ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ ಸೋಮವಾರ ತನ್ನ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ.
ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ನೇತೃತ್ವದ ಪಕ್ಷವು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ರದ್ದುಪಡಿಸುವುದು, 1 ಲಕ್ಷ ಉದ್ಯೋಗಗಳು, ಇಡಬ್ಲ್ಯೂಎಸ್ ವರ್ಗಕ್ಕೆ 6 ಉಚಿತ ಸಿಲಿಂಡರ್ಗಳು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ನೀಡಿದೆ.
ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವುದು, ಕಾಶ್ಮೀರಿ ಪಂಡಿತರನ್ನು ಗೌರವಯುತವಾಗಿ ಹಿಂದಿರುಗಿಸುವ ಬದ್ಧತೆ, ಪಾಸ್ಪೋರ್ಟ್ ಪರಿಶೀಲನೆಯನ್ನ ಸುಲಭಗೊಳಿಸುವುದು, ಅನ್ಯಾಯದ ವಜಾಗಳನ್ನ ಕೊನೆಗೊಳಿಸುವುದು ಮತ್ತು ಹೆದ್ದಾರಿಗಳಲ್ಲಿ ಜನರಿಗೆ ಅನಗತ್ಯ ಕಿರುಕುಳವನ್ನ ನಿಲ್ಲಿಸುವುದಾಗಿ ಪಕ್ಷ ಭರವಸೆ ನೀಡಿದೆ.
ಖಾತರಿಗಳು.!
1) ಪಿಎಸ್ಎ ರದ್ದು
2) ರಾಜಕೀಯ ಕೈದಿಗಳ ಬಿಡುಗಡೆ
3) ಕಾಶ್ಮೀರಿ ಪಂಡಿತರ ಗೌರವಯುತ ವಾಪಸಾತಿಗೆ ಬದ್ಧ
4) ಪಾಸ್ಪೋರ್ಟ್ ಪರಿಶೀಲನೆ ಸುಲಭ
5) ಅನ್ಯಾಯದ ವಜಾಗಳನ್ನು ಕೊನೆಗೊಳಿಸುವುದು
6) ಹೆದ್ದಾರಿಗಳಲ್ಲಿ ಜನರಿಗೆ ಅನಗತ್ಯ ಕಿರುಕುಳವನ್ನ ನಿಲ್ಲಿಸಲಾಗುವುದು
1)Provide 1 lac jobs to youth.
2)J&K Youth Employment Generation Act to be passed within three months.
3) Provide 6 cylinders free of cost to EWS.
4) Women entitled to free travel in all public transport.
5) Enhance marriage assistance.
6) Increase the medical allowance of…— JKNC (@JKNC_) August 19, 2024
ಹಿರಿಯ ನಾಯಕರ ಸಮ್ಮುಖದಲ್ಲಿ NC ನಾಯಕ ಒಮರ್ ಅಬ್ದುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
90 ಸದಸ್ಯರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಹೊರಬೀಳಲಿದೆ.
BREAKING : ಕುಸ್ತಿಪಟು ‘ವಿನೇಶ್ ಫೋಗಟ್’ಗೆ ‘ಚಿನ್ನದ ಪದಕ’ ನೀಡಲು ‘ಹರ್ಯಾಣ ಖಾಪ್ಸ್’ ನಿರ್ಧಾರ : ವರದಿ
BREAKING :ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ :’ರಿಟ್’ ಅರ್ಜಿ ವಿಚಾರಣೆ ಆ.29ರವರೆಗೆ ಮುಂದೂಡಿ ಹೈಕೋರ್ಟ್ ಸೂಚನೆ