದಾರೆ. ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷರಾದಂತ ವೀಣಾ ಬೆಳೆಯೂರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ, ಖ್ಯಾತ ಉದ್ಯಮಿ ಟಿವಿ ಪಾಂಡುರಂಗ, ಎಸ್ ಡಿ ವೀರಪ್ಪ, ಜೋಷಿ ಫೌಂಡೇಶನ್ ಅಧ್ಯಕ್ಷರು, ನಂ ಸಮಾಚಾರ ಪಾಕ್ಷಿಕ ಪತ್ರಿಕಾ ಬಳಗದ ಅಬಸೆ ದಿನೇಶ್ ಕುಮಾರ್ ಎನ್ ಜೋಷಿ, ಬೆಂಗಳೂರಿನ ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗದ ನಿರ್ದೇಶಕರು, ಸಾಗರ ತಾಲ್ಲೂಕು ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದಂತ ಕೆ.ಸಿದ್ದಪ್ಪ, ಪರಿಣಿತಿ ಕಲಾ ಕೇಂದ್ರದ ಅಧ್ಯಕ್ಷರಾದಂತ ಸೋಮಶೇಖರ್ ಹಾಜರಿರಲಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಹಿರಿಯ ಪತ್ರಕರ್ತ ಮಾ.ಸ ನಂಜುಂಡಸ್ವಾಮಿ ನುಡಿಯಲಿದ್ದಾರೆ. ಇದೇ ಸಂದರ್ಭದಲ್ಲಿ ಪರಿಣಿತಿ ಪ್ರಶಸ್ತಿಯನ್ನು ಶುಂಠಿ ಸತ್ಯನಾರಾಯಣ ಭಟ್, ಗಜೇಂದ್ರ ಸಾಗರ್, ಗಿರೀಶ್ ಆರ್, ಕೆಆರ್ ಕೃಷ್ಣಯ್ಯ, ಕೃಷ್ಣಮೂರ್ತಿ ಆಚಾರ್, ಸತೀಶ್ ಆರ್, ಮಡಿವಾಳಯ್ಯ ಸಾಲಿ, ಎಂ.ನಾಗರಾಜ್, ನಿತೀಶ್ರೀ ಪ್ರಕಾಶ್ ಹಾಗೂ ರಘುನಂದನ್ ಪುರೋಹಿತ್ ಅವರಿಗೆ ನೀಡಿ ಸನ್ಮಾನಿಸಲಾಗುತ್ತದೆ ಎಂದರು.
ದಿನಾಂಕ 24-11-2024ರಂದು ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ ಸಮಿತಿಯ ಅಧ್ಯಕ್ಷರಾದಂತ ಅರುಣ್ ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಗರ ಕ್ಷೇತ್ರದ ಮಾಜಿ ಶಾಸಕ ಹೆಚ್.ಹಾಲಪ್ಪ ಹರತಾಳು, ಸಾಗರ ಉಪ ವಿಭಾಗಾಧಿಕಾರಿ ಯತೀಶ್.ಆರ್, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್ ಛಲವಾದಿ, ಸಾಗರ ನಗರಸಭೆ ಸದಸ್ಯ ಟಿ.ಡಿ ಮೇಘರಾಜ್, ಗಣೇಶ್ ಪ್ರಸಾದ್, ಅಪ್ ಕೋಸ್ ಅಧ್ಯಕ್ಷ ಬಿಎ ಇಂದೂಧರ ಗೌಡ್ರು, ವಿಠಲ ಪೈ ಹೆಗ್ಗೋಡು, ಮಾರಿಕಾಂಬ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ನಾಗೇಂದ್ರ ಅವರು ಹಾಜರಿರಲಿದ್ದಾರೆ ಎಂದರು.
ಏನೆಲ್ಲಾ ಕಾರ್ಯಕ್ರಮ ಆಯೋಜನೆ.?
ಮೊದಲ ದಿನದ ರಾಷ್ಟ್ರೀಯ ನೃತ್ಯ ಸಂಗೀತ ಮಹೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದ್ವಾನ್ ಅನೂರ್ ಆರ್ ಅನಂತ ಕೃಷ್ಣ ಶರ್ಮಾ ಮತ್ತು ಸಂಗಡಿಗರಿಂದ ಲಯ ಲಾವಣ್ಯ ಎನ್ನುವಂತ ವಿವಿಧ ಸಂಗೀತ ವಾದ್ಯಗಳ ಜುಗಲ್ ಬಂದಿ ನಡೆಯಲಿದೆ. ಆ ಬಳಿಕ ಬೆಂಗಳೂರಿನ ನಾಟ್ಯಶ್ರೀ ಸ್ಕೂಲ್ ಆಫ್ ಡ್ಯಾನ್ಸ್ ಅವರಿಂದ ಭರತ ನಾಟ್ಯ ಮತ್ತು ಜಾನಪದ ನೃತ್ಯ ಕಾರ್ಯಕ್ರಮವಿದೆ. ಮುಂಬೈನ ಥಾಣೆಯ ಮುಕ್ತ ಜೋಶಿ ಗ್ರೂಪ್ ನಿಂದ ಲಾವಣಿ ಮತ್ತು ಕಥಕ್ ನೃತ್ಯಧಾರ ನೋಡುಗರನ್ನು ಸೆಳೆಯಲಿದೆ.
ಎರಡನೇ ದಿನದಂದು ಮುಂಬೈನ ದೊಂಬಿವಲಿಯ ಪವಿತ್ರ ಆರ್ಟ್ ವಿಶ್ಯೂಯಲ್ ಇನ್ಟಿಟ್ಯೂಟ್ ನಿಂದ ಭರತ ನಾಟ್ಯ ಪ್ರದರ್ಶನಗೊಳ್ಳಲಿದೆ. ಗುಜರಾತ್ ನ ರಂಗುಬಾಯಿ ಮತ್ತು ರಥ್ವ ಗ್ರೂಪ್ ನಿಂದ ರಥ್ವ ಡ್ಯಾನ್ಸ್ ಕಣ್ಮನ ಸೆಳೆಯಲಿದೆ. ನಂತ್ರ ಪಂಜಾಬಿನ ಪಾಟಿಯಾಲದ ಪಂಜಾಬಿ ಪೋಕ್ ಕಲಾ ಮಂಚ ಕ್ಲಬ್ ನಿಂದ ಭಾಂಗ್ರ ಮತ್ತು ಗಿಡ್ಡ ಡಬ್ಸ್ ನಡೆಯಲಿದೆ. ಈ ಬಳಿಕ ಮಹಾರಾಷ್ಟ್ರದ ನವಿ ಮುಂಬೈಯಿಯ ಐ ಏಕ್ವಿರ ಸಾಂಸ್ಕೃತಿಕ ಕಲಾಮಂಚದಿಂದ ಕೋಲಿ ಡ್ಯಾನ್ಸ್ ಮತ್ತು ಲಾವಣಿ ಪ್ರದರ್ಶನ ಏರ್ಪಡಿಸಲಾಗಿದೆ.
ಇಂದಿನ ಪರಿಣಿತಿ ಕಲಾಕೇಂದ್ರದಿಂದ ನಡೆಸಲಾದಂತ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದಂತ ಅರುಣ್ ಕುಮಾರ್, ಸಂಚಾಲಕರು ಹಾಗೂ ನಗರಸಭಾ ಸದಸ್ಯೆ ಮೈತ್ರಿ ಪಾಟೀಲ್, ಸಂಚಾಲಕರಾದಂತ ಶ್ವೇತಾ ಗೋಪಾಲ್ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ